CBSE Class 10 Results 2026: ಇಂದೇ ಪ್ರಕಟವಾಗಲಿದೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ; ವೀಕ್ಷಿಸಲು ಈ ಲಿಂಕ್ ಬಳಸಿ
ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಏಪ್ರಿಲ್ 14 ಅಥವಾ 15ರಂದು ಪ್ರಕಟವಾಗುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು cbse.gov.in ಮತ್ತು results.cbse.nic.in ವೆಬ್‌ಸೈಟ್‌ಗಳಲ್ಲಿ ತಮ್ಮ ರೋಲ್ ನಂಬರ್ ನಮೂದಿಸಿ ಅಂಕಪಟ್ಟಿ ವೀಕ್ಷಿಸಬಹುದು. ಡಿಜಿಲಾಕರ್ ಮೂಲಕವೂ ಲಭ್ಯ. ಫಲಿತಾಂಶ ಪ್ರಕಟವಾದ ನಂತರ, ಯಾವುದಾದರೂ ವಿಷಯದಲ್ಲಿ ಅಂಕ ಕಡಿಮೆ ಬಂದಿದ್ದರೆ ಅಥವಾ ತೃಪ್ತಿ ಇಲ್ಲದಿದ್ದರೆ, ವಿದ್ಯಾರ್ಥಿಗಳು ಮೇ 15 ರಿಂದ ನಡೆಯಲಿರುವ ಪರೀಕ್ಷೆಯಲ್ಲಿ ಗರಿಷ್ಠ 3 ವಿಷಯಗಳಿಗೆ ಹಾಜರಾಗಲು ಅವಕಾಶವಿದೆ.

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 14 ಅಥವಾ 15ರ ಒಳಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ. ಈ ವರ್ಷದ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಫಲಿತಾಂಶದ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
ಶೀಘ್ರದಲ್ಲೇ ಫಲಿತಾಂಶ ಪ್ರಕಟ:
ಸಿಬಿಎಸ್ಇ ಈ ಬಾರಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪ್ರಕಟವಾಗುತ್ತಿದ್ದ ಫಲಿತಾಂಶವನ್ನು ಈ ಬಾರಿ ಏಪ್ರಿಲ್ ಮಧ್ಯಭಾಗದಲ್ಲೇ ಬಿಡುಗಡೆ ಮಾಡಲು ಮಂಡಳಿ ನಿರ್ಧರಿಸಿದೆ. ಮೇ 15ರಿಂದ ಜೂನ್ 1ರವರೆಗೆ ಎರಡನೇ ಹಂತದ (Improvement) ಪರೀಕ್ಷೆಗಳು ನಡೆಯಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಫಲಿತಾಂಶ ವೀಕ್ಷಿಸುವುದು ಹೇಗೆ?
ವಿದ್ಯಾರ್ಥಿಗಳು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು:
- ವೆಬ್‌ಸೈಟ್‌ಗೆ ಭೇಟಿ ನೀಡಿ: ಸಿಬಿಎಸ್ಇ ಅಧಿಕೃತ ವೆಬ್‌ಸೈಟ್ results.cbse.nic.in ಅಥವಾ cbse.gov.in ಗೆ ಲಾಗ್ ಇನ್ ಆಗಿ.
- ಲಿಂಕ್ ಕ್ಲಿಕ್ ಮಾಡಿ: ಮುಖಪುಟದಲ್ಲಿ ಕಾಣುವ ‘Secondary School Examination (Class X) Results 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ವಿವರಗಳನ್ನು ಭರ್ತಿ ಮಾಡಿ: ನಿಮ್ಮ ರೋಲ್ ನಂಬರ್ (Roll Number), ಸ್ಕೂಲ್ ನಂಬರ್ (School Number) ಮತ್ತು ಅಡ್ಮಿಟ್ ಕಾರ್ಡ್ ಐಡಿ (Admit Card ID) ಅನ್ನು ನಿಖರವಾಗಿ ನಮೂದಿಸಿ.
- ಸಬ್ಮಿಟ್ ನೀಡಿ: ವಿವರಗಳನ್ನು ಸಲ್ಲಿಸಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ.
- ಡೌನ್‌ಲೋಡ್: ಭವಿಷ್ಯದ ಬಳಕೆಗಾಗಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!
ಡಿಜಿಲಾಕರ್ (DigiLocker) ಮೂಲಕ ಅಂಕಪಟ್ಟಿ:
ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿಗಳನ್ನು ಪಡೆಯಲು ಡಿಜಿಲಾಕರ್ ಸುಲಭವಾದ ಮಾರ್ಗವಾಗಿದೆ. ವಿದ್ಯಾರ್ಥಿಗಳು ತಮ್ಮ ‘APAAR ID’ ಅಥವಾ ಶಾಲೆಯಿಂದ ನೀಡಲಾದ ಆಕ್ಸೆಸ್ ಕೋಡ್ (Six-digit PIN) ಬಳಸಿ ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿ ತಮ್ಮ ಮೂಲ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಸುರಕ್ಷಿತವಾಗಿ ಪಡೆಯಬಹುದು.
ತೇರ್ಗಡೆ ಅಂಕಗಳು ಮತ್ತು ಸುಧಾರಣಾ ಪರೀಕ್ಷೆ:
ಪ್ರತಿಯೊಂದು ವಿಷಯದಲ್ಲಿ ತೇರ್ಗಡೆಯಾಗಲು ವಿದ್ಯಾರ್ಥಿಗಳು ಕನಿಷ್ಠ ಶೇ.33 ಅಂಕಗಳನ್ನು ಗಳಿಸಬೇಕು. ಫಲಿತಾಂಶ ಪ್ರಕಟವಾದ ನಂತರ, ಯಾವುದಾದರೂ ವಿಷಯದಲ್ಲಿ ಅಂಕ ಕಡಿಮೆ ಬಂದಿದ್ದರೆ ಅಥವಾ ತೃಪ್ತಿ ಇಲ್ಲದಿದ್ದರೆ, ವಿದ್ಯಾರ್ಥಿಗಳು ಮೇ 15 ರಿಂದ ನಡೆಯಲಿರುವ ಪರೀಕ್ಷೆಯಲ್ಲಿ ಗರಿಷ್ಠ 3 ವಿಷಯಗಳಿಗೆ ಹಾಜರಾಗಲು ಅವಕಾಶವಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 am, Tue, 14 April 26




