Vaishnavi Gowda: ನಾನು ಜೀವನವನ್ನು ಒಂಟಿಯಾಗಿ ಕಳೆದಿದ್ದೇನೆ, ಈಗ ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದೇನೆ; ವೈಷ್ಣವಿ

Bigg Boss 8: ಮೇ 6ರ ಎಪಿಸೋಡ್​ನಲ್ಲಿ ದಿವ್ಯಾ ಸುರೇಶ್​ ಜತೆ ವೈಷ್ಣವಿ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ವೈಷ್ಣವಿ ಅವರು ಮದುವೆ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ.

Vaishnavi Gowda: ನಾನು ಜೀವನವನ್ನು ಒಂಟಿಯಾಗಿ ಕಳೆದಿದ್ದೇನೆ, ಈಗ ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದೇನೆ; ವೈಷ್ಣವಿ
ವೈಷ್ಣವಿ ಗೌಡ
Edited By:

Updated on: May 07, 2021 | 9:27 AM

ವೈಷ್ಣವಿ ಅವರದ್ದು ಎಲ್ಲರಿಗೂ ಇಷ್ಟವಾಗುವ ಗುಣ. ಹೀಗಾಗಿ, ಅವರು ಬಿಗ್​ ಬಾಸ್​ ಮನೆಯಲ್ಲಿ ನಾಮಿನೇಟ್​ ಆಗಿದ್ದು ತುಂಬಾನೇ ಕಡಿಮೆ. ನಾಮಿನೇಟ್​ ಆದರೂ ಅವರು ಸುಲಭವಾಗಿ ಬಚಾವ್​ ಆಗಿದ್ದಾರೆ. ಈ ಮಧ್ಯೆ ಅವರು ಅನೇಕ ಬಾರಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಈಗ ಅವರು ತಾವು ಮದುವೆ ಬಗ್ಗೆ ಹೊಂದಿರುವ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ.

ಮೇ 6ರ ಎಪಿಸೋಡ್​ನಲ್ಲಿ ದಿವ್ಯಾ ಸುರೇಶ್​ ಜತೆ ವೈಷ್ಣವಿ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ವೈಷ್ಣವಿ ಅವರು ಮದುವೆ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದೇನೆ. ಮದುವೆ ಕಾನ್ಸೆಪ್ಟ್ ಅಂದ್ರೆ ಇಷ್ಟ. ಪ್ರೀತಿ ಬಗ್ಗೆ ನಂಗೆ ಅತಿಯಾದ ನಂಬಿಕೆ ಇದೆ ಎಂದು ವೈಷ್ಣವಿ ಹೇಳಿದ್ದಾರೆ.

ಮದುವೆ ಆದರೆ ನನ್ನವರು ಅಂತ ಒಬ್ಬರು ಇರ್ತಾರೆ. ಕುಟುಂಬ ಹಾಗೂ ಸಹೋದರರ ಜತೆ ಎಲ್ಲವನ್ನೂ ಹೇಳಿಕೊಳ್ಳೋಕೆ ಆಗಲ್ಲ. ಆದರೆ, ಗಂಡನ ಜತೆ ಬಹುತೇಕ ವಿಚಾರಗಳನ್ನು ಶೇರ್​ ಮಾಡಿಕೊಳ್ಳಬಹುದು. ನಾನು ಜೀವನವನ್ನು ಒಂಟಿಯಾಗಿ ಕಳೆದಿದ್ದೇನೆ. ನನ್ನವರು ಅಂತ ತುಂಬಾ ಕಡಿಮೆ. ನಂಗೆ ಒಂದು ಕನೆಕ್ಷನ್​ ಬೇಕು ಎಂದರು ವೈಷ್ಣವಿ. ಈ ಮೂಲಕ ವೈಷ್ಣವಿ ಪ್ರೀತಿ ಮಾಡಬೇಕು ಎನ್ನುವ ವಿಚಾರ ಬಿಚ್ಚಿಟ್ಟರು.

ಈ ಮೊದಲು ಬಿಗ್​ ಬಾಸ್​ ಮನೆಯಲ್ಲಿ ಪ್ರೀತಿ ವಿಚಾರ ಮಾತನಾಡಿದ್ದರು. ಚಿಕ್ಕ ವಯಸ್ಸಿನಿಂದಲೂ ನನಗೆ ಲವ್​ ಮಾಡಬೇಕು, ರಿಲೇಷನ್​ಶಿಪ್​ನಲ್ಲಿ ಇರಬೇಕು ಎಂಬ ಆಸೆ ಇತ್ತು. ನನ್ನ ಸ್ನೇಹಿತೆಯರೆಲ್ಲ ರಿಲೇಷನ್​ಶಿಪ್​ನಲ್ಲಿ ಇದ್ದರು. ತಮಗೆ ಬಾಯ್​ಫ್ರೆಂಡ್​ ಇದಾನೆ ಅಂತ ಹೇಳಿಕೊಳ್ತಾ ಇದ್ದರು. ಆದರೆ ನಂಗೆ ಲವ್​ ಆಗಿರಲಿಲ್ಲ. ನನಗೇನು ಕಡಿಮೆ ಆಗಿದೆ? ನಾನು ಯಾಕೆ ಯಾವಾಗಲೂ ಸಿಂಗಲ್​ ಆಗಿ ಇರುತ್ತೇನೆ? ಎಂದಿದ್ದರು ವೈಷ್ಣವಿ.

ಇದನ್ನೂ ಓದಿ: ಹೀಗೆ ಆದರೆ ಒಂದು ದಿನ ಸರ್ಜರಿ ಮಾಡಬೇಕಾಗುತ್ತದೆ!; ವೈಷ್ಣವಿಗೆ ಸುದೀಪ್​ ಎಚ್ಚರಿಕೆ

ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ; ಬಿಗ್​ ಬಾಸ್​ ಮನೆಯಲ್ಲಿ ಶಮಂತ್​-ಪ್ರಿಯಾಂಕಾ ಪ್ರೇಮಕಥೆ ಆರಂಭ?

Published On - 9:21 am, Fri, 7 May 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us