ಏ. 14ರಂದು ಸ್ಟಾರ್ ಸುವರ್ಣದಲ್ಲಿ ಪ್ರಸಾರಗೊಳ್ಳಲಿದೆ ವಿನಯ್ ರಾಜ್‌ಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕಥೆ’
ಫೆಬ್ರವರಿ 8ರಂದು ರಾಜ್ಯಾದಂತ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ 'ಒಂದು ಸರಳ ಪ್ರೇಮ ಕಥೆ’ ಸಿನಿಮಾಗೆ ಪ್ರೇಕ್ಷಕ ಮಹಾಪ್ರಭುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಕಿತ್ತು. ಸದ್ಯ ಸಾಲು ಸಾಲು ಹಬ್ಬಗಳಿರುವುದರಿಂದ 'ಒಂದು ಸರಳ ಪ್ರೇಮ ಕಥೆ’ ಚಿತ್ರವೂ ಏಪ್ರಿಲ್ 14ರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
‘ಒಂದು ಸರಳ ಪ್ರೇಮ ಕಥೆ’ (ondu sarala prema kathe) ಈ ವರ್ಷದ ಮೊದಲು ಬಿಡುಗಡೆಗೊಂಡ ಚಿತ್ರ. ಆ ಮೂಲಕ ವಿನಯ್ ರಾಜ್‌ಕುಮಾರ್ ಅವರನ್ನು ಕೆಲ ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಅವರ ನಟನೆ ಕಾಣುವಂತಾಗಿತ್ತು. ನಿರ್ದೇಶಕ ಸಿಂಪಲ್ ಸುನಿ ಅವರು ಒಂದು ರೊಮ್ಯಾಂಟಿಕ್ ಕಾಮಿಡಿ, ಭಾವುಕತೆ, ಮಧುರ ಹಾಡುಗಳು, ಪಂಚಿಂಗ್ ಡೈಲಾಗಗಳಿಂದಲೇ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಇದೇ ಅಂಶಗಳನ್ನು ಜನರ ಮುಂದಿಟ್ಟು ಗೆದ್ದಿರುವ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾ ಇದೀಗ ಟಿವಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿದೆ.
ಫೆಬ್ರವರಿ 8ರಂದು ರಾಜ್ಯಾದಂತ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾಗೆ ಪ್ರೇಕ್ಷಕ ಮಹಾಪ್ರಭುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಕಿತ್ತು. ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಮೂಲಕ ಇತ್ತೀಚೆಗೆ ಓಟಿಟಿಗೂ ದಾರಿ ಮಾಡಿಕೊಟ್ಟಿತ್ತು. ಸದ್ಯ ಸಾಲು ಸಾಲು ಹಬ್ಬಗಳಿರುವುದರಿಂದ ‘ಒಂದು ಸರಳ ಪ್ರೇಮ ಕಥೆ’ ಚಿತ್ರವೂ ಏಪ್ರಿಲ್ 14ರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
View this post on Instagram
‘ಒಂದು ಸರಳ ಪ್ರೇಮ ಕಥೆ’ ಸಿನಿಮಾದ ಕಥಾನಾಯಕ ಅತಿಶಯ್ (ವಿನಯ್) ಮೇಲೆ ಕೇಂದ್ರೀಕೃತವಾಗಿದೆ. ಆತನಿಗೆ ಜೀವನದಲ್ಲಿ ಎರಡು ಉದ್ದೇಶಗಳಿರುತ್ತವೆ. ಒಂದು ತಾನು ದೊಡ್ಡ ಸಂಗೀತ ನಿರ್ದೇಶಕನಾಗಬೇಕು. ಮತ್ತೊಂದು ತನ್ನ ಹೃದಯ ಒಪ್ಪುವ ಹುಡುಗಿಯನ್ನು ಮದುವೆ ಮಾಡಿಕೊಳ್ಳುವುದಾಗಿದೆ. ಇವೆರಡರಲ್ಲೂ ಆತ ಹೇಗೆ ಜಯಗಳಿಸುತ್ತಾನೆ. ನಡುನಡುವೆ ಬರುವ ಟ್ವಿಸ್ಟ್ಗಳು ಏನು ಎಂಬುದನ್ನು ನೋಡಲು ನಾಳೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಚಿತ್ರವನ್ನು ನೋಡಿ.
ಇದನ್ನೂ ಓದಿ: Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ
‘ಒಂದು ಸರಳ ಪ್ರೇಮ ಕಥೆ’ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ವಿನಯ್ ರಾಜ್‌ಕುಮಾರ್ ಅವರಿಗೆ ಜೊತೆಯಾಗಿ ಸ್ವಾತಿಷ್ಠ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್ ನಾಯಕಿಯರಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:42 pm, Sat, 13 April 24