Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈಗ 2’ ಮಾಡೋದು ಯಾವಾಗ? ಸುದೀಪ್ ಇರ್ತಾರಾ? ನಾನಿ ಕೊಟ್ಟರು ಉತ್ತರ

ಕಿಚ್ಚ ಸುದೀಪ್, ನಾನಿ, ಸಮಂತಾ ನಟಿಸಿ, ರಾಜಮೌಳಿ ನಿರ್ದೇಶಿಸಿದ್ದ ‘ಈಗ’ ಸಿನಿಮಾ ರಾಜಮೌಳಿಯ ಭರ್ಜರಿ ಹಿಟ್ ಸಿನಿಮಾಗಳಲ್ಲಿ ಒಂದು. ರಾಜಮೌಳಿಯ ಫಿಲ್ಮೋಗ್ರಫಿಯಲ್ಲಿಯೇ ‘ಈಗ’ ಅದ್ಭುತ ಸಿನಿಮಾ ಎನ್ನಲಾಗುತ್ತದೆ. ಅಂದಹಾಗೆ ‘ಈಗ 2’ ಸಹ ಬರುತ್ತದೆಯಂತೆ? ಯಾವಾಗ? ನಾನಿ ಹೇಳಿದ್ದಾರೆ ಕೇಳಿ.

‘ಈಗ 2’ ಮಾಡೋದು ಯಾವಾಗ? ಸುದೀಪ್ ಇರ್ತಾರಾ? ನಾನಿ ಕೊಟ್ಟರು ಉತ್ತರ
ಈಗ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Aug 27, 2024 | 3:40 PM

‘ಈಗ’ ಸಿನಿಮಾ 2012ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಸಿನಿಮಾ ರಿಲೀಸ್ ಆಗಿ 12 ವರ್ಷಗಳು ಕಳೆದಿವೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಎಸ್ಎಸ್ ರಾಜಮೌಳಿ. ಈ ಸಿನಿಮಾದಲ್ಲಿ ಬರೋ ನಾನಿ ಹಾಗೂ ಸುದೀಪ್ ಇಬ್ಬರ ಪಾತ್ರವೂ ಕೊನೆ ಆಗಿದೆ. ಈಗ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತದೆಯೇ? ಬಂದರೆ ಯಾರೆಲ್ಲ ಇರುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಟಾಲಿವುಡ್ ನಟ ನಾನಿ ಉತ್ತರ ನೀಡಿದ್ದಾರೆ. ‘ಸರಿಪೋದು ಶನಿವಾರಂ’ ಸಿನಿಮಾ ಪ್ರಚಾರದ ವೇಳೆ ಅವರು ಈ ಮಾತನ್ನು ಆಡಿದ್ದಾರೆ.

‘ಈಗ’ ಸಿನಿಮಾ ಭಾರತದ ಚಿತ್ರರಂಗದ ಪಾಲಿಗೆ ಗೇಮ್ ಚೇಂಜರ್ ಆಗಿತ್ತು. ಒಂದು ನೊಣವನ್ನು ಇಟ್ಟುಕೊಂಡು ಇಷ್ಟೊಂದು ಒಳ್ಳೆಯ ಸಿನಿಮಾ ಮಾಡಬಹುದು ಎಂದು ಯಾರೂ ಊಹಿಸಿರಲಿಲ್ಲ. ಈ ಸಿನಿಮಾ ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ. ನಾನಿ ಅವರ ಪಾತ್ರ ಈ ಚಿತ್ರದಲ್ಲಿ ಭಿನ್ನವಾಗಿತ್ತು. ಸುದೀಪ್ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು.

‘ಈಗ’ ಕಥೆ ಬರೆದಿದ್ದು ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್. ಇವರ ಬಳಿ ನಾನಿ ಎಂದಿಗೂ ಈ ಬಗ್ಗೆ ಮಾತನಾಡಿಲ್ಲ. ‘ನಾನು ವಿಜಯೇಂದ್ರ ಪ್ರಸಾದ್ ಬಳಿ ಈ ಬಗ್ಗೆ ಕೇಳಿಲ್ಲ. ರಾಜಮೌಳಿ ಬಳಿ ಹಾಸ್ಯಾಸ್ಪದವಾಗಿ ಈ ವಿಚಾರ ಚರ್ಚೆ ಮಾಡಿದ್ದೇನೆ. ಏನಾಯಿತು ಸರ್? ನಾನು ಮತ್ತೆ ಬರುತ್ತೇನೆ ಎಂದಿದ್ದೀರಿ.. ಯಾವಾಗ? ಎಂದು ಕೇಳುತ್ತಿದ್ದೆ. ಅವರು ನಿನ್ನ ಅಗತ್ಯ ಇಲ್ಲ ಎಂದು ನಗುತ್ತಿದ್ದರು’ ಎಂದಿದ್ದಾರೆ ನಾನಿ. ಸರಿಯಾದ ಸಮಯ ಬಂದಾಗ ಅವರು ‘ಈಗ 2’ ಮಾಡುತ್ತಾರೆ ಎಂದಿದ್ದಾರೆ ನಾನಿ.

ಇದನ್ನೂ ಓದಿ:ಜನರಿಗೆ ಇಷ್ಟ ಆಗಿಲ್ಲ ಎಂದರೆ ನಾನೇ ಬಿಗ್ ಬಾಸ್ ಬಿಡ್ತೀನಿ ಎಂದಿದ್ದ ಸುದೀಪ್

ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರಕ್ಕೂ ಸೀಕ್ವೆಲ್ ಬರುತ್ತದೆ ಎನ್ನುವ ಮಾತಿದೆ. ರಾಜಮೌಳಿ ಅವರು ಉದ್ದೇಶ ಪೂರ್ವಕವಾಗಿ ಯಾವುದಕ್ಕೂ ಸೀಕ್ವೆಲ್ ಮಾಡಿಲ್ಲ. ‘ಈಗ’ ಚಿತ್ರಕ್ಕೂ ಅವರು ಸದ್ಯಕ್ಕೆ ಸೀಕ್ವೆಲ್ ಮಾಡುವ ಆಲೋಚನೆ ಇಲ್ಲ. ಸದ್ಯ ಅವರು ಮಹೇಶ್ ಬಾಬು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಒಂದೊಮ್ಮೆ ‘ಈಗ 2’ ಮಾಡಿದರೂ ನಾನಿ ಹಾಗೂ ಸುದೀಪ್ ಪಾತ್ರ ಇರೋದು ಅನುಮಾನ ಎಂದೇ ಹೇಳಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Tue, 27 August 24