ಬಾಲಿವುಡ್ಗೆ ಹೊಸದಲ್ಲ ವಿಚ್ಛೇದನ; ಡಿವೋರ್ಸ್ ಪಡೆದ ಸ್ಟಾರ್ ದಂಪತಿಗಳು ಯಾರೆಲ್ಲ ನೋಡಿ..
ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ ದಂಪತಿಗೆ ದೆಹಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ. ಬಾಲಿವುಡ್ನಲ್ಲಿ ವಿಚ್ಛೇದನ ಪಡೆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಾಲಿವುಡ್ನಲ್ಲಿ ಡೇಟಿಂಗ್, ಮದುವೆ ಹಾಗೂ ವಿಚ್ಛೇದನ ತುಂಬಾನೇ ಕಾಮನ್ ಎಂಬಂತಾಗಿದೆ. ಡೇಟಿಂಗ್ ಮಾಡಿದ ಬಳಿಕ ಅನೇಕರು ಮದುವೆ ಆಗಿದ್ದಾರೆ. ಅದೇ ರೀತಿ ಡಿವೋರ್ಸ್ ಪಡೆದವರೂ ಅನೇಕರಿದ್ದಾರೆ. ಆ ಬಳಿಕ ತೋರಿಕೆಗೆ ಒಂದು ಕಾರಣ ನೀಡುತ್ತಾರೆ. ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ (Shalini Talwar) ದಂಪತಿಗೆ ದೆಹಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ. ಬಾಲಿವುಡ್ನಲ್ಲಿ ವಿಚ್ಛೇದನ ಪಡೆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್
ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ 2011ರ ಜನವರಿಯಲ್ಲಿ ಮದುವೆ ಆದರು. ಇತ್ತೀಚೆಗೆ ಇವರ ಸಂಬಂಧದಲ್ಲಿ ಬಿರುಕು ಉಂಟಾಯಿತು. ವಿಚ್ಛೇದನ ಕೋರಿ ಇವರು ಅರ್ಜಿ ಸಲ್ಲಿಕೆ ಮಾಡಿದ್ದರು. ಇವರಿಗೆ ದೆಹಲಿ ಕೋರ್ಟ್ ಮಂಗಳವಾರ (ನವೆಂಬರ್ 9) ವಿಚ್ಛೇದನ ನೀಡಿದೆ. ಸುಮಾರು 13 ವರ್ಷಗಳ ದಾಂಪತ್ಯ ಜೀವನ ಕೊನೆ ಆಗಿದೆ. ಹನಿ ಸಿಂಗ್ ವಿರುದ್ಧ ಅನೇಕ ರೀತಿಯ ಆರೋಪಗಳನ್ನು ಇವರು ಮಾಡಿದ್ದಾರೆ.
ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ
ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರ 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಆದರೆ, ಇಬ್ಬರ ಮಧ್ಯೆ ವೈಮನಸ್ಸು ಮೂಡಿದ್ದರಿಂದ ಇವರು ಬೇರೆ ಆದರು. 2017ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಇವರಿಗೆ ಅರ್ಹಾನ್ ಹೆಸರಿನ ಮಗನಿದ್ದಾನೆ. ಮಲೈಕಾ ಅವರು ಅರ್ಜುನ್ ಕಪೂರ್ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಇವರು ಮದುವೆ ಆಗುತ್ತಾರೆ ಎನ್ನಲಾಗಿದೆ.
ಹೃತಿಕ್ ರೋಷನ್ ಹಾಗೂ ಸುಸ್ಸಾನೆ ಖಾನ್
ಹೃತಿಕ್ ರೋಷನ್ ಹಾಗೂ ಸುಸ್ಸಾನೇ ಖಾನ್ ಅವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದರೆ, ಅವರು 14 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿಕೊಂಡರು. ಇದು ಅನೇಕರಿಗೆ ಶಾಕಿಂಗ್ ಎನಿಸಿತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳನ್ನು ಇಬ್ಬರೂ ಬೆಳೆಸುತ್ತಿದ್ದಾರೆ ಎನ್ನಲಾಗಿದೆ.
ಆಮಿರ್ ಖಾನ್ ಹಾಗೂ ಕಿರಣ್ ರಾವ್
ಆಮಿರ್ ಖಾನ್ ಅವರು ಕಿರಣ್ ರಾವ್ ಜೊತೆ 16 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿಕೊಂಡರು. ವಿಚ್ಛೇದನಕ್ಕೆ ಕಾರಣ ತಿಳಿದಿಲ್ಲ. ಇವರಿಗೆ ಆಜಾದ್ ರಾವ್ ಖಾನ್ ಹೆಸರಿನ ಮಗನಿದ್ದಾನೆ. ಆಮಿರ್ ಹಾಗೂ ಕಿರಣ್ ರಾವ್ ಮಧ್ಯೆ ಗೆಳೆತನ ಮುಂದುವರಿದಿದೆ. ಒಟ್ಟಾಗಿ ಇವರು ಸಿನಿಮಾ ನಿರ್ಮಾಣ ಮಾಡುತ್ತಾರೆ.
ಫರ್ಹಾನ್ ಅಖ್ತರ್ ಹಾಗೂ ಅಧುನಾ ಭಬಾನಿ
ಫರ್ಹಾನ್ ಅಖ್ತರ್ ಅವರು 2000ರಲ್ಲಿ ಅಧುನಾ ಭಬಾನಿ ಅವರನ್ನು ಮದುವೆ ಆದರು. 2017ರವರೆಗೆ ಇವರು ಒಟ್ಟಾಗಿ ಸಂಸಾರ ನಡೆಸಿದ್ದರು. ಆ ಬಳಿಕ ಇವರು ಬೇರೆ ಆಗುವ ಬಗ್ಗೆ ಘೋಷಣೆ ಮಾಡಿದರು. ಇವರಿಗೆ ಶಕ್ಯ ಹಾಗೂ ಅಕಿರಾ ಹೆಸರಿನ ಮಕ್ಕಳಿದ್ದಾರೆ. ಸದ್ಯ ಶಿಬಾನಿ ದಂಡೇಕರ್ ಅವರನ್ನು ಫರ್ಹಾನ್ ಅಖ್ತರ್ ಮದುವೆ ಆಗಿದ್ದಾರೆ.
ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್
‘ಆದಿಪುರುಷ್’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದವರು ಸೈಫ್ ಅಲಿ ಖಾನ್. ಇವರು ಅಮೃತಾ ಸಿಂಗ್ನ ಮದುವೆ ಆಗಿದ್ದರು. 13 ವರ್ಷಗಳ ಕಾಲ ಇವರು ಸಂಸಾರ ನಡೆಸಿದ್ದರು. ಇವರಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಮ್ ಖಾನ್ ಹೆಸರಿನ ಮಕ್ಕಳಿದ್ದಾರೆ. ಸೈಫ್ ಹಾಗೂ ಅಮೃತಾ 2004ರಲ್ಲಿ ಬೇರೆ ಆದರು. ಆ ಬಳಿಕ ಸೈಫ್ ಅವರು ಕರೀನಾ ಕಪೂರ್ ಅವರನ್ನು ಮದುವೆ ಆದರು. ಸಾರಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಸೋಹೈಲ್ ಖಾನ್ ಹಾಗೂ ಸೀಮಾ ಖಾನ್
ಸೋಹೈಲ್ ಖಾನ್ ಹಾಗೂ ಸೀಮಾ ಖಾನ್ ಅವರು ವಿಚ್ಛೇದನ ಪಡೆಯುತ್ತಿದ್ದಾರೆ. ಇವರು 24 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಈ ದಂಪತಿಗೆ ನಿರ್ವಾನ್ ಖಾನ್ ಹಾಗೂ ಯೋಹನ್ ಖಾನ್ ಹೆಸರಿನ ಮಕ್ಕಳಿದ್ದಾರೆ.
ಆಮಿರ್ ಖಾನ್ ರೀನಾ ದತ್ತ
ಆಮಿರ್ ಖಾನ್ ಅವರು ಕಿರಣ್ ರಾವ್ ಅವರನ್ನು ಮದುವೆ ಆಗುವುದಕ್ಕೂ ಮೊದಲು ರೀನಾ ದತ್ತ ಅವರನ್ನು ವರಿಸಿದ್ದರು. ಇವರು ಮದುವೆ ಆಗಿದ್ದು 1986ರಲ್ಲಿ. ಇವರು 2002ರವರೆಗೆ ಒಟ್ಟಿಗೆ ಇದ್ದರು. ಇವರಿಗೆ ಇರಾ ಖಾನ್ ಹಾಗೂ ಜುನೈದ್ ಖಾನ್ ಹೆಸರಿನ ಮಕ್ಕಳಿದ್ದಾರೆ. ಇರಾ ಖಾನ್ ನಿಶ್ಚಿತಾರ್ಥ ನಡೆದಿದ್ದು, ಮುಂದಿನ ವರ್ಷದ ಆರಂಭದಲ್ಲಿ ಮದುವೆ ನಡೆಯಲಿದೆ.
ಇದನ್ನೂ ಓದಿ: ರಾಮ್ ಚರಣ್, ಅಲ್ಲು ಅರ್ಜುನ್ ಮನೆಯಲ್ಲಿ ಹೇಗಿತ್ತು ಗಣೇಶೋತ್ಸವ?
ಅರ್ಜುನ್ ರಾಮ್ಪಾಲ್ ಮೆಹ್ರ ಜೆಸ್ಸಿಯಾ
ಅರ್ಜುನ್ ರಾಮ್ಪಾಲ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು 1998ರಲ್ಲಿ ಮೆಹ್ರ್ ಅವರನ್ನು ಮದುವೆ ಆದರು. ಇವರು 2019ರಲ್ಲಿ ಬೇರೆ ಆದರು. ಮಹಿಕಾ ಹಾಗೂ ಮೈರಾ ರಾಮ್ಪಾಲ್ ಹೆಸರಿನ ಮಕ್ಕಳು ಇವರಿಗೆ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:35 am, Thu, 9 November 23



