Toxic Collection: ಮೊದಲ ದಿನವೇ 140 ಕೋಟಿ ರೂ. ಗಳಿಸಿದ ‘ಟಾಕ್ಸಿಕ್’; ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ

Toxic Box Office Collection Day 1: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ ₹140.75 ಕೋಟಿ ಗಳಿಸಿ ಧೂಳೆಬ್ಬಿಸಿದೆ. ಭಾರತದಲ್ಲೇ ₹101.10 ಕೋಟಿ ನೆಟ್ ಕಲೆಕ್ಷನ್ ಆಗಿದ್ದು, ಮೂಲ ಕನ್ನಡ ಆವೃತ್ತಿಗಿಂತ ಹಿಂದಿ ಭಾಷೆಯಲ್ಲೇ ಡಬಲ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ.ಕಲೆಕ್ಷನ್ ವಿವರದ ಬಗ್ಗೆ ಇಲ್ಲಿದೆ ಮಾಹಿತಿ.

Toxic  Collection: ಮೊದಲ ದಿನವೇ 140 ಕೋಟಿ ರೂ. ಗಳಿಸಿದ ‘ಟಾಕ್ಸಿಕ್’; ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ
ಯಶ್

Updated on: Aug 27, 2026 | 7:03 AM

ಮುಖ್ಯಾಂಶಗಳು

  • ಮೊದಲ ದಿನವೇ ಬಿರುಗಾಳಿ ಎಬ್ಬಿಸಿದ 'ಟಾಕ್ಸಿಕ್'
  • ವಿಶ್ವದಾದ್ಯಂತ 140 ಕೋಟಿ ರೂ. ಕಲೆಕ್ಷನ್
  • ಕನ್ನಡಕ್ಕಿಂತ ಹಿಂದಿಯಲ್ಲೇ ಭರ್ಜರಿ ಕ್ರೇಜ್

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ (Toxic Movie) ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಸುನಾಮಿ ಎಬ್ಬಿಸಿದೆ. ಓಣಂ ಹಾಗೂ ಈದ್ ಮಿಲಾದ್ ಹಬ್ಬದ ರಜಾದಿನಗಳ ಸಂದರ್ಭದಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾದ ಈ ಚಿತ್ರ, ಪ್ರೇಕ್ಷಕರಿಂದ ಭರ್ಜರಿ ಪ್ರಶಂಸೆ ಗಿಟ್ಟಿಸಿಕೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.ಈ ಚಿತ್ರದ ಒಟ್ಟೂ ಕಲೆಕ್ಷನ್ ಮೊದಲ ದಿನವೇ 140 ಕೋಟಿ ರೂಪಾಯಿ ಆಗಿದೆ.

ಚಿತ್ರವು ಮೊದಲ ದಿನವೇ ಭಾರತದಲ್ಲಿ ಬೃಹತ್ ಕಲೆಕ್ಷನ್ ಮಾಡಿದೆ. ಈ ಚಿತ್ರದ ಒಟ್ಟು ಗಳಿಕೆ 101.10 ಕೋಟಿ ರೂಪಾಯಿ. ಭಾರತದಾದ್ಯಂತ 24,579 ಪ್ರದರ್ಶನಗಳನ್ನು ಕಂಡ ಈ ಸಿನಿಮಾ, ಒಟ್ಟು 120.75 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಚಿತ್ರಮಂದಿರಗಳಲ್ಲಿದ್ದ ಭಾರಿ ಜನಸ್ತೋಮವು ಯಶ್ ಅವರ ಮಾಸ್ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಈ ಕಲೆಕ್ಷನ್‌ನ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಹಿಂದಿ ಆವೃತ್ತಿಯ ಗಳಿಕೆಯು ಮೂಲ ಕನ್ನಡ ಆವೃತ್ತಿಗಿಂತ ಡಬಲ್ ಕಲೆಕ್ಷನ್ ಮಾಡಿದೆ. ಹಿಂದಿ ವರ್ಷನ್ ಮೊದಲ ದಿನವೇ 55.00 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಕನ್ನಡ ಆವೃತ್ತಿಯು 23.30 ಕೋಟಿ ಗಳಿಸಿದೆ. ಹಿಂದಿ ಮಾರುಕಟ್ಟೆಯಲ್ಲಿ ಸಿಕ್ಕ ಬೃಹತ್ ಪ್ರದರ್ಶನಗಳು ಈ ಭಾರಿ ಗಳಿಕೆಗೆ ಪ್ರಮುಖ ಕಾರಣ.

ಇನ್ನುಳಿದಂತೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ‘ಟಾಕ್ಸಿಕ್’ ಉತ್ತಮ ಪ್ರದರ್ಶನ ನೀಡಿದೆ. ತೆಲುಗಿನಲ್ಲಿ 16.00 ಕೋಟಿ ರೂಪಾಯಿ, ತಮಿಳಿನಲ್ಲಿ 5.50 ಕೋಟಿ ರೂಪಾಯಿ ಹಾಗೂ ಮಲಯಾಳಂನಲ್ಲಿ 1.30 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಭಾಷೆಯ ಗಡಿ ದಾಟಿ ಭಾರತದಾದ್ಯಂತ ಪ್ರೇಕ್ಷಕರು ಚಿತ್ರವನ್ನು ಅದ್ದೂರಿಯಾಗಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Toxic Movie Review: ಆರಂಭದಿಂದ ಅಂತ್ಯದ ತನಕ ಆ್ಯಕ್ಷನ್ ಅಬ್ಬರದ ‘ಟಾಕ್ಸಿಕ್’

ವಿದೇಶಿ ಮಾರುಕಟ್ಟೆಯಲ್ಲೂ ‘ಟಾಕ್ಸಿಕ್’ ಅಬ್ಬರ ಜೋರಾಗಿದ್ದು, ಮೊದಲ ದಿನವೇ 20.00 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಚಿತ್ರದ ಮೊದಲ ದಿನದ ಒಟ್ಟು ವಿಶ್ವದಾದ್ಯಂತದ ಗಳಿಕೆಯು 140.75 ಕೋಟಿಗೆ ತಲುಪಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಬಾಕ್ಸ್ ಆಫೀಸ್ ಸದ್ದು ಮಾಡುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us