ಪದ್ಮಶ್ರೀಗೆ ಕಿರಿಯ ಕಲಾವಿದರು ಹೆಚ್ಚು ಅರ್ಹರು: ಪ್ರಶಸ್ತಿ ತಿರಸ್ಕರಿಸಿದ 90ರ ಹರೆಯದ ಗಾಯಕಿ ಸಂಧ್ಯಾ ಮುಖರ್ಜಿ
Padma Shri award ದೆಹಲಿಯಿಂದ ಕರೆ ಮಾಡಿದ ಹಿರಿಯ ಅಧಿಕಾರಿಗೆ ತನ್ನ ತಾಯಿ ಪದ್ಮಶ್ರೀ ಪುರಸ್ಕೃತೆ ಎಂದು ಹೆಸರಿಸಲು ಇಚ್ಛಿಸುವುದಿಲ್ಲ ಮತ್ತು ತನ್ನ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ "ಅವಮಾನ" ಅನುಭವಿಸಿದೆ ಎಂದು ಮುಖರ್ಜಿ ಅವರ ಪುತ್ರಿ ಸೌಮಿ ಸೆನ್‌ಗುಪ್ತಾ ಹೇಳಿದ್ದಾರೆ.
ದೆಹಲಿ: 90ರ ಹರೆಯದ ಹಿರಿಯ ಗಾಯಕಿ ಸಂಧ್ಯಾ ಮುಖೋಪಾಧ್ಯಾಯ ಎಂದೇ ಚಿರಪರಿಚಿತರಾಗಿರುವ ಸಂಧ್ಯಾ ಮುಖರ್ಜಿ (Sandhya Mukherjee) ಅವರು ಮಂಗಳವಾರ ಪದ್ಮಶ್ರೀ ಪ್ರಶಸ್ತಿಯ (Padma Shri award )ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. ಇದು ಕಿರಿಯ ಕಲಾವಿದರಿಗೆ ಹೆಚ್ಚು ಅರ್ಹವಾಗಿದೆ ಮತ್ತು ತಮ್ಮಂತವರಿಗೆ ಅಲ್ಲಎಂದು ಹೇಳಿದ್ದಾರೆ. ದೇಶದ ನಾಗರಿಕ ನೀಡುವ ಅತ್ಯುನ್ನತ ಗೌರವವನ್ನು ನಿರಾಕರಿಸಿದ ಪಶ್ಚಿಮ ಬಂಗಾಳದ ಎರಡನೇ ವ್ಯಕ್ತಿಯಾಗಿದ್ದಾರೆ . ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಮಂಗಳವಾರ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಇದಕ್ಕೆ ಹೆಸರಿಸಿದ್ದು ನನಗೆ ತಿಳಿದಿಲ್ಲ, ಹಾಗಾಗಿ ಪ್ರಶಸ್ತಿ ತಿರಸ್ಕರಿಸುವುದಾಗಿ ಭಟ್ಟಾಚಾರ್ಯ ಹೇಳಿದ್ದರು. ದೆಹಲಿಯಿಂದ ಕರೆ ಮಾಡಿದ ಹಿರಿಯ ಅಧಿಕಾರಿಗೆ ತನ್ನ ತಾಯಿ ಪದ್ಮಶ್ರೀ ಪುರಸ್ಕೃತೆ ಎಂದು ಹೆಸರಿಸಲು ಇಚ್ಛಿಸುವುದಿಲ್ಲ ಮತ್ತು ತನ್ನ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ “ಅವಮಾನ” ಅನುಭವಿಸಿದೆ ಎಂದು ಮುಖರ್ಜಿ ಅವರ ಪುತ್ರಿ ಸೌಮಿ ಸೆನ್‌ಗುಪ್ತಾ ಹೇಳಿದ್ದಾರೆ. ಗಣರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯಲ್ಲಿ ಪದ್ಮಶ್ರೀ ಎಂದು ಹೆಸರಿಸಲು ಒಪ್ಪಿಗೆ ಕೋರಿ ಅವರನ್ನು ಸಂಪರ್ಕಿಸಲಾಗಿತ್ತು. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯ ಪ್ರಶಸ್ತಿ ನಿರಾಕರಣೆ ರಾಜಕೀಯವಾಗಿದ್ದರೂ ಅವರು ಬಿಜೆಪಿ ಸರ್ಕಾರದ ತೀವ್ರ ಟೀಕಾಕಾರರಾಗಿದ್ದಾರೆ. ತಮ್ಮ ತಾಯಿಯ ನಿರ್ಧಾರಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸೆನ್‌ಗುಪ್ತಾ ಹೇಳಿದ್ದಾರೆ.
ಭಾರತದ ಅತ್ಯುನ್ನತ ನಾಗರಿಕ ಗೌರವಗಳನ್ನು ತಿರಸ್ಕರಿಸುವವರು ಅತ್ಯಂತ ಅಪರೂಪ. ಅವರು ಪ್ರಕಟಣೆಯ ಮೊದಲು ಸ್ವೀಕಾರವನ್ನು ದೃಢೀಕರಿಸುವ ಅಗತ್ಯವಿದೆ. ಚಲನಚಿತ್ರ ಬರಹಗಾರ ಸಲೀಂ ಖಾನ್ ಅವರು 2015 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು.ಅವರಿಗಿಂತ ಮೊದಲು ಇತಿಹಾಸಕಾರರಾದ ರೋಮಿಲಾ ಥಾಪರ್ ಅವರು 2005 ರಲ್ಲಿ ಪದ್ಮಭೂಷಣವನ್ನು ನಿರಾಕರಿಸಿದ್ದರು. 1984 ರಲ್ಲಿ ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಅನ್ನು ಮುತ್ತಿಗೆ ಹಾಕಿದ ಕಾರಣ 1974ರ ಪ್ರಶಸ್ತಿಯನ್ನು ಅವರು ಹಿಂದಿರುಗಿಸಿದ್ದರು.
ಲೇಖಕ ಖುಷ್ವಂತ್ ಸಿಂಗ್ ಅವರು ತಮ್ಮ 1974 ರ ಪದ್ಮಭೂಷಣವನ್ನು 1984 ರಲ್ಲಿ ಇದೇ ವಿಷಯಕ್ಕೆ ಹಿಂದಿರುಗಿಸಿದ್ದರು ಆದರೆ ಅವರು 2007 ರಲ್ಲಿ ಪದ್ಮವಿಭೂಷಣವನ್ನು ಸ್ವೀಕರಿಸಿದರು.
“90 ನೇ ವಯಸ್ಸಿನಲ್ಲಿ, ಸುಮಾರು ಎಂಟು ದಶಕಗಳ ಕಾಲ ಗಾಯನ ವೃತ್ತಿಜೀವನವನ್ನು ಹೊಂದಿರುವ ಅವರನ್ನು ಪದ್ಮಶ್ರೀಗೆ ಆಯ್ಕೆಯಾಗಿರುವುದು ಅವರ ಸ್ಥಾನಮಾನದ ಗಾಯಕಿಯನ್ನು ಅವಮಾನಿಸುತ್ತದೆ” ಎಂದು ಸೆನ್‌ಗುಪ್ತಾ ಹೇಳಿದರು.
, ಭಾರತ ರತ್ನ, ಪದ್ಮವಿಭೂಷಣ ಮತ್ತು ಪದ್ಮಭೂಷಣ ನಂತರ “ವಿಶಿಷ್ಟ ಸೇವೆಗಾಗಿ” ನೀಡಲಾಗುವ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾಗಿದೆ ಪದ್ಮಶ್ರೀ.
“ಪದ್ಮಶ್ರೀಗೆ ಕಿರಿಯ ಕಲಾವಿದರು ಹೆಚ್ಚು ಅರ್ಹರು, ‘ಗೀತಶ್ರೀ’ ಸಂಧ್ಯಾ ಮುಖೋಪಾಧ್ಯಾಯ ಅಲ್ಲ. ಅವರ ಕುಟುಂಬ ಮತ್ತು ಅವರ ಎಲ್ಲಾ ಹಾಡುಗಳ ಪ್ರೇಮಿಗಳಿಗೂ ಇದೇ ಅಭಿಪ್ರಾಯವಿದೆ ಎಂದು ಮಗಳು ಹೇಳಿದರು. ಬಂಗಾಳದಲ್ಲಿ ಸಂಗೀತದ ಐಕಾನ್ ಎಂದು ಪರಿಗಣಿಸಲ್ಪಟ್ಟ ಗಾಯಕ ಎಸ್ ಡಿ ಬರ್ಮನ್, ಅನಿಲ್ ಬಿಸ್ವಾಸ್, ಮದನ್ ಮೋಹನ್, ರೋಷನ್ ಮತ್ತು ಸಲೀಲ್ ಚೌಧರಿ ಸೇರಿದಂತೆ ಹಲವಾರು ಹಿಂದಿ ಚಲನಚಿತ್ರ ಸಂಗೀತ ನಿರ್ದೇಶಕರಿಗಾಗಿ ಸಂಧ್ಯಾ ಹಾಡಿದ್ದಾರೆ.
ಮುಖರ್ಜಿಯವರು 2011 ರಲ್ಲಿ ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಬಂಗಾ ಬಿಭೂಷಣ” ವನ್ನು ಪಡೆದರು. ಇದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಾಪಿಸಿದ್ದರು. 1970 ರಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು ಸಂಧ್ಯಾ ಮುಖರ್ಜಿ.
ಇದನ್ನೂ ಓದಿ: Padma Awards 2022: ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸದಿರಲು ಬುದ್ಧದೇವ್ ಭಟ್ಟಾಚಾರ್ಯ ನಿರ್ಧಾರ