600 ಕೋಟಿ ರೂಪಾಯಿ ಒಡೆಯ ದಳಪತಿ ವಿಜಯ್; ಡಿವೋರ್ಸ್ ಆದರೆ ಸಂಗೀತಾಗೆ ಸಿಗೋದೆಷ್ಟು?

ನಟ ದಳಪತಿ ವಿಜಯ್ ವಿಚ್ಛೇದನ ಪ್ರಕರಣದಲ್ಲಿ ಪತ್ನಿ ಸಂಗೀತಾ 600 ಕೋಟಿ ಆಸ್ತಿಯಲ್ಲಿ 50% ಪಾಲು ಕೋರಿದ್ದಾರೆ. ಆದರೆ ಭಾರತೀಯ ಕಾನೂನು ಪಾಶ್ಚಿಮಾತ್ಯ ದೇಶಗಳಂತೆ 50-50 ಆಸ್ತಿ ವಿಭಜನೆಗೆ ಕಡ್ಡಾಯಗೊಳಿಸುವುದಿಲ್ಲ. ನ್ಯಾಯಾಲಯವು ಆದಾಯ, ಮಕ್ಕಳ ಅಗತ್ಯತೆಗಳು, ಜೀವನಶೈಲಿ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುತ್ತದೆ.

600 ಕೋಟಿ ರೂಪಾಯಿ ಒಡೆಯ ದಳಪತಿ ವಿಜಯ್; ಡಿವೋರ್ಸ್ ಆದರೆ ಸಂಗೀತಾಗೆ ಸಿಗೋದೆಷ್ಟು?
ವಿಜಯ್ -ಸಂಗೀತಾ
Edited By:

Updated on: Mar 03, 2026 | 11:50 AM

ತಮಿಳು ನಟ ದಳಪತಿ ವಿಜಯ್‌ (Vijay) ಅವರಿಂದ ವಿಚ್ಛೇದನ ಕೋರಿ ಸಂಗೀತಾ ತಮಿಳುನಾಡಿನ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಅವರು ಆರೋಪಿಸಿದ್ದಾರೆ. ಅವರ ಆದಾಯ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಜೀವನಾಂಶವನ್ನು ಪಾವತಿಸುವಂತೆ ನ್ಯಾಯಾಲಯದ ಬಳಿ ಕೋರಿದ್ದಾರೆ. ವಿಜಯ್ ಅವರ ಆಸ್ತಿ 600 ಕೋಟಿ ರೂಪಾಯಿ. ಈ ಆಸ್ತಿಯಲ್ಲಿ 50% ಹಂಚಿಕೊಳ್ಳುವುದು ಭಾರತೀಯ ಕಾನೂನಿನ ಪ್ರಕಾರ ಕಡ್ಡಾಯವಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಪ್ರಶ್ನೆಯೆಂದರೆ, ತೀರ್ಪು ಸಂಗೀತಾ ಪರವಾಗಿ ಬಂದರೆ, ವಿಜಯ್ ತನ್ನ ಆಸ್ತಿಯಲ್ಲಿ 50% ನೀಡಬೇಕಾಗುತ್ತದೆಯೇ?  ಈ ಬಗ್ಗೆ ಚರ್ಚೆ ನಡೆದಿದೆ. ಸದ್ಯ ಅಂಶ್ರಿಧರ್ ವೆಂಬು ಮತ್ತು ಪ್ರಮೀಳಾ ಶ್ರೀನಿವಾಸನ್ ಅವರ ವಿಚ್ಛೇದನವನ್ನು ಅತ್ಯಂತ ದುಬಾರಿ ವಿಚ್ಛೇದನವೆಂದು ಪರಿಗಣಿಸಲಾಗಿದೆ. ಹೃತಿಕ್ ರೋಷನ್ ಮತ್ತು ಸುಸಾನೆ ಖಾನ್ ಅವರ ವಿಚ್ಛೇದನದಲ್ಲಿ ಪತ್ನಿಗೆ ಅವರು ಸುಮಾರು 380 ಕೋಟಿ ರೂ. ಮೌಲ್ಯದ ಆಸ್ತಿ ನೀಡಿದರು. ಈ ಹಿನ್ನೆಲೆಯಲ್ಲಿ, ವಿಜಯ್ ಅವರ 600 ಕೋಟಿ ರೂ. ಆಸ್ತಿಯಲ್ಲಿ ಸಂಗೀತಾ 50% ಪಾಲನ್ನು ಪಡೆಯಬಹುದೇ ಎಂಬ ಪ್ರಶ್ನೆ ಮೂಡಿದೆ.

ಭಾರತೀಯ ಕಾನೂನು ಚ್ಛೇದನದ ನಂತರ ಹೆಂಡತಿಗೆ ತನ್ನ ಗಂಡನ ಆಸ್ತಿಯಲ್ಲಿ 50% ನೀಡಬೇಕೆಂದು ಆದೇಶಿಸುವುದಿಲ್ಲ. ’50-50 ಆಸ್ತಿ ವಿಭಜನೆ’ ಮಾದರಿ ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿದೆ, ಆದರೆ ಭಾರತದಲ್ಲಿ ಕಾನೂನುಗಳು ವಿಭಿನ್ನವಾಗಿವೆ.

ಇದನ್ನೂ ಓದಿ: ದಳಪತಿ ವಿಜಯ್​​ಗೆ ನಟಿಯ ಜೊತೆ ಅಫೇರ್; ತ್ರಿಶಾ ಮೇಲೆ ಗೂಬೆ ಕೂರಿಸಿದ ನೆಟ್ಟಿಗರು

ನ್ಯಾಯಾಲಯವು ಇಬ್ಬರ ಆದಾಯ, ಮನೆಯ ಕೊಡುಗೆಗಳು, ಮಕ್ಕಳ ಅಗತ್ಯತೆಗಳು, ಮದುವೆಯ ಸಮಯದಲ್ಲಿ ಜೀವನಶೈಲಿ ಇತ್ಯಾದಿಗಳನ್ನು ನೋಡುತ್ತದೆ . ಪ್ರತಿ ಪ್ರಕರಣಗಳೂ ಭಿನ್ನವಾಗಿವೆ. ಅಲ್ಲದೆ, ದಳಪತಿ ವಿಜಯ್ ಅವರು ಮಾಡಿರುವ ಆಸ್ತಿ ಪೈಕಿ ಅವರ ಸ್ವಂತ ಆಸ್ತಿ ಎಷ್ಟು? ಅವರ ತಂದೆ ಮಾಡಿಟ್ಟ ಆಸ್ತಿ ಎಷ್ಟು ಎಂಬಿತ್ಯಾದಿ ಎಲ್ಲವೂ ಮುಖ್ಯವಾಗುತ್ತದೆ. ಎಲ್ಲವನ್ನೂ ನೋಡಿ ನ್ಯಾಯಾಲಯ ಈ ಬಗ್ಗೆ ಆದೇಶ ಹೊರಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us