AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಗಾಗಿ ಸಿದ್ಧವಾದ ನಾಲ್ವಡಿ ಒಡೆಯರ್ ಮಾದರಿ ಪೇಟದ ವಿಶೇಷಗಳೇನು ಗೊತ್ತಾ? ಇಲ್ಲಿದೆ ನೋಡಿ

ಪ್ರಧಾನಿ ಮೋದಿಗಾಗಿ ಸಿದ್ಧವಾದ ನಾಲ್ವಡಿ ಒಡೆಯರ್ ಮಾದರಿ ಪೇಟದ ವಿಶೇಷಗಳೇನು ಗೊತ್ತಾ? ಇಲ್ಲಿದೆ ನೋಡಿ

ರಾಮ್​, ಮೈಸೂರು
| Edited By: |

Updated on: Apr 14, 2026 | 9:17 AM

Share

ಪ್ರಧಾನಿ ನರೇಂದ್ರ ಮೋದಿ ಅವರ ಮಂಡ್ಯ ಭೇಟಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿಯ ವಿಶೇಷ ಮೈಸೂರು ಪೇಟ ಸಿದ್ಧವಾಗಿದೆ. ಮೈಸೂರಿನ ಕಲಾವಿದ ನಂದನ್ ಸಿಂಗ್ ಈ ರಾಜಲಾಂಛನ ಗಂಡಭೇರುಂಡ ವಿನ್ಯಾಸದ ಪೇಟವನ್ನು ತಯಾರಿಸಿದ್ದಾರೆ. ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಇದನ್ನು ಪ್ರಧಾನಿಗಳಿಗೆ ಸಮರ್ಪಿಸಲಿದ್ದಾರೆ. ಇದರಿಂದ ನಾಡಿನ ಸಂಸ್ಕೃತಿಯ ಅನಾವರಣವಾಗಲಿದೆ.

ಮೈಸೂರು, ಏಪ್ರಿಲ್ 14: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಭೈರವೈಕ್ಯ ಮಂದಿರ ಲೋಕಾರ್ಪಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಮೈಸೂರು ಪೇಟ ಧರಿಸಿ ಗಮನ ಸೆಳೆಯಲಿದ್ದಾರೆ. ಮೈಸೂರಿನ ಹೆಸರಾಂತ ಕಲಾವಿದ ನಂದನ್ ಸಿಂಗ್ ಅವರು ಪ್ರಧಾನಿಗಾಗಿಯೇ ಈ ಪೇಟವನ್ನು ಸಿದ್ಧಪಡಿಸಿದ್ದಾರೆ. ಇದರ ತಯಾರಿಗೆ ಐದು ದಿನಗಳ ಕಾಲ ತಗಲಿದೆ. ಬನಾರಸ್ ಬಟ್ಟೆ ಹಾಗೂ ವಿಶೇಷ ಮೋಲ್ಡ್ ಬಳಸಿ ತಯಾರಿಸಿರುವ ಈ ಪೇಟವು, ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಶೈಲಿಯಲ್ಲಿದೆ. ಪೇಟದ ಮಧ್ಯಭಾಗದಲ್ಲಿ ರಾಜ ಲಾಂಛನ ‘ಗಂಡಭೇರುಂಡ’ ವಿನ್ಯಾಸವನ್ನು ಅಳವಡಿಸಲಾಗಿದ್ದು, ‘ನಮ್ಮೂರು ನಮ್ಮೋರು’ ಸೇವಾ ಸಂಸ್ಥೆಯ ಮೂಲಕ ಪ್ರಧಾನಿಗಳಿಗೆ ಇದನ್ನು ಅರ್ಪಿಸಲಾಗುತ್ತಿದೆ. ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಈ ಕಲಾಕೃತಿ ಮೂಡಿಬಂದಿದೆ. ಪೇಟ ತಯಾರಿಸಿದ ಕಲಾವಿದ ನಂದನ್ ಹಾಗೂ ಟ್ರಸ್ಟ್ ಸದಸ್ಯರ ಜೊತೆ ಟಿವಿ9 ಮೈಸೂರು ಪ್ರತಿನಿಧಿ ರಾಮ್ ನಡೆಸಿರುವ ಮಾತುಕತೆ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More