AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರು ಹನಿಮೂನ್​ ಕೂಡ ಪ್ಲ್ಯಾನ್ ಮಾಡಲಿ’; ಮದುವೆ ವದಂತಿಗೆ ತ್ರಿಷಾ ಸ್ಪಷ್ಟನೆ

Trisha Krishnan: ನಟಿ ತ್ರಿಷಾ ಕೃಷ್ಣನ್ ವಿವಾಹದ ಬಗ್ಗೆ ಕೆಲ ದಿನಗಳಿಂದಲೂ ಸುದ್ದಿ ಹರಿದಾಡುತ್ತಿದೆ. ತ್ರಿಷಾ, ಉದ್ಯಮಿಯೊಬ್ಬರನ್ನು ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಸುದ್ದಿಗಳು ತ್ರಿಷಾ ಅವರಿಗೆ ಬೇಸರ ತಂದಿವೆ. ಯಾರು ತಮ್ಮ ಮದುವೆ ಕುರಿತು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆಯೋ ಅವರನ್ನುದ್ದೇಶಿಸಿ ತ್ರಿಷಾ ಕೃಷ್ಣನ್ ಮಾತನಾಡಿದ್ದಾರೆ.

‘ಅವರು ಹನಿಮೂನ್​ ಕೂಡ ಪ್ಲ್ಯಾನ್ ಮಾಡಲಿ’; ಮದುವೆ ವದಂತಿಗೆ ತ್ರಿಷಾ ಸ್ಪಷ್ಟನೆ
Trisha Krishnan
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 11, 2025 | 9:03 PM

Share

2000ರಲ್ಲಿ ‘ಮಿಸ್ ಚೆನ್ನೈ’ ಪ್ರಶಸ್ತಿ ಗೆದ್ದ ತ್ರಿಷಾ, ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಂತರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಅವರು ಈಗ ಬೇಡಿಕೆಯ ನಟಿ ಆಗಿದ್ದಾರೆ. ಅವರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ಮದುವೆ ವಿಚಾರ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಈಗ ಅವರು ವಿವಾಹದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ತ್ರಿಶಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಚಂಡೀಗಢದ ಉದ್ಯಮಿಯನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಡಿತು. ಬಹುತೇಕ ಎಲ್ಲಾ ಸುದ್ದಿ ಸಂಸ್ಥೆಗಳು ಈ ಬಗ್ಗೆ ವರದಿ ಮಾಡಿದ್ದವು. ಸಾಮಾನ್ಯವಾಗಿ ತ್ರಿಷಾ ಈ ವಿಚಾರಗಳಿಗೆ ಸ್ಪಷ್ಟನೆ ನೀಡೋಕೆ ಹೋಗೋದಿಲ್ಲ. ಆದರೆ, ಅವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ತ್ರಿಷಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಅವರು ಖಡಕ್ ಆಗಿ ಉತ್ತರಿಸಿದ್ದಾರೆ. ‘ಕೆಲವರು ನನ್ನ  ಜೀವನದ ಬಗ್ಗೆ ಪ್ಲ್ಯಾನ್ ಮಾಡಲು ಇಷ್ಟಪಡುತ್ತಾರೆ. ಅವರು ನನ್ನ ಹನಿಮೂನ್ ಅನ್ನು ಸಹ ಯೋಜಿಸುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ತ್ರಿಶಾ ತಮ್ಮ ಮದುವೆಯ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.

ಇದನ್ನೂ ಓದಿ:ತಮಿಳುನಾಡು ದೇವಾಲಯಕ್ಕೆ ರೋಬೊ ಆನೆ ಉಡುಗೊರೆ ಕೊಟ್ಟ ತ್ರಿಷಾ ಕೃಷ್ಣನ್

ತ್ರಿಷಾ ಸುಮಾರು 20 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಪ್ರಮುಖ ನಾಯಕಿಯಾಗಿದ್ದಾರೆ. ಅವರ ಅಭಿಮಾನಿಗಳು ಅವರನ್ನು ತುಂಬಾನೇ ಇಷ್ಟಪಡುತ್ತಾರೆ. ಅವರು ಪ್ರಸ್ತುತ ಸೂರ್ಯ ಜೊತೆ ‘ಕರುಪ್ಪು’ ಮತ್ತು ತೆಲುಗಿನಲ್ಲಿ ಚಿರಂಜೀವಿ ಜೊತೆ ‘ವಿಶ್ವಂಬರ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ನಿರ್ಮಾಪಕ ವರುಣ್ ಮಣಿಯನ್ ಜೊತೆ ತ್ರಿಷಾ 2014ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಕೆಲವು ಕಾರಣಗಳಿಂದ ಅವರ ಮದುವೆ ನಡೆಯಲಿಲ್ಲ. ಇದಕ್ಕೆ ಅವರು ಯಾವುದೇ ವಿವರಣೆಯನ್ನು ನೀಡಲಿಲ್ಲ. ಈ ಪರಿಸ್ಥಿತಿಯಲ್ಲಿ ಅವರ ಮದುವೆಯ ಬಗ್ಗೆ ಮತ್ತೆ ವದಂತಿಗಳು ಹರಡುತ್ತಿವೆ.

ತ್ರಿಷಾ ಅವರ ಕೊನೆಯ ಚಿತ್ರ ‘ಥಗ್ ಲೈಫ್’. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಕಮಲ್ ಹಾಸನ್, ಸಿಲಂಬರಸನ್, ಅಭಿರಾಮಿ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹಲವು ವರ್ಷಗಳ ಬಳಿಕ ಕಮಲ್ ಹಾಸನ್ ಮತ್ತು ಮಣಿರತ್ನಂ ಒಟ್ಟಿಗೆ ಕಾಣಿಸಿಕೊಂಡ ಚಿತ್ರ ಇದಾಗಿರುವುದರಿಂದ ನಿರೀಕ್ಷೆ ಮೂಡಿತ್ತು. ಆದರೆ, ಸಿನಿಮಾ ಫ್ಲಾಪ್ ಆಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Sat, 11 October 25

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್