ವಿಜಯ್ ದೇವರಕೊಂಡ ಹುಟ್ಟುಹಬ್ಬ: ಏಳು ನಗರಗಳಲ್ಲಿ ಅಭಿಮಾನಿಗಳಿಗೆ ಬರ್ತ್​ಡೇ ಟ್ರೀಟ್ ಕೊಟ್ಟ ನಟ

|

Updated on: May 10, 2023 | 12:13 AM

Vijay Deverakonda: ವಿಜಯ್ ದೇವರಕೊಂಡ ಹುಟ್ಟುಹಬ್ಬದ ಪ್ರಯುಕ್ತ ದೇಶದ ಏಳು ಪ್ರಮುಖ ನಗರಗಳಲ್ಲಿ ತಮ್ಮ ಅಭಿಮಾನಿಗಳಿಗೆ ಬರ್ತ್​ ಡೇ ಟ್ರೀಟ್ ಕೊಟ್ಟಿದ್ದಾರೆ.

ವಿಜಯ್ ದೇವರಕೊಂಡ ಹುಟ್ಟುಹಬ್ಬ: ಏಳು ನಗರಗಳಲ್ಲಿ ಅಭಿಮಾನಿಗಳಿಗೆ ಬರ್ತ್​ಡೇ ಟ್ರೀಟ್ ಕೊಟ್ಟ ನಟ
ವಿಜಯ್ ದೇವರಕೊಂಡ
Follow us on

ತೆಲುಗಿನ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Deverakonda) ಹುಟ್ಟುಹಬ್ಬ ಇಂದು (ಮೇ 09). ತೆಲುಗು ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಸ್ಟಾರ್ ಪಟ್ಟಕ್ಕೆ ಏರಿದ ನಟ ವಿಜಯ್. ಯುವ ಅಭಿಮಾನಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿರುವ ವಿಜಯ್​ಗೆ ದೊಡ್ಡ ಸಂಖ್ಯೆಯ ಯುವತಿಯರು ಸಹ ಅಭಿಮಾನಿಗಳಾಗಿದ್ದಾರೆ. ವಿಜಯ್ ದೇವರಕೊಂಡ ಸಹ ತಮ್ಮ ಅಭಿಮಾನಿಗಳನ್ನು (Fan) ಬಹುವಾಗಿ ಪ್ರೀತಿಸುತ್ತಾರೆ. ಇಂದು ತಮ್ಮ ಹುಟ್ಟುಹಬ್ಬದ (Birthday) ಪ್ರಯುಕ್ತ ದೇಶದ ಏಳು ವಿವಿಧ ನಗರಗಳಲ್ಲಿ ತಮ್ಮ ಅಭಿಮಾನಿಗಳಿಗೆ ಬರ್ತ್​ಡೇ ಟ್ರೀಟ್ ಕೊಟ್ಟಿದ್ದಾರೆ.

ಸ್ಟಾರ್ ನಟರ ಅಭಿಮಾನಿಗಳು, ನೆಚ್ಚಿನ ನಟನ ಹುಟ್ಟುಹಬ್ಬದಂದು ಫ್ಲೆಕ್ಸ್ ಕಟ್ಟಿ, ಮನೆ ಬಳಿ ತೆರಳಿ ಕೇಕ್ ಕತ್ತರಿಸುವುದು ಸಹಜ. ಹೀಗೆ ಮನೆಯ ಬಳಿ ಬಂದ ಅಭಿಮಾನಿಗಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ನಟರು ಮಾಡಿರುತ್ತಾರೆ. ಆದರೆ ವಿಜಯ್ ದೇವರಕೊಂಡ ಭಿನ್ನವಾಗಿ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ. ಅದೂ ದೇಶದ ಏಳು ಪ್ರಮುಖ ನಗರಗಳಲ್ಲಿರುವ ತಮ್ಮ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ ವಿಜಯ್ ದೇವರಕೊಂಡ.

ಹುಟ್ಟುಹಬ್ಬದ ಪ್ರಯುಕ್ತ ಹೈದರಾಬಾದ್, ಚೆನ್ನೈ, ಬೆಂಗಳೂರು, ಪುಣೆ, ಮುಂಬೈ, ಡೆಲ್ಲಿ, ವೈಜಾಗ್ ಗಳಲ್ಲಿ ದಿ ದೇವರಕೊಂಡ ಬರ್ತ್​ಡೇ ಟ್ರಕ್​ಗಳನ್ನು ಲಾಂಚ್ ಮಾಡಿದ್ದು ಈ ನಗರಗಳಲ್ಲಿ ದಿ ದೇವರಕೊಂಡ ಬರ್ತ್​ಡೇ ಟ್ರಕ್​ ಗಳು ನಗರದ ವಿವಿಧ ಏರಿಯಾಗಳಲ್ಲಿ, ಕಾಲೇಜುಗಳ ಬಳಿ ಸಂಚರಿಸಿದ್ದು, ವಿಜಯ್ ದೇವರಕೊಂಡ ಅಭಿಮಾನಿಗಳಗೆ ಉಚಿತ ಐಸ್​ಕ್ರೀಮ್​ಗಳನ್ನು ವಿತರಿಸಿವೆ. ದಿ ದೇವರಕೊಂಡ ಬರ್ತ್​ಡೇ ಟ್ರಕ್​ಗಳ ಬಳಿ ಐಸ್​ಕ್ರೀಂ ತಿನ್ನುತ್ತಿರುವ ಫೋಟೊಗಳನ್ನು ವಿಜಯ್ ದೇವರಕೊಂಡ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ಐಸ್​ಕ್ರೀಂ ಟ್ರೀಟ್ ಮಾತ್ರವೇ ಅಲ್ಲದೆ. ವಿಜಯ್ ದೇವರಕೊಂಡ ಒಡೆತನದ ರೌಡಿ ಹೆಸರಿನ ಫ್ಯಾಷನ್ ಬ್ರ್ಯಾಂಡ್​ ಇಂದು ವಿಶೇಷ ಆಫರ್​ಗಳನ್ನು ಸಹ ಬಿಟ್ಟಿದೆ. ದೇವರಕೊಂಡ ಹುಟ್ಟುಹಬ್ಬದ ಪ್ರಯುಕ್ತ ರೌಡಿ ಬ್ರ್ಯಾಂಡ್​ನ ಹಲವು ಬಟ್ಟೆಗಳ ಮೇಲೆ ವಿಶೇಷ ಆಫರ್​ಗಳನ್ನು ನೀಡಲಾಗಿದೆ. ಈ ಆಫರ್​ಗಳು ಇಂದಿಗೆ ಮಾತ್ರವೇ ಸೀಮಿತವಾಗಿವೆ.

ಇನ್ನು ವಿಜಯ್ ದೇವರಕೊಂಡ ಹುಟ್ಟುಹಬ್ಬದ ಪ್ರಯುಕ್ತ ವಿಜಯ್ ದೇವರಕೊಂಡ, ಸಮಂತಾ ನಟನೆಯ ಖುಷಿ ಸಿನಿಮಾದ ಹಾಡೊಂದನ್ನು ಸಹ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಅದು ಮಾತ್ರವೇ ಅಲ್ಲದೆ ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ ಸಿನಿಮಾದ ಪೋಸ್ಟರ್ ಗಮನ ಸೆಳೆಯುತ್ತಿದೆ.

ವಿಜಯ್ ದೇವರಕೊಂಡ ನಟನೆಯ ಈ ಹಿಂದಿನ ಸಿನಿಮಾ ಲೈಗರ್ ಫ್ಲಾಪ್ ಆಗಿದೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾ ದೊಡ್ಡ ಫ್ಲಾಪ್ ಆಗುವ ಮೂಲಕ ದೇವರಕೊಂಡಗೆ ತುಸು ಹಿನ್ನಡೆ ಮೂಡಿಸಿದೆ. ಇದೀಗ ಸಮಂತಾ ಜೊತೆಗೆ ಖುಷಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಗೀತಾ ಗೋವಿಂದಂ 2 ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಅದರ ಜೊತೆಗೆ ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾರ ಜೊತೆಗೆ ಹೆಸರಡದ ಆಕ್ಷನ್ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 pm, Tue, 9 May 23