Sandhya Mukherjee Death: ಪದ್ಮ ಪ್ರಶಸ್ತಿ ನಿರಾಕರಿಸಿದ್ದ ಖ್ಯಾತ ಗಾಯಕಿ ಹೃದಯಾಘಾತದಿಂದ ನಿಧನ
ಕೊರೊನಾ ವೈರಸ್ ಪ್ರಕರಣಗಳು ನಿಧಾನವಾಗಿ ಕಡಿಮೆ ಆಗುತ್ತಿವೆ. ಆದಾಗ್ಯೂ ಅನೇಕರಿಗೆ ಕೊವಿಡ್ ಅಂಟುತ್ತಿದೆ. ಸಂಧ್ಯಾ ಮುಖರ್ಜಿ ಅವರಿಗೂ ಕೊವಿಡ್ ಅಂಟಿತ್ತು. ಜನವರಿ ಅಂತ್ಯದ ವೇಳೆಗೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಖ್ಯಾತ ಬೆಂಗಾಳಿ ಗಾಯಕಿ ಸಂಧ್ಯಾ ಮುಖರ್ಜಿ (Sandhya Mukherjee) ಅವರು ಮಂಗಳವಾರ (ಫೆಬ್ರವರಿ 15) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಸಂಧ್ಯಾ ಅವರಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಏಕಾಏಕಿ ಹೃದಯಾಘಾತ ಸಂಭವಿಸಿದೆ. ಇತ್ತೀಚೆಗೆ ಪದ್ಮಶ್ರೀ (Padma Shre) ಪ್ರಶಸ್ತಿ ನಿರಾಕರಿಸಿದ ಕಾರಣಕ್ಕೆ ಅವರು ಸುದ್ದಿಯಾಗಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.
ಕೊರೊನಾ ವೈರಸ್ ಪ್ರಕರಣಗಳು ನಿಧಾನವಾಗಿ ಕಡಿಮೆ ಆಗುತ್ತಿವೆ. ಆದಾಗ್ಯೂ ಅನೇಕರಿಗೆ ಕೊವಿಡ್ ಅಂಟುತ್ತಿದೆ. ಸಂಧ್ಯಾ ಮುಖರ್ಜಿ ಅವರಿಗೂ ಕೊವಿಡ್ ಅಂಟಿತ್ತು. ಜನವರಿ ಅಂತ್ಯದ ವೇಳೆಗೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಹಲವು ವಾರಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಲೇ ಇತ್ತು. ಆದರೆ, ಇಂದು ಏಕಾಏಕಿ ಅವರಿಗೆ ಹೃದಯಾಘಾತ ಸಂಭವಿಸಿದೆ. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸಂಧ್ಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿ ಸುದ್ದಿಯಾಗಿದ್ದರು. ಜನವರಿ 26ರಂದು ಈ ಬಗ್ಗೆ ಮಾಹಿತಿ ನೀಡಿದ್ದ ಸಂಧ್ಯಾ ಮಗಳು ಸೌಮಿ, ‘ನನ್ನ ತಾಯಿಗೆ ಸರ್ಕಾರ ಪದ್ಮಶ್ರೀ ನೀಡಲು ಬಂದಿದೆ. 90ನೇ ವಯಸ್ಸಿಗೆ ಪದ್ಮಶ್ರೀ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಅವರು ರಾಜಕೀಯದ ಜತೆ ನಂಟು ಇಟ್ಟುಕೊಂಡಿಲ್ಲ. ಅವರು ಪದ್ಮಶ್ರೀ ನಿರಾಕರಿಸಿದ ವಿಚಾರದಲ್ಲಿ ಯಾವುದೇ ರಾಜಕೀಯ ಕಾರಣವನ್ನು ಹುಡುಕಬೇಡಿ. ಇದು ಅವಮಾನದ ರೀತಿ ಅನಿಸುತ್ತಿದೆ’ ಎಂದು ಸೌಮಿ ಹೇಳಿದ್ದರು.
Legendary Bengali singer Sandhya Mukherjee passes away following massive cardiac arrest: Hospital sources
— Press Trust of India (@PTI_News) February 15, 2022
60 ಮತ್ತು 70ರ ದಶಕದಲ್ಲಿ ಸಂಧ್ಯಾ ಮುಖರ್ಜಿ ಅವರು ಬೆಂಗಾಳಿ ಭಾಷೆಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಹನ್ನೆರಡು ಇತರ ಭಾಷೆಗಳಲ್ಲೂ ಅವರು ಹಾಡಿದ್ದಾರೆ. ಹೇಮಂತ್ ಮುಖರ್ಜಿ ಅವರ ಜತೆ ಸೇರಿ ಸಾಕಷ್ಟು ರೊಮ್ಯಾಂಟಿಕ್ ಹಾಡುಗಳನ್ನು ಹಾಡಿದ್ದಾರೆ. ಪಶ್ಚಿಮ ಬಂಗಾಳ ನೀಡುವ ‘ಬಂಗಾ ಬಿಭೂಷಣ’ ಪ್ರಶಸ್ತಿಯನ್ನು ಸಂಧ್ಯಾ ಅವರಿಗೆ ನೀಡಿ ಗೌರವಿಸಲಾಗಿದೆ. ಇದು ಪಶ್ಚಿಮ ಬಂಗಾಳ ಸರ್ಕಾರ ನೀಡುವ ಅತ್ಯುತ್ತಮ ಗೌರವ ಆಗಿದೆ. 1970ರಲ್ಲಿ ತೆರೆಗೆ ಬಂದ ‘ಜಯ್ ಜಯಂತಿ’ ಸಿನಿಮಾದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: Sandhya Mukherjee: ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದ ಗಾಯಕಿ ಸಂಧ್ಯಾ ಮುಖರ್ಜಿ ಆಸ್ಪತ್ರೆಗೆ ದಾಖಲು
ಪದ್ಮಶ್ರೀಗೆ ಕಿರಿಯ ಕಲಾವಿದರು ಹೆಚ್ಚು ಅರ್ಹರು: ಪ್ರಶಸ್ತಿ ತಿರಸ್ಕರಿಸಿದ 90ರ ಹರೆಯದ ಗಾಯಕಿ ಸಂಧ್ಯಾ ಮುಖರ್ಜಿ