ಟೀಂ ಇಂಡಿಯಾ ಸೇರಲು ವೈಭವ್ ಸೂರ್ಯವಂಶಿ ರೆಡಿ; ಉಡೀಸ್ ಆಗಲಿದೆ ಸಚಿನ್ ದಾಖಲೆ
ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಿಂಚುತ್ತಿರುವ 15ರ ವೈಭವ್ ಸೂರ್ಯವಂಶಿ, ಐದು ಪಂದ್ಯಗಳಲ್ಲಿ 200 ರನ್ ಗಳಿಸಿ, 263 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕೇವಲ 15ನೇ ವಯಸ್ಸಿಗೆ ಟೀಂ ಇಂಡಿಯಾ ಪ್ರವೇಶಿಸುವ ಸಾಧ್ಯತೆಗಳಿದ್ದು, ಐರ್ಲೆಂಡ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ವೈಭವ್ ಮುರಿಯಲಿದ್ದಾರೆ.

ವೈಭವ್ ಸೂರ್ಯವಂಶಿ (Vaibhav Sooryavanshi) ಅವರು ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದು, ಅದ್ಭುತ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಕೇವಲ 15ನೇ ವಯಸ್ಸಿಗೆ ಅವರು ಹಲವು ದಾಖಲೆಗಳನ್ನು ಬರೆಯುತ್ತಿದ್ದಾರೆ. ಅವರು ಆಡಿದ ಐದು ಪಂದ್ಯಗಳಿಂದ 200 ರನ್ ಪೇರಿಸಿದ್ದು, 263 ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ಜೋಶ್ ಹೇಜಲ್ವುಡ್ಗೆ ಸಿಕ್ಸ್ ಬಾರಿಸಿ ಗಮನ ಸೆಳೆದಿದ್ದಾರೆ. ಈಗ ಅವರು ಟೀಂ ಇಂಡಿಯಾ ಪರ ಆಡಲು ರೆಡಿ ಆಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ 37 ವರ್ಷಗಳ ಹಿಂದೆ ಬರೆದ ದಾಖಲೆ ಅಳಿಸಿ ಹಾಕಲಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ ವೈಭವ್ ಸೂರ್ಯವಂಶಿ ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಅವರು ಟೀಂ ಇಂಡಿಯಾ ಪರ ಆಡಲಿದ್ದಾರೆ. ಜೂನ್ 26 ಹಾಗೂ 28ರಂದು ಐರ್ಲೆಂಡ್ ಅಲ್ಲಿ ಟಿ20 ಪಂದ್ಯಗಳು ನಡೆಯಲಿವೆ. ಇದಕ್ಕೆ ವೈಭವ್ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆಯಂತೆ. ಈ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಬಿಸಿಸಿಐಗೆ ಇದೆ.
ಜುಲೈ 23-26ರವರೆಗೆ ಜಿಂಬ್ವಾಬ್ವೆಯಲ್ಲಿ ನಡೆಯುವ ಟಿ20 ಸರಣಿಗೂ ವೈಭವ್ ಹೆಸರನ್ನು ಆಯ್ಕೆ ಮಾಡುವ ಇರಾದೆಯನ್ನು ಆಯ್ಕೆ ಸಮಿತಿ ಹೊಂದಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರಕ್ಕೆ ಬರುವ ಆಲೋಚನೆಯಲ್ಲಿ ತಂಡ ಇದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ
ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾಗೆ ಆಡಿದಾಗ ಅವರ ವಯಸ್ಸು 16 ವರ್ಷದ 2005 ದಿನ ಆಗಿತ್ತು. ಜೂನ್ 26ರಂದು ಅಂತಾರಾಷ್ಟ್ರೀಯ ಪಂದ್ಯ ಆಡಿದರೆ ವೈಭವ್ ಅವರು ಕೇವಲ 15 ವರ್ಷ 91 ದಿನಕ್ಕೆ ಟೀಂ ಇಂಡಿಯಾ ಪರ ಆಡಿದಂತೆ ಆಗಲಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲಿದ್ದಾರೆ. ಶಫಾಲಿ ವರ್ಮ ಅವರು 15 ವರ್ಷ 240ಕ್ಕೆ ದಿನಕ್ಕೆ ಟೀಂ ಇಂಡಿಯಾ ಪರ ಆಡಿದ್ದರು. ಈಗ ಈ ದಾಖಲೆಯನ್ನು ಕೂಡ ವೈಭವ್ ಮುರಿಯಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:41 am, Tue, 14 April 26




