ಮಗ ಮೃತಪಟ್ಟ ಆಘಾತದಲ್ಲಿದ್ದೇನೆ ಎಂದ ನಟಿ ತ್ರಿಷಾ ಕೃಷ್ಣನ್
Trisha Krishnan: ಪುನೀತ್ ಜೊತೆ ಕನ್ನಡದ ‘ಪವರ್’ ಸಿನಿಮಾದಲ್ಲಿ ನಟಿಸಿರುವ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಅವರ ಮಗ ನಿಧನ ಹೊಂದಿದ್ದಾನೆ. ಹೀಗೆಂದು ಸ್ವತಃ ತ್ರಿಷಾ ಕೃಷ್ಣನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಖುದ್ದು ತ್ರಿಷಾ ಕೃಷ್ಣನ್ ಮತ್ತು ಅವರ ಕುಟುಂಬ ತೀವ್ರ ಶಾಕ್ನಲ್ಲಿದೆಯಂತೆ. ಸಹ ನಟಿಯರು ತ್ರಿಷಾಗೆ ಸಮಾಧಾನ ಹೇಳಿದ್ದಾರೆ.
ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಚಿತ್ರರಂಗಕ್ಕೆ ಕಾಲಿರಿಸಿ ಎರಡು ದಶಕವಾಗಿದ್ದರೂ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಯಾವುದೇ ವಿವಾದಗಳಿಗೆ ಈಡಾಗದೆ, ಸಿನಿಮಾಗಳಲ್ಲಿ ಅತಿಯಾಗಿ ಗ್ಲಾಮರ್ ಪ್ರದರ್ಶಿಸದೆ, ಇತರೆ ನಟಿಯರಂತೆ ನಂಬರ್ 1 ಸ್ಥಾನಕ್ಕೆ ಪೈಪೋಟಿ ಮಾಡದೆ ತಮ್ಮ ಪಾಡಿಗೆ ತಾವು ಸಿನಿಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ ತ್ರಿಷಾ. ಆದರೆ ಅವರ ಮನೆಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ತ್ರಿಷಾ ಅವರೇ ಹೇಳಿಕೊಂಡಿರುವಂತೆ ಅವರ ಮಗ ನಿಧನ ಹೊಂದಿದ್ದಾನೆ. ಇದರಿಂದ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಸುದ್ದಿ ಓದಿದ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಅಂದಹಾಗೆ ತ್ರಿಷಾ ಹೇಳುತ್ತಿರುವಂತೆ ನಿಧನ ಹೊಂದಿರುವ ಮಗ ಅವರ ಪ್ರೀತಿಯ ನಾಯಿ ಜೊರ್ರೊ. ತ್ರಿಷಾ ಕೃಷ್ಣನ್ ನಾಯಿ ಪ್ರೇಮಿ. ಅವರು ಜೊರ್ರೊ ಹೆಸರಿನ ನಾಯಿ ಸಾಕಿಕೊಂಡಿದ್ದರು. ಆ ನಾಯಿ ಕ್ರಿಸ್ಮಸ್ ದಿನ ಮುಂಜಾನೆ ಸಾವನ್ನಪ್ಪಿದೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ತ್ರಿಷಾ, ‘ನನ್ನನ್ನು ಬಲ್ಲವರಿಗೆ ಗೊತ್ತು ನನಗೆ ಜೊರ್ರೊ ಬಗ್ಗೆ ಅದೆಷ್ಟು ಪ್ರೀತಿ ಇತ್ತು ಎಂದು. ಜೊರ್ರೊ ಕಳೆದುಕೊಂಡ ಬಳಿಕ ಇನ್ನು ಮುಂದಿನ ನನ್ನ ಜೀವನಕ್ಕೆ ಅರ್ಥವೇ ಇಲ್ಲ. ಈ ದುರ್ಘಟನೆಯಿಂದ ನಾನು ಮತ್ತು ನನ್ನ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದ್ದೇವೆ. ನಾನು ಕೆಲ ದಿನಗಳ ಕಾಲ ಕೆಲಸದಿಂದ, ಸಮಾಜದಿಂದ ದೂರ ಇರಲಿದ್ದೇನೆ’ ಎಂದಿದ್ದಾರೆ ತ್ರಿಷಾ.
ಇದನ್ನೂ ಓದಿ:20 ವರ್ಷಗಳ ಬಳಿಕ ಸ್ಟಾರ್ ನಟನೊಟ್ಟಿಗೆ ಮತ್ತೆ ನಟಿಸುತ್ತಿರುವ ತ್ರಿಷಾ ಕೃಷ್ಣನ್
ತ್ರಿಷಾ ಕೃಷ್ಣನ್ ಜೊರ್ರೊ ಹೆಸರಿನ ನಾಯಿಯನ್ನು ಸಾಕಿಕೊಂಡಿದ್ದರು. 2012 ರಲ್ಲಿ ಜನಿಸಿದ್ದ ನಾಯಿ 2024ರ ಕ್ರಿಸ್ಮಸ್ ದಿನ ನಿಧನ ಹೊಂದಿದೆ. ತ್ರಿಷಾ ಕೃಷ್ಣನ್ ಮತ್ತೊಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ನಾಯಿಯ ಚಿತ್ರಗಳನ್ನು ಹಾಗೂ ತಮ್ಮ ಮುದ್ದಿನ ನಾಯಿಯ ಸಮಾಧಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ತ್ರಿಷಾ ಅವರ ಪೋಸ್ಟ್ಗೆ ನಟಿಯರಾದ ಹನ್ಸಿಕಾ, ಶ್ರೆಯಾ ಇನ್ನೂ ಕೆಲವು ನಟಿಯರು ಸೆಲೆಬ್ರಿಟಿಗಳು ತ್ರಿಷಾರ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದು, ತ್ರಿಷಾಗೆ ಸಮಾಧಾನ ಹೇಳುವ ಜೊತೆಗೆ ಜೊರ್ರೊಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
View this post on Instagram
ತ್ರಿಷಾ ಕೃಷ್ಣನ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂ ಸಿನಿಮಾ ‘ಐಡೆಂಟಿಟಿ’, ತಮಿಳಿನಲ್ಲಿ ಸ್ಟಾರ್ ನಟ ಅಜಿತ್ ನಟನೆಯ ‘ವಿದುಮಯುರ್ಚಿ’, ‘ಗುಡ್ ಬ್ಯಾಡ್ ಅಗ್ಲಿ’, ನಟ ಚಿರಂಜೀವಿ ಜೊತೆಗೆ ‘ವಿಶ್ವಂಭರ’, ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’, ಸೂರ್ಯ ನಟನೆಯ 45ನೇ ಸಿನಿಮಾ, ಮೋಹನ್ಲಾಲ್ ನಟನೆಯ ‘ರಾಮ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Thu, 26 December 24