AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಒಟಿಟಿಗೆ ಬರೋಕೆ ರೆಡಿ ಆಯ್ತು ‘ಖುಷಿ’ ಸಿನಿಮಾ; ಪ್ಲಾಟ್​ಫಾರ್ಮ್, ದಿನಾಂಕದ ಬಗ್ಗೆ ಇಲ್ಲಿದೆ ವಿವರ

‘ಖುಷಿ’ ಸಿನಿಮಾ ಪಕ್ಕಾ ಫ್ಯಾಮಿಲಿ ಕಥೆ. ಇಷ್ಟು ದಿನ ರಗಡ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ವಿಜಯ್ ದೇವರಕೊಂಡ ಅವರು ಫ್ಯಾಮಿಲಿ ಮ್ಯಾನ್ ಆಗಿ ಗಮನ ಸೆಳೆದರು. ಈ ಸಿನಿಮಾ ಅನೇಕರಿಗೆ ಇಷ್ಟವಾಗಿದೆ. ‘ಖುಷಿ’ ರಿಲೀಸ್ ಆದ ಬೆನ್ನಲ್ಲೇ ‘ಜವಾನ್’ ತೆರೆಗೆ ಬಂದಿದ್ದರಿಂದ ಈ ಚಿತ್ರಕ್ಕೆ ಕೊಂಚ ಹಿನ್ನಡೆ ಆಯಿತು.

Samantha: ಒಟಿಟಿಗೆ ಬರೋಕೆ ರೆಡಿ ಆಯ್ತು ‘ಖುಷಿ’ ಸಿನಿಮಾ; ಪ್ಲಾಟ್​ಫಾರ್ಮ್, ದಿನಾಂಕದ ಬಗ್ಗೆ ಇಲ್ಲಿದೆ ವಿವರ
ಖುಷಿ ಸಿನಿಮಾ ಪೋಸ್ಟರ್
ರಾಜೇಶ್ ದುಗ್ಗುಮನೆ
|

Updated on:Sep 14, 2023 | 11:35 AM

Share

ವಿಜಯ್ ದೇವರಕೊಂಡ ಹಾಗೂ ಸಮಂತಾ ರುತ್ ಪ್ರಭು ನಟನೆಯ ‘ಖುಷಿ’ ಸಿನಿಮಾ (Kushi Movie) ಗೆಲುವಿನ ನಗೆ ಬೀರಿದೆ. ಈ ಸಿನಿಮಾ ಸೆಪ್ಟೆಂಬರ್ 1ರಂದು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಮೊದಲ ಐದು ದಿನಗಳಲ್ಲಿ ಸಿನಿಮಾ 70 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡದವರೇ ಅನೌನ್ಸ್ ಮಾಡಿದ್ದಾರೆ. ಈಗ ಸಿನಿಮಾದ ಅಬ್ಬರ ಕೊಂಚ ಕಡಿಮೆ ಆಗಿದೆ. ಈ ಕಾರಣದಿಂದ ಸಿನಿಮಾ ಶೀಘ್ರವೇ ಒಟಿಟಿಗೆ ಕಾಲಿಡಲಿದೆ ಎನ್ನಲಾಗುತ್ತಿದೆ. ಈ ಕುರಿತು ತಂಡದ ಕಡೆಯಿಂದ ಅಧಿಕೃತ ಘೋಷಣೆ ಬಾಕಿ ಇದೆ.

‘ಖುಷಿ’ ಸಿನಿಮಾ ಪಕ್ಕಾ ಫ್ಯಾಮಿಲಿ ಕಥೆ. ಇಷ್ಟು ದಿನ ರಗಡ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ವಿಜಯ್ ದೇವರಕೊಂಡ ಅವರು ಫ್ಯಾಮಿಲಿ ಮ್ಯಾನ್ ಆಗಿ ಗಮನ ಸೆಳೆದರು. ಈ ಸಿನಿಮಾ ಅನೇಕರಿಗೆ ಇಷ್ಟವಾಗಿದೆ. ‘ಖುಷಿ’ ರಿಲೀಸ್ ಆದ ಬೆನ್ನಲ್ಲೇ ‘ಜವಾನ್’ ತೆರೆಗೆ ಬಂದಿದ್ದರಿಂದ ಈ ಚಿತ್ರಕ್ಕೆ ಕೊಂಚ ಹಿನ್ನಡೆ ಆಯಿತು. ಹಲವು ಕಡೆಗಳಲ್ಲಿ ‘ಖುಷಿ’ ಬದಲು ‘ಜವಾನ್’ ಸಿನಿಮಾ ಪ್ರದರ್ಶನ ಮಾಡಲಾಗಿದೆ. ಹೀಗಾಗಿ ಸಿನಿಮಾ ಕಲೆಕ್ಷನ್ ಕಡಿಮೆ ಆಗಿದೆ. ಈ ಕಾರಣದಿಂದ ಸಿನಿಮಾ ಒಟಿಟಿಗೆ ತರಲು ಸಿದ್ಧತೆ ನಡೆದಿದೆ.

‘ಖುಷಿ’ ಸಿನಿಮಾದ ಒಟಿಟಿ ಹಕ್ಕು ನೆಟ್​​ಫ್ಲಿಕ್ಸ್ ಪಾಲಾಗಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 28 ಅಥವಾ ಅಕ್ಟೋಬರ್ 4ರಂದು ‘ಖುಷಿ’ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ ಎನ್ನಲಾಗುತ್ತಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಚಿತ್ರವನ್ನು ಒಟಿಟಿಯಲ್ಲಿ ನೋಡಲು ಕಾದು ಕುಳಿತವರಿಗೆ ಈ ಸುದ್ದಿ ಖುಷಿ ನೀಡಿದೆ.

ಇದನ್ನೂ ಓದಿ: ‘ಖುಷಿ’ ಸಿನಿಮಾ ಸಕ್ಸಸ್: ಸಂಭಾವನೆ ದಾನ ಮಾಡಿ ಖುಷಿ ಕಂಡ ವಿಜಯ್ ದೇವರಕೊಂಡ

‘ಖುಷಿ’ ಚಿತ್ರದ ಬಗ್ಗೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ವಿಜಯ್ ವಿವಿಧ ನಗರಗಳಿಗೆ ತೆರಳಿ ಸಿನಿಮಾ ಪ್ರಚಾರದಲ್ಲಿ ಭಾಗಿ ಆದರು. ಸಮಂತಾ ಅಮೆರಿಕದಲ್ಲಿ ಇದ್ದಿದ್ದರಿಂದ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಮಾಡಲು ಅವರಿಗೆ ಸಾಧ್ಯವಾಗಿಲ್ಲ.  ಶಿವ ನಿರ್ವಾಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಸಿನಿಮಾ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:30 am, Thu, 14 September 23