AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush Trailer: ಫ್ಯಾನ್ಸ್​ಗೆ ಪ್ರೀತಿ ತೋರಿಸಿದ್ದೇ ತಪ್ಪಾಯ್ತು; ‘ಆದಿಪುರುಷ್​’ ಟ್ರೇಲರ್​ ವಿಚಾರದಲ್ಲಿ ನಿರಾಸೆ ಮೂಡಿಸಿದ ಅಭಿಮಾನಿಗಳು

Adipurush Trailer Leak: ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ ‘ಆದಿಪುರುಷ್​’ ಚಿತ್ರದ ಟ್ರೇಲರ್ ಲೀಕ್​ ಮಾಡಲಾಗಿದೆ. ಇದರಿಂದ ಚಿತ್ರತಂಡಕ್ಕೆ ನಿರಾಸೆ ಆಗಿದೆ.

Adipurush Trailer: ಫ್ಯಾನ್ಸ್​ಗೆ ಪ್ರೀತಿ ತೋರಿಸಿದ್ದೇ ತಪ್ಪಾಯ್ತು; ‘ಆದಿಪುರುಷ್​’ ಟ್ರೇಲರ್​ ವಿಚಾರದಲ್ಲಿ ನಿರಾಸೆ ಮೂಡಿಸಿದ ಅಭಿಮಾನಿಗಳು
ಪ್ರಭಾಸ್, ಕೃತಿ ಸನೋನ್​
ಮದನ್​ ಕುಮಾರ್​
|

Updated on: May 09, 2023 | 12:50 PM

Share

ಪ್ರಭಾಸ್​ ನಟನೆಯ ‘ಆದಿಪುರುಷ್​’ ಸಿನಿಮಾ (Adipurush) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನಾಗಿ ನಟಿಸಿದ್ದಾರೆ. ಅವರಿಗೆ ಕೃತಿ ಸನೋನ್​ ಅವರು ಜೋಡಿಯಾಗಿದ್ದು, ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೈಫ್​ ಅಲಿ ಖಾನ್​ ಅವರು ರಾವಣನಾಗಿ ಅಬ್ಬರಿಸಲು ಬರುತ್ತಿದ್ದಾರೆ. ಟ್ರೇಲರ್​ ಮೂಲಕ ದೂಳೆಬ್ಬಿಸಬೇಕು ಎಂಬುದು ‘ಆದಿಪುರುಷ್​’ ಚಿತ್ರತಂಡದ ಆಲೋಚನೆ ಆಗಿತ್ತು. ಆದರೆ ಚಿತ್ರತಂಡದ ಉತ್ಸಾಹಕ್ಕೆ ಬ್ರೇಕ್​ ಹಾಕುವಂತಹ ಒಂದು ಕೆಲಸ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು (ಮೇ 9) ಸಂಜೆ 5 ಗಂಟಗೆ ‘ಆದಿಪುರುಷ್​’ ಚಿತ್ರದ ಟ್ರೇಲರ್​ (Adipurush Trailer) ಬಿಡುಗಡೆ ಮಾಡಬೇಕು ಎಂಬುದು ತಂಡದ ಪ್ಲ್ಯಾನ್​ ಆಗಿತ್ತು. ಆದರೆ ಕೆಲವರು ಟ್ರೇಲರ್​ ಲೀಕ್​ ಮಾಡಿದ್ದಾರೆ. ಪ್ರಭಾಸ್​ (Prabhas) ಅವರು ತಮ್ಮ ಅಭಿಮಾನಿಗಳಿಗೆ ತೋರಿಸಿದ ಅತಿಯಾದ ಪ್ರೀತಿಯಿಂದಲೇ ಹೀಗೆಲ್ಲ ಆಗಿದೆ ಎನ್ನಲಾಗಿದೆ.

ಮೇ 8ರ ಸಂಜೆಯೇ ಅಭಿಮಾನಿಗಳಿಗಾಗಿ ವಿಶೇಷವಾಗಿ ಟ್ರೇಲರ್​ ಪ್ರದರ್ಶನ ಮಾಡಲಾಯಿತು. ಹೈದರಾಬಾದ್​ನ ಆಯ್ದ ಕೆಲವು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಬಿತ್ತರವಾದ ಟ್ರೇಲರ್​ ನೋಡಿ ಫ್ಯಾನ್ಸ್​ ಖುಷಿಪಟ್ಟರು. ಆದರೆ ಕೆಲವರು ಅದನ್ನು ರೆಕಾರ್ಡ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಬೇಸರ ಆಗಿದೆ.

ಇದನ್ನೂ ಓದಿ
Image
ನಿಕ್ ನೇಮ್​ನಿಂದ ಪ್ರಭಾಸ್​ನ ಕರೆದ ಅನುಷ್ಕಾ ಶೆಟ್ಟಿ; ನಟಿ ಪ್ರೀತಿಯಿಂದ ಇಟ್ಟ ಹೆಸರೇನು?
Image
ಕ್ಷುಲ್ಲಕ ಕಾರಣಕ್ಕೆ ಪವನ್ ಕಲ್ಯಾಣ್ ಅಭಿಮಾನಿಯನ್ನು ಕೊಂದ ಪ್ರಭಾಸ್ ಅಭಿಮಾನಿ
Image
Adipurush: ವಿದೇಶಿ ಪ್ರೇಕ್ಷಕರಿಗೆ ಮೊದಲು ದರ್ಶನ ನೀಡಲಿರುವ ‘ಆದಿಪುರುಷ್​’; ಟ್ರೈಬ್ಯಾಕಾದಲ್ಲಿ ಪ್ರೀಮಿಯರ್​
Image
‘ಆದಿಪುರುಷ್​’ ಚಿತ್ರದ ಅವಧಿ ಬರೋಬ್ಬರಿ 3 ಗಂಟೆ; ಪ್ರಭಾಸ್ ಅಭಿಮಾನಿಗಳಿಗೆ ಶುರುವಾಯ್ತು ಚಿಂತೆ

ಯೂಟ್ಯೂಬ್​ನಲ್ಲಿ ಸಿನಿಮಾದ ಟ್ರೇಲರ್​ ಎಷ್ಟು ಬಾರಿ ವೀಕ್ಷಣೆ ಕಾಣುತ್ತದೆ ಎಂಬುದರ ಆಧಾರದ ಮೇಲೆ ಹೈಪ್​ ಹೆಚ್ಚುತ್ತದೆ. ಆದರೆ ಈ ರೀತಿ ಲೀಕ್​ ಆದರೆ ಚಿತ್ರತಂಡ ಬಿಡುಗಡೆ ಮಾಡುವ ಯೂಟ್ಯೂಬ್​ ಚಾನೆಲ್​ನಲ್ಲಿ ವೀವ್ಸ್​ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಅದೇ ಈಗ ‘ಆದಿಪುರುಷ್​’ ಚಿತ್ರತಂಡಕ್ಕೆ ತಲೆನೋವಾಗಿದೆ. ಹಾಗಾಗಿ ಟ್ರೇಲರ್​ ಬಿಡುಗಡೆಯ ಸಮಯದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದೆ.

ಮೇ 9ರ ಸಂಜೆ 5 ಗಂಟೆಗೆ ಟ್ರೇಲರ್​ ರಿಲೀಸ್​ ಮಾಡುವುದಾಗಿ ಈ ಮೊದಲು ಚಿತ್ರತಂಡ ಘೋಷಿಸಿತ್ತು. ಆದರೆ ಲೀಕ್​ ಬಿಸಿ ತಟ್ಟಿರುವುದರಿಂದ ಮೂರು ಗಂಟೆ ಮುಂಚಿತವಾಗಿ ಅಂದರೆ 1.53ಕ್ಕೆ ಟ್ರೇಲರ್​ ರಿಲೀಸ್​ ಮಾಡಲು ಚಿತ್ರತಂಡ ಮುಂದಾಗಿದೆ. ಟಿ-ಸೀರಿಸ್​ ಯೂಟ್ಯೂಬ್​ ವಾಹಿನಿ ಮೂಲಕ ‘ಆದಿಪುರುಷ್​’ ಟ್ರೇಲರ್​ ರಿಲೀಸ್​ ಆಗಲಿದೆ.

ಇದನ್ನೂ ಓದಿ: Kriti Sanon: ಸೀತೆ ಆಗಿ ಬಂದ ಕೃತಿ ಸನೋನ್​; ಹೊಸ ಪೋಸ್ಟರ್ ರಿಲೀಸ್ ಮಾಡಿದ ‘ಆದಿಪುರುಷ್’ ಟೀಂ

ಹೇಗಿತ್ತು ಅಭಿಮಾನಿಗಳ ಪ್ರತಿಕ್ರಿಯೆ?

ಮೇ 8ರಂದು ಹೈದರಾಬಾದ್​​ನಲ್ಲಿ ಆಯೋಜಿಸಲಾಗಿದ್ದ ಟ್ರೇಲರ್​ ಪ್ರದರ್ಶನದಲ್ಲಿ ಪ್ರಭಾಸ್​, ಕೃತಿ ಸನೋನ್​, ನಿರ್ದೇಶಕ ಓಂ ರಾವತ್​ ಸೇರಿದಂತೆ ಇಡೀ ಚಿತ್ರತಂಡದವರು ಹಾಜರಿ ಹಾಕಿದ್ದರು. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಮೂಡಿಬಂದಿದೆ. 3ಡಿ ಟ್ರೇಲರ್​ ಕಣ್ತುಂಬಿಕೊಂಡ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಚಿತ್ರಮಂದಿರದಲ್ಲಿ ಪ್ರಭಾಸ್​ ಜೊತೆ ಸೇರಿ ಅಭಿಮಾನಿಗಳು ‘ಜೈ ಶ್ರೀರಾಮ್​’ ಎಂದು ಜೈಕಾರ ಹಾಕುವ ಮೂಲಕ ಟ್ರೇಲರ್​ಗೆ ಮೆಚ್ಚುಗೆ ಸೂಚಿಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್