AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Leena Manimekalai: ಕಾಳಿ ದೇವಿಗೆ ಅವಮಾನ ಮಾಡಿದ ಲೀನಾ ಮಣಿಮೇಕಲೈ ಯಾರು? ವಿವಾದ ಎಬ್ಬಿಸಿದ ಡೈರೆಕ್ಟರ್​ ಹಿನ್ನೆಲೆ ಇಲ್ಲಿದೆ

Leena Manimekalai | Kaali: ಲೀನಾ ಮಣಿಮೇಕಲೈ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಈಗ ಅವರ ಕೊರಳಿಗೆ ವಿವಾದ ಸುತ್ತಿಕೊಂಡಿದೆ.

Leena Manimekalai: ಕಾಳಿ ದೇವಿಗೆ ಅವಮಾನ ಮಾಡಿದ ಲೀನಾ ಮಣಿಮೇಕಲೈ ಯಾರು? ವಿವಾದ ಎಬ್ಬಿಸಿದ ಡೈರೆಕ್ಟರ್​ ಹಿನ್ನೆಲೆ ಇಲ್ಲಿದೆ
ಲೀನಾ ಮಣಿಮೇಕಲೈ - ಕಾಳಿ ಪೋಸ್ಟರ್​
TV9 Web
| Updated By: ಮದನ್​ ಕುಮಾರ್​|

Updated on: Jul 05, 2022 | 12:00 PM

Share

ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ಅವರು ರಾತ್ರೋರಾತ್ರಿ ಕುಖ್ಯಾತಿ ಪಡೆದುಕೊಂಡಿದ್ದಾರೆ. ಒಂದೇ ಒಂದು ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅವರು ಹಿಂದೂಗಳ ಕೋಪಕ್ಕೆ ಗುರಿ ಆಗಿದ್ದಾರೆ. ಲೀನಾ ಅವರು ‘ಕಾಳಿ’ ಎಂಬ ಡಾಕ್ಯುಮೆಂಟರಿ (Kaali Documentary) ಮಾಡಿದ್ದಾರೆ. ಅದರ ಪೋಸ್ಟರ್​ನಲ್ಲಿ ಕಾಳಿ ದೇವಿ ಸಿಗರೇಟ್​ ಸೇದುತ್ತಿರುವ ಚಿತ್ರ ಇದೆ. ದೇವಿಯ ಒಂದು ಕೈಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಧ್ವಜ ಕೂಡ ನೀಡಲಾಗಿದೆ. ಇದನ್ನೆಲ್ಲ ಕಂಡು ನೆಟ್ಟಿಗರು ಗರಂ ಆಗಿದ್ದಾರೆ. ಲೀನಾ ವಿರುದ್ಧ ದೂರು ದಾಖಲಾಗಿದ್ದು, ಅವರನ್ನು ಅರೆಸ್ಟ್​ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಇದರ ನಡುವೆ ಲೀನಾ ಯಾರು ಎಂಬುದನ್ನು ತಿಳಿದುಕೊಳ್ಳಲು ನೆಟ್ಟಿಗರು ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾರೆ. ಇಷ್ಟೆಲ್ಲ ವಿವಾದ (Controversy) ಎಬ್ಬಿಸಿರುವ ಅವರು ಕೆನಡಾದಲ್ಲಿ ವಾಸವಾಗಿದ್ದಾರೆ. ಆದರೆ ಅವರು ಮೂಲತಃ ಭಾರತದವರು.

ತಮಿಳುನಾಡಿನವರಾದ ಲೀನಾ ಮಣಿಮೇಕಲೈ ಅವರು 1995ರಲ್ಲಿ ಹೋಲಿ ಕ್ರಾಸ್​ ಕಾನ್ವೆಂಟ್​ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಮದುರೈ ಕಾಮರಾಜರ್​ ಯೂನಿವರ್ಸಿಟಿಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದರು. ‘ದಿ ಸ್ಕೂಲ್​ ಆಫ್​ ಓರಿಯಂಟಲ್​ & ಆಫ್ರಿಕನ್​ ಸ್ಟಡೀಸ್​’ ಮೂಲಕ ಅವರು 2012ರಲ್ಲಿ ಪದವಿ ಪಡೆದರು. ನಂತರ ಅವರು ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತೊಡಗಿಕೊಂಡರು.

ಲೀನಾ ಮಣಿಮೇಕಲೈ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ ಅವರು ಗುರುತಿಸಿಕೊಂಡಿದ್ದಾರೆ. ಹಲವಾರು ಚಿತ್ರೋತ್ಸವಗಳಲ್ಲಿ ಅವರ ಡಾಕ್ಯುಮೆಂಟರಿಗಳು ಪ್ರದರ್ಶನ ಆಗಿದ್ದೂ ಅಲ್ಲದೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ಇದನ್ನೂ ಓದಿ
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​
Image
Pranitha Subhash: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿದ ಪ್ರಣಿತಾ; ‘ಹಿಂದೂಗಳ ಜೀವ ಮುಖ್ಯ’ ಎಂದು ಫಲಕ ಹಿಡಿದ ನಟಿ
Image
ಯೋಗ ಎಂದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಅದು ದೇಹಕ್ಕೆ ಸಂಬಂಧಿಸಿದ್ದು ಎಂದ ಜಗ್ಗೇಶ್​
Image
ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಕೂಡ ಗೋಮಾಂಸ ತಿನ್ನುತ್ತಾರೆ: ಸಿದ್ದರಾಮಯ್ಯ

ಸಿನಿಮಾ, ಪೇಟಿಂಗ್​, ಡಾಕ್ಯುಮೆಂಟರಿ, ವೆಬ್​ ಸಿರೀಸ್​ಗಳಲ್ಲಿ ಹಿಂದೂ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಮೂಲಕ ಈಗಾಗಲೇ ಅನೇಕ ನಿರ್ದೇಶಕರು ಹಿಂದೂಗಳ ವಿರೋಧ ಎದುರಿಸಿದ್ದಾರೆ. ಅಂಥವರ ಸಾಲಿಗೆ ಲೀನಾ ಮಣಿಮೇಕಲೈ ಸೇರ್ಪಡೆ ಆಗಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಅವರ ವಿರುದ್ಧ ದೂರು ನೀಡಲಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಜುಲೈ 4ರಂದು ಲೀನಾ ಮಣಿಮೇಕಲೈ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ‘ಕಾಳಿ’ ಪೋಸ್ಟರ್​ ಶೇರ್​ ಮಾಡಿಕೊಂಡರು. ಕೂಡಲೇ ಅದು ವೈರಲ್​ ಆಯಿತು. ಬಿಟ್ಟಿ ಪ್ರಚಾರ ಪಡೆಯುವ ಕಾರಣದಿಂದಲೇ ಲೀನಾ ಮಣಿಮೇಕಲೈ ಅವರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ‘ಎಲ್ಲರ ಜೀವವೂ ಮುಖ್ಯ ಎಂದು ನಂಬಿದವಳು ನಾನು’; ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸಾಯಿ ಪಲ್ಲವಿ

Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ