
ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಅವರ ಜನ್ಮದಿನದ ಅಂಗವಾಗಿ ನಟಿ ತ್ರಿಷಾ ಕೃಷ್ಣನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಒಂದು ಫೋಟೋ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ತ್ರಿಷಾ ಅವರು ವಿಜಯ್ ಜೊತೆ ನಿಂತಿದ್ದಾರೆ. ಎದರು ಕೇಕ್ ಇದೆ. ವಿಜಯ್ ಅವರ ಬರ್ತ್ಡೇ ಆಚರಣೆಯ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ಇತ್ತೀಚಿನ ಫೋಟೋ ಇದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಭಿಮಾನಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕ್ಷಿ ಸಮೇತ ಈ ಫೋಟೋದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು, ನಟಿ ತ್ರಿಷಾ ಹಂಚಿಕೊಂಡಿರುವ ಫೋಟೋ ಇತ್ತೀಚಿನದ್ದಲ್ಲ, ಅದು ಹಳೆಯ ಫೋಟೋ ಎಂಬುದು ಈಗ ಸಾಬೀತಾಗಿದೆ.
ತ್ರಿಷಾ ಅವರು ವಿಜಯ್ ಬರ್ತ್ಡೇ ದಿನ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಮರುದಿನ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಮೂಲಕ ಜನ್ಮದಿನದ ವಿಶ್ ಮಾಡಿದ್ದರು. ತ್ರಿಷಾ ಹಂಚಿಕೊಂಡಿರುವ ಫೋಟೋದಲ್ಲಿ ವಿಜಯ್ ಅವರು ಕೇಕ್ ಮುಂದೆ ನಿಂತು ನಗುತ್ತಿದ್ದರೆ, ತ್ರಿಷಾ ಅವರು ವಿಜಯ್ ಅವರನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ಎಲ್ಲರೂ ಇದನ್ನು ಇತ್ತೀಚಿನ ಬರ್ತ್ಡೇ ಆಚರಣೆಯ ಫೋಟೋ ಎಂದೇ ನಂಬಿದ್ದರು. ಆದರೆ, ಅಭಿಮಾನಿಯೊಬ್ಬರು ಈ ಹಿಂದೆ ಹಂಚಿಕೊಂಡಿದ್ದ ಮತ್ತೊಂದು ಫೋಟೋ ಈಗ ಎಲ್ಲದಕ್ಕೂ ಉತ್ತರ ನೀಡಿದೆ.
ಅಭಿಮಾನಿಯೊಬ್ಬರು 2024ರಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ವಿಜಯ್ ಅವರು ಧರಿಸಿರುವ ಕಪ್ಪು ಮತ್ತು ಬ್ರೌನ್ ಬಣ್ಣದ ವಿನ್ಯಾಸವಿರುವ ಶರ್ಟ್ ಹಾಗೂ ತ್ರಿಷಾ ಈಗ ಹಂಚಿಕೊಂಡಿರುವ ಫೋಟೋದಲ್ಲಿರುವ ಶರ್ಟ್ ಎರಡೂ ಒಂದೇ ಆಗಿದೆ. ಕೇವಲ ಶರ್ಟ್ ಮಾತ್ರವಲ್ಲದೆ, ಎರಡು ಫೋಟೋಗಳಲ್ಲಿರುವ ವಿಜಯ್ ಅವರ ಹೇರ್ಸ್ಟೈಲ್ ಮತ್ತು ಗಡ್ಡದ ವಿನ್ಯಾಸವೂ ಒಂದೇ ರೀತಿ ಇದೆ.
ಇದನ್ನೂ ಓದಿ: ವಿಜಯ್-ತ್ರಿಷಾ ಮಧ್ಯೆ ಬ್ರೇಕಪ್? ನಡೆಯಿತು ಪ್ರಮುಖ ಬೆಳವಣಿಗೆ
ಈ ಎರಡು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನೆಟ್ಟಿಗರು, ತ್ರಿಷಾ ಅವರು ವಿಜಯ್ ಬರ್ತ್ಡೇಗೆ ಹಂಚಿಕೊಂಡಿರುವುದು ಇತ್ತೀಚಿನ ಫೋಟೋ ಅಲ್ಲವೇ ಅಲ್ಲ, ಅದು ಹಳೆಯ ಫೋಟೋ ಎಂದು ಕನ್ಫರ್ಮ್ ಮಾಡಿದ್ದಾರೆ. ತ್ರಿಷಾ ಅವರು ವಿಜಯ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿರೋ ವಿಷಯ ಕೂಡ ಸಾಕಷ್ಟು ಚರ್ಚೆಗಳನ್ನು ಹುಟ್ಟಿಹಾಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.