‘ಕೆಜಿಎಫ್ 2’ ಚಿತ್ರ (KGF: Chapter 2) ಬಾಕ್ಸ್ ಆಫೀಸ್ನಲ್ಲಿ ಮಾಡಿದ ದಾಖಲೆ ತುಂಬಾನೇ ದೊಡ್ಡದು. ಈ ಚಿತ್ರ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದಲ್ಲದೆ, ಇನ್ನೂ ಅನೇಕ ದಾಖಲೆಗಳನ್ನು ಈ ಚಿತ್ರ ಬರೆದಿದೆ. ಈ ಮಧ್ಯೆ ಐಎಂಡಿಬಿಯಲ್ಲೂ (IMDB) ‘ಕೆಜಿಎಫ್ 2’ಗೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. 2022ರಲ್ಲಿ ರಿಲೀಸ್ ಆದ ಅತ್ಯುತ್ತಮ ಸಿನಿಮಾಗಳ ಪೈಕಿ ಯಶ್ (Yash) ನಟನೆಯ ಈ ಚಿತ್ರಕ್ಕೂ ಟಾಪ್ 10ನಲ್ಲಿ ಸ್ಥಾನ ಸಿಕ್ಕಿದೆ. ಐಎಂಡಿಬಿ ರೇಟಿಂಗ್ನಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಹಿಂದಿಕ್ಕಿದೆ.
ಐಎಂಡಿಬಿಯಲ್ಲಿ ಸಿನಿಮಾಗಳಿಗೆ ರೇಟಿಂಗ್ ನೀಡಲಾಗುತ್ತದೆ. ವೀಕ್ಷಕರೇ ಸಿನಿಮಾಗೆ ರೇಟಿಂಗ್ ನೀಡುತ್ತಾರೆ. 2022ರಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ಈ ಪೈಕಿ ‘ವಿಕ್ರಮ್’ (8.8) ಮೊದಲ ಸ್ಥಾನದಲ್ಲಿದ್ದರೆ, ‘ಕೆಜಿಎಫ್ 2’ (8.5) ಎರಡನೇ ಸ್ಥಾನದಲ್ಲಿ ಇದೆ. ಮೂರನೇ ಸ್ಥಾನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ (8.3), ನಾಲ್ಕನೇ ಸ್ಥಾನದಲ್ಲಿ ಮಲಯಾಳಂನ ‘ಹೃದಯಂ’ (8.1), ಐದನೇ ಸ್ಥಾನದಲ್ಲಿ ‘ಆರ್ಆರ್ಆರ್’ ಚಿತ್ರ (8.0) ಇದೆ.
ವೆಬ್ ಸೀರಿಸ್ಗಳಿಗೂ ರೇಟಿಂಗ್ ನೀಡಲಾಗಿದೆ. ‘ಕ್ಯಾಂಪಸ್ ಡೈರೀಸ್’ (9.0) ಮೊದಲ ಸ್ಥಾನದಲ್ಲಿದೆ. ‘ರಾಕೆಟ್ ಬಾಯ್ಸ್’ (8.9) ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ‘ಪಂಚಾಯತ್ 2’ (8.9) ಇದೆ. ‘ಅಪಹರಣ್’ (8.4) ಹಾಗೂ ‘ಹ್ಯೂಮನ್’ (8.0) ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು
‘ವಿಕ್ರಮ್’ ಇತ್ತೀಚೆಗೆ ರಿಲೀಸ್ ಆದ ಸಿನಿಮಾ. ಈ ಸಿನಿಮಾವನ್ನು ಕಮಲ್ ಹಾಸನ್ ಅವರೇ ನಿರ್ಮಿಸಿ, ನಟಿಸಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ವಿಜಯ್ ಸೇತುಪತಿ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ. ರೊಲೆಕ್ಸ್ ಹೆಸರಿನ ಪಾತ್ರದಲ್ಲಿ ಸೂರ್ಯ ಅವರು ಕಾಣಿಸಿಕೊಂಡಿದ್ದಾರೆ. ಅವರದ್ದು ಅತಿಥಿ ಪಾತ್ರವಾದರೂ ಸಖತ್ ಹೈಲೈಟ್ ಆಗಿದೆ. ಈ ಚಿತ್ರ ಐಎಂಡಿಬಿಯಲ್ಲಿ ‘ಕೆಜಿಎಫ್ 2’ಗಿಂತ ಹೆಚ್ಚು ರೇಟಿಂಗ್ ಪಡೆದರೂ, ಈ ಚಿತ್ರದ ಅರ್ಧದಷ್ಟು ಕಲೆಕ್ಷನ್ ಮಾಡಲು ‘ವಿಕ್ರಮ್’ ಬಳಿ ಸಾಧ್ಯವಾಗಿಲ್ಲ. ‘ವಿಕ್ರಮ್’ ಸಿನಿಮಾ ಒಟ್ಟಾರೆಯಾಗಿ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ.