‘ಛೀ ಛೀ ರೇ ನಾನಿ..’ ಹಾಡಿನ ಹಿಂದಿನ ಹಿನ್ನೆಲೆ ಬಗ್ಗೆ ಗೊತ್ತಾ? ಇದೆ ಸಾಕಷ್ಟು ನೋವು
ಒಡಿಶಾ ಭಾಷೆಯ ‘ಚೀ ಚೀ ರೇ ನಾನಿ’ ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾಷೆ ಅರ್ಥವಾಗದಿದ್ದರೂ, ಹಾಡಿನ ಸಂಗೀತ ಮತ್ತು ಅಭಿವ್ಯಕ್ತಿಗಳು ಜನರನ್ನು ಆಕರ್ಷಿಸಿವೆ. ಪ್ರೇಮ ವೈಫಲ್ಯದ ಬಗ್ಗೆ ಇರುವ ಈ ಹಾಡು, 2012ರಲ್ಲಿ ನಿಧನರಾದ ಸತ್ಯ ನಾರಾಯಣನ್ ಅವರಿಂದ ರಚಿತವಾಗಿದೆ. ಹಲವು ವರ್ಷಗಳ ನಂತರ ಈ ಹಾಡು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ.

ಸದ್ಯ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಹಾಡು ಸಂಚಲನ ಮೂಡಿಸುತ್ತಿದೆ. ಭಾಷೆ ಅರ್ಥವಾಗದಿದ್ದರೂ ಎಲ್ಲರೂ ಆ ಹಾಡಿಗೆ ಆಕರ್ಷಿತರಾಗುತ್ತಾರೆ. ಅದು ಒಡಿಶಾ ಭಾಷೆಯ ‘ಛೀ ಛೀ ರೇ ನಾನಿ..’ ಹಾಡು. ರಚನೆಗೊಂಡ ಹಲವು ವರ್ಷಗಳ ನಂತರ ಈ ಹಾಡು ಈಗ ವೈರಲ್ ಆಗುತ್ತಿದೆ. ಆದಾಗ್ಯೂ, ಈ ಹಾಡಿನ ಭಾಷೆ ಅರ್ಥವಾಗದಿದ್ದರೂ, ಸಂಗೀತವು ಎಲ್ಲರನ್ನು ರಂಜಿಸುತ್ತಿದೆ. ದೊಡ್ಡವರು, ಸಣ್ಣವರು ಎಂಬ ಭೇದವಿಲ್ಲದೆ ತಮ್ಮದೇ ಆದ ಶೈಲಿಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ಹಾಡನ್ನು ಹಾಡುವಾಗ ನಾಯಕ ಮತ್ತು ನಾಯಕಿ ನೋವಿನಿಂದ ಅಳುತ್ತಿದ್ದಾರೆ. ಆದರೆ ಆ ಹಾಡನ್ನು ಯಾವ ಭಾಷೆಯಲ್ಲಿ ಹಾಡಲಾಗುತ್ತಿದೆ ಅಥವಾ ಯಾವುದರ ಬಗ್ಗೆ ಎಂದು ಯಾರಿಗೂ ಅರ್ಥವಾಗಲಿಲ್ಲ. ಆದರೆ, ಅವರ ಅಭಿವ್ಯಕ್ತಿಗಳನ್ನು ನೋಡಿದರೆ, ಇದು ಪ್ರೇಮ ವೈಫಲ್ಯದ ಹಾಡು ಎಂದು ತೋರುತ್ತದೆ. ಈ ಹಾಡನ್ನು ಪ್ರೇಮ ವೈಫಲ್ಯ ಅಥವಾ ಮೋಜಿನ ಮತ್ತು ತಮಾಷೆಯ ರೀಲ್ ಆಗಿ ರೀಮೇಕ್ ಮಾಡಲಾಗುತ್ತಿದೆ.
ಈಗ ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ನಟರನ್ನು ಯೂಟ್ಯೂಬರ್‌ಗಳು ಸಂದರ್ಶಿಸುತ್ತಿದ್ದಾರೆ. ಈ ಹಾಡು ಪ್ರೀತಿಯ ಹೆಸರಲ್ಲಿ ತನಗೆ ಮೋಸ ಮಾಡಿದ ಗೆಳತಿಯ ಕುರಿತಾಗಿದೆಯಂತೆ. ಈ ಹಾಡು ಈಗ ಬೇರೆ ಭಾಷೆಗಳಿಗೆ ಡಬ್ ಆಗಿದ್ದು, ಇನ್ನಷ್ಟು ಜನಪ್ರಿಯವಾಗಿದೆ. ಗೆಳತಿ ತನಗೆ ಮೋಸ ಮಾಡುತ್ತಿದ್ದಾಗ ಗೆಳೆಯ ಹಾಡುವ ಹಾಡು ಇದು.
ಒಡಿಶಾದ ಕೊರಟ್‌ಪುಟ್‌ನ ಬುಡಕಟ್ಟು ಪ್ರದೇಶದಲ್ಲಿ ಹುಟ್ಟಿ ಬೆಳೆದ ಮತ್ತು ಒಡಿಶಾದ ಸಂಸ್ಕೃತಿ ಮತ್ತು ಪ್ರಾಚೀನ ಜಾನಪದ ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸತ್ಯ ನಾರಾಯಣನ್ ಎಂಬ ವಕೀಲರು ಈ ಹಾಡನ್ನು ಬರೆದಿದ್ದಾರೆ. ಇದರಲ್ಲಿ ಬಿಬೂತಿ ಬಿಸ್ವಾಲ್ ಮತ್ತು ಶೈಲಜಾ ಪಟೇಲ್ ನಟಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬಿಟ್ಟು ಈ ಊರಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಶಿವಣ್ಣ; ಮಾರ್ಚ್ನಿಂದ ಸಿನಿಮಾ ಕೆಲಸ
2012ರಲ್ಲಿ ಸತ್ಯನಾರಾಯಣ ಅವರು ನಿಧನ ಹೊಂದಿದರು. ಇದಾದ ಆರು ವರ್ಷಗಳ ಬಳಿಕ ಸಿದ್ಧಾರ್ಥ್ ಸಂಬಲ್ಪುರಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡನ್ನು ಅಪ್‌ಲೋಡ್ ಮಾಡಿದ್ದರು. ಆದರೆ ಈ ಟ್ರೆಂಡಿಂಗ್ ಹಾಡಿಗೆ ಸಾಕ್ಷಿಯಾಗಲು ಈ ಹಾಡಿನ ಸೃಷ್ಟಿಕರ್ತ ಸತ್ಯ ನಾರಾಯಣನ್ ಇಂದು ಇಲ್ಲ. ಆದರೆ ಇದೀಗ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.