ಮ್ಯಾಚ್ ಫಿಕ್ಸಿಂಗ್​ಗೆ ಮುಂದಾದ ಸಂತೋಷ್; ‘ಇದೆಲ್ಲ ತಪ್ಪು’ ಎಂದು ತಡೆದ ವಿನಯ್, ನಮ್ರತಾ

ವಜ್ರಕಾಯ ತಂಡದಲ್ಲಿರುವ ಈಶಾನಿಗೆ ತಾವು ಹೊರಹೋಗುವ ಭಯ ಕಾಡಿದೆ. ಹೀಗಾಗಿ, ಅವರಿಗೆ ನಾಮಿನೇಷನ್​ನಿಂದ ಸೇವ್ ಆಗಬೇಕಿದೆ. ಪ್ರತಾಪ್​ಗೆ ಈಗ ಒಬ್ಬರನ್ನು ಸೇವ್ ಮಾಡುವ ಅಧಿಕಾರ ಇರುವುದರಿಂದ ಹೇಗಾದರೂ ಮಾಡಿ ಪ್ರತಾಪ್​ನ ಮೈಂಡ್​ವಾಶ್ ಮಾಡಬೇಕು ಎಂದು ಸಂತೋಷ್ ಪ್ಲಾನ್ ಮಾಡಿದರು.

ಮ್ಯಾಚ್ ಫಿಕ್ಸಿಂಗ್​ಗೆ ಮುಂದಾದ ಸಂತೋಷ್; ‘ಇದೆಲ್ಲ ತಪ್ಪು’ ಎಂದು ತಡೆದ ವಿನಯ್, ನಮ್ರತಾ
ವಿನಯ್-ನಮ್ರತಾ

Updated on: Nov 09, 2023 | 7:46 AM

ಬಿಗ್ ಬಾಸ್​ನಲ್ಲಿ (Bigg Boss) ಕಳೆದ ವಾರ ಭರ್ಜರಿ ಫೈಟ್ ಏರ್ಪಟ್ಟಿತ್ತು. ಎರಡು ಟೀಂಗಳ ಕ್ಯಾಪ್ಟನ್​ಗಳ ಮಧ್ಯೆಯೇ ಜಿದ್ದು ಮೂಡಿದ್ದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಯಿತು. ಟಾಸ್ಕ್ ಎಲ್ಲವೂ ಹಾಳಾಯಿತು ಎಂದು ಅನೇಕರು ಬೇಸರ ಹೊರಹಾಕಿದರು. ಈ ವಿಚಾರಕ್ಕೆ ಸಂಬಂಧಿಸಿ ವಿನಯ್ ಹಾಗೂ ನಮ್ರತಾಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಗುಂಪುಗಾರಿಕೆ ಹಾಗೆಯೇ ಮುಂದುವರಿದಿರಬಹುದು. ಆದರೆ, ಕೋಪ, ಪಿತೂರಿ ಕೊಂಚ ಕಡಿಮೆ ಆಗಿದೆ. ವಿನಯ್ ಆ್ಯಂಡ್​ ಗ್ಯಾಂಗ್​ನಲ್ಲಿ ಭಯ ಎದ್ದು ಕಾಣುತ್ತಿದೆ.

ಬಿಗ್ ಬಾಸ್​ನಲ್ಲಿ ವಿಶೇಷ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಗೆದ್ದರೆ ಒಬ್ಬರನ್ನು ಸೇವ್ ಮಾಡಬೇಕು ಎನ್ನುವ ಆದೇಶ ಬರುತ್ತದೆ. ಪ್ರತಾಪ್ ಅವರ ತಂಡ ಎರಡಕ್ಕೆ ಎರಡು ಮ್ಯಾಚ್​ ಗೆದ್ದಿತ್ತು. ಈ ವೇಳೆ ಪ್ರತಾಪ್ ಮೊದಲು ಭಾಗ್ಯಶ್ರೀ ಅವರನ್ನು ಸೇವ್ ಮಾಡಿದರು. ಎರಡನೇ ಬಾರಿಗೆ ಸಂಗೀತಾ ಅವರನ್ನು ರಕ್ಷಿಸಿದರು. ಮೂರನೇ ಮ್ಯಾಚ್ ಕೂಡ ಪ್ರತಾಪ್ ತಂಡವೇ ಗೆದ್ದಿದೆ. ಈ ವೇಳೆ ಅವರು ಯಾರನ್ನು ಸೇವ್ ಮಾಡಬಹುದು ಎನ್ನುವ ಕುತೂಹಲ ಮೂಡಿತು.

ವಜ್ರಕಾಯ ತಂಡದಲ್ಲಿರುವ ಈಶಾನಿಗೆ ತಾವು ಹೊರಹೋಗುವ ಭಯ ಕಾಡಿದೆ. ಹೀಗಾಗಿ, ಅವರಿಗೆ ನಾಮಿನೇಷನ್​ನಿಂದ ಸೇವ್ ಆಗಬೇಕಿದೆ. ಪ್ರತಾಪ್​ಗೆ ಈಗ ಒಬ್ಬರನ್ನು ಸೇವ್ ಮಾಡುವ ಅಧಿಕಾರ ಇರುವುದರಿಂದ ಹೇಗಾದರೂ ಮಾಡಿ ಪ್ರತಾಪ್​ನ ಮೈಂಡ್​ವಾಶ್ ಮಾಡಬೇಕು ಎಂದು ಸಂತೋಷ್ ಪ್ಲಾನ್ ಮಾಡಿದರು. ಆದರೆ, ಇದಕ್ಕೆ ವಿನಯ್ ಹಾಗೂ ನಮ್ರತಾ ಒಪ್ಪಲಿಲ್ಲ.

‘ಮೈಕೆಲ್​ಗೆ ತಂಡದ ಬಗ್ಗೆಯೇ ಅಸಮಾಧಾನ ಇದೆ. ಅವನ ಬಳಿ ಹೋಗಿ ನಾವು ಸೇವ್ ಮಾಡುವ ವಿಚಾರದ ಬಗ್ಗೆ ಪ್ರಸ್ತಾಪ ಇಡಬಹುದು. ತಂಡದ ಜೊತೆ ಹೋಗಿ ಮಾತನಾಡಿ ಎಂದು ಹೇಳಬಹುದು’ ಎಂದಿದ್ದಾರೆ ಸಂತೋಷ್. ‘ಬೇಡ ಮಗಾ.. ಅದು ಮ್ಯಾಚ್ ಫಿಕ್ಸಿಂಗ್ ಆಗುತ್ತದೆ. ಆ ರೀತಿ ಮಾಡೋದು ಬೇಡ’ ಎಂದರು ವಿನಯ್. ಆ ಬಳಿಕ ಸಂತೋಷ್ ಸುಮ್ಮನಾದರು.

ಇದನ್ನೂ ಓದಿ: ಪ್ರತಾಪ್​ಗೆ ಗಾಳ ಹಾಕಿದ ಸಂತೋಷ್, ವಿನಯ್, ಸ್ನೇಹಿತ್; ಇದು ಸುಲಭಕ್ಕೆ ಬೀಳೋ ಮೀನಲ್ಲ

ಸಂತೋಷ್ ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರು ಶಕುನಿ ರೀತಿ ವರ್ತಿಸುತ್ತಿದ್ದಾರೆ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರು ಬೇಗ ಎಲಿಮಿನೇಟ್ ಆಗಲಿ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಕಲರ್ಸ್ ಕನ್ನಡದಲ್ಲಿ  ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ