Kaali Documentary: ಕಾಳಿ ದೇವಿಗೆ ಅವಮಾನ: ಭಾರಿ ವಿರೋಧದ ಬಳಿಕ ನಿರ್ದೇಶಕಿ ಲೀನಾ ಮಣಿಮೇಕಲೈ ಟ್ವೀಟ್​ಗೆ ತಡೆ

Leena Manimekalai Twitter: ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್​ ಅನ್ನು ಟ್ವಿಟರ್​ ತಡೆ ಹಿಡಿದಿದೆ. ಈ ಬೆಳವಣಿಗೆಗಳ ಬಗ್ಗೆ ‘ಕಾಳಿ’ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

Kaali Documentary: ಕಾಳಿ ದೇವಿಗೆ ಅವಮಾನ: ಭಾರಿ ವಿರೋಧದ ಬಳಿಕ ನಿರ್ದೇಶಕಿ ಲೀನಾ ಮಣಿಮೇಕಲೈ ಟ್ವೀಟ್​ಗೆ ತಡೆ
ಲೀನಾ ಮಣಿಮೇಕಲೈ, ವಿವಾದಿತ ‘ಕಾಳಿ’ ಡಾಕ್ಯುಮೆಂಟರಿ ಪೋಸ್ಟರ್​
Edited By:

Updated on: Jul 06, 2022 | 12:29 PM

ಡಾಕ್ಯುಮೆಂಟರಿಯ ಪೋಸ್ಟರ್​ನಲ್ಲಿ ಕಾಳಿ ದೇವಿಗೆ ಅವಮಾನ ಮಾಡಿದ ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ಅವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಅವರ ಟ್ವೀಟ್​ ಅನ್ನು ತಡೆಹಿಡಿಯಲಾಗಿದೆ. ‘ಕಾಳಿ’ ಶೀರ್ಷಿಕೆಯಲ್ಲಿ ಲೀನಾ ಮಣಿಮೇಕಲೈ ಅವರು ಸಾಕ್ಷ್ಯಚಿತ್ರ ಮಾಡಿದ್ದಾರೆ. ಅದರ ಪೋಸ್ಟರ್​ (Kaali Documentary Poster) ವಿವಾದಾತ್ಮಕವಾಗಿದೆ. ಕಾಳಿ ದೇವಿಯು ಸಿಗರೇಟ್​ ಸೇದುತ್ತಿರುವ ಮತ್ತು ಕೈಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಧ್ವಜ ಹಿಡಿದಿರುವ ಚಿತ್ರ ಇದೆ. ಈ ಪೋಸ್ಟರ್ ಅನ್ನು ಲೀನಾ ಮಣಿಮೇಕಲೈ ಅವರು ಟ್ವಿಟರ್​ನಲ್ಲಿ (Twitter) ಹಂಚಿಕೊಂಡಿದ್ದರು. ಜನರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಅನೇಕ ಕಡೆಗಳಲ್ಲಿ ದೂರು ದಾಖಲಾದ ಪರಿಣಾಮ ಈ ಟ್ವೀಟ್​ ಅನ್ನು ಭಾರತದಲ್ಲಿ ತಡೆ ಹಿಡಿಯಲಾಗಿದೆ.

‘ಕಾಳಿ’ ಪೋಸ್ಟರ್​ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಇದೆ. ಹಾಗಾಗಿ ‘ಮಾಹಿತಿ ತಂತ್ರಜ್ಞಾನ ಕಾಯ್ದೆ 2000’ರ ಅನ್ವಯ ಈ ಪೋಸ್ಟ್​ ಅನ್ನು ತಡೆ ಹಿಡಿಯುವಂತೆ ಟ್ವಿಟರ್​ ಸಂಸ್ಥೆಗೆ ಸರ್ಕಾರ ಸೂಚನೆ ನೀಡಿತ್ತು. ಆದ್ದರಿಂದ ಟ್ವಿಟರ್​ ಈ ತೀರ್ಮಾನ ತೆಗೆದುಕೊಂಡಿದೆ. ಜುಲೈ 5ರಿಂದ ಈಚೆಗೆ ಈ ಟ್ವೀಟ್​ ಕಾಣಿಸುತ್ತಿಲ್ಲ.

ಕೆಲವು ಟ್ವೀಟ್​ಗಳನ್ನು ನಿರ್ಬಂಧಿಸುವಂತೆ ಸರ್ಕಾರವು ಟ್ವಿಟರ್​ಗೆ ಆಗಾಗ ಆದೇಶಿಸುತ್ತಿದೆ. ಈ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್​ಗೆ ಟ್ವಿಟರ್​ ಸಂಸ್ಥೆ ಅರ್ಜಿ ಸಲ್ಲಿಸಿದೆ. ಸರ್ಕಾರವು ತನ್ನ ಅಧಿಕಾರವನ್ನು ಈ ರೀತಿ ಬಳಸಿಕೊಳ್ಳುವ ಮೂಲಕ ಅನಗತ್ಯವಾಗಿ ಮಧ್ಯಪ್ರವೇಶ ಮಾಡುತ್ತಿರುವ ಕ್ರಮವನ್ನು ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಬೆಳವಣಿಗೆಗಳ ಬಗ್ಗೆ ‘ಕಾಳಿ’ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಇದನ್ನೂ ಓದಿ
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​
Pranitha Subhash: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿದ ಪ್ರಣಿತಾ; ‘ಹಿಂದೂಗಳ ಜೀವ ಮುಖ್ಯ’ ಎಂದು ಫಲಕ ಹಿಡಿದ ನಟಿ
ಯೋಗ ಎಂದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಅದು ದೇಹಕ್ಕೆ ಸಂಬಂಧಿಸಿದ್ದು ಎಂದ ಜಗ್ಗೇಶ್​
ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಕೂಡ ಗೋಮಾಂಸ ತಿನ್ನುತ್ತಾರೆ: ಸಿದ್ದರಾಮಯ್ಯ

ಇಷ್ಟೆಲ್ಲ ವಿವಾದ ಎಬ್ಬಿಸಿರುವ ಲೀನಾ ಮಣಿಮೇಕಲೈ ಅವರು ಕೆನಡಾದಲ್ಲಿ ವಾಸವಾಗಿದ್ದಾರೆ. ಆದರೆ ಅವರು ಮೂಲತಃ ಭಾರತದವರು. ತಮಿಳುನಾಡಿನವರಾದ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ ಅವರು ಗುರುತಿಸಿಕೊಂಡಿದ್ದಾರೆ. ಹಲವಾರು ಚಿತ್ರೋತ್ಸವಗಳಲ್ಲಿ ಅವರ ಡಾಕ್ಯುಮೆಂಟರಿಗಳು ಪ್ರದರ್ಶನ ಆಗಿದ್ದೂ ಅಲ್ಲದೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ಇದನ್ನೂ ಓದಿ: Leena Manimekalai: ಕಾಳಿ ದೇವಿಗೆ ಅವಮಾನ ಮಾಡಿದ ಲೀನಾ ಮಣಿಮೇಕಲೈ ಯಾರು? ವಿವಾದ ಎಬ್ಬಿಸಿದ ಡೈರೆಕ್ಟರ್​ ಹಿನ್ನೆಲೆ ಇಲ್ಲಿದೆ

ಹಿಂದೂಗಳ ಅವಮಾನಿಸುವವರನ್ನು ಗಲ್ಲಿಗೇರಿಸಬೇಕು ಅಥವಾ ಗುಂಡು ಹೊಡೆದು ಸಾಯಿಸಬೇಕು: ‘ಕಾಳಿ’ ಪೋಸ್ಟರ್​ ವಿರುದ್ಧ ಕೆಎಸ್ ಈಶ್ವರಪ್ಪ ಕೆಂಡಾಮಂಡಲ

Published On - 12:29 pm, Wed, 6 July 22