AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ್ ನಾಯಗನ್’ ಸಿನಿಮಾ: ಅಂಬೇಡ್ಕರ್ ಕುರಿತ ಸಂಭಾಷಣೆಗೆ ಕತ್ತರಿ ಏಕೆ?

Jana Nayagan movie: ನ್ಯಾಯಾಲಯದಲ್ಲಿ ಹೋರಾಟಗಳನ್ನು ಮಾಡಿ, ಕೊನೆಗೂ ಇದೀಗ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ ಸಿನಿಮಾದ ಹಲವು ಸಂಭಾಷಣೆ, ದೃಶ್ಯಗಳಿಗೆ ಸಿಬಿಎಫ್​​ಸಿ ಕತ್ತರಿ ಹಾಕಿದೆ. ವಿಶೇಷವಾಗಿ ಅಂಬೆಡ್ಕರ್ ಕುರಿತ ಸಂಭಾಷಣೆಯೊಂದಕ್ಕೂ ಸಹ ಸಿಬಿಎಫ್​​ಸಿ ಕತ್ತರಿ ಹಾಕಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಸಿನಿಮಾದ ನಿರ್ಮಾಪಕ ವೆಂಕಟ್ ವಿವರಿಸಿದ್ದಾರೆ.

‘ಜನ್ ನಾಯಗನ್’ ಸಿನಿಮಾ: ಅಂಬೇಡ್ಕರ್ ಕುರಿತ ಸಂಭಾಷಣೆಗೆ ಕತ್ತರಿ ಏಕೆ?
Jana Nayagan Ambedkar
ಮಂಜುನಾಥ ಸಿ.
|

Updated on:Jul 17, 2026 | 2:29 PM

Share

ಮುಖ್ಯಾಂಶಗಳು

  • ‘ಜನ ನಾಯಗನ್’ ಸಿನಿಮಾ ಜುಲೈ 23ಕ್ಕೆ ಬಿಡುಗಡೆ ಆಗುತ್ತಿದೆ.
  • ‘ಜನ ನಾಯಗನ್’ ಸಿನಿಮಾನಲ್ಲಿದ್ದ ಅಂಬೇಡ್ಕರ್ ಕುರಿತಾದ ಸಂಭಾಷಣೆಗೆ ಕತ್ತರಿ ಹಾಕಲಾಗಿದೆ.
  • ಸಿಬಿಎಫ್​​ಸಿ ಈ ನಿರ್ಣಯ ತೆಗೆದುಕೊಂಡಿದ್ದೇಕೆ ಎಂದು ನಿರ್ಮಾಪಕ ವೆಂಕಟ್ ವಿವರಿಸಿದ್ದಾರೆ.

ತಮಿಳುನಾಡು ಸಿಎಂ, ನಟ ವಿಜಯ್ (Thalapathy Vijay) ಅವರ ‘ಜನ್ ನಾಯಕನ್’ ಸಿನಿಮಾ ಕೊನೆಗೂ ಬಿಡುಗಡೆ ಕಾಣುತ್ತಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈಗ ಏಳು ತಿಂಗಳ ಬಳಿಕ ಜುಲೈ 23ರಂದು ತೆರೆಗೆ ಬರುತ್ತಿದೆ. ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯಿಂದ ಭಾರಿ ಸಮಸ್ಯೆ ಎದುರಾಗಿತ್ತು. ಸೆನ್ಸಾರ್ ಮಂಡಳಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿ, ವಿಶೇಷ ಸಮಿತಿಗೆ ಸಿನಿಮಾವನ್ನು ಕಳಿಸಿತ್ತು. ನ್ಯಾಯಾಲಯದಲ್ಲಿ ಹೋರಾಟಗಳನ್ನು ಮಾಡಿ, ಕೊನೆಗೂ ಇದೀಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ ಸಿನಿಮಾದ ಹಲವು ಸಂಭಾಷಣೆ, ದೃಶ್ಯಗಳಿಗೆ ಸಿಬಿಎಫ್​​ಸಿ ಕತ್ತರಿ ಹಾಕಿದೆ. ವಿಶೇಷವಾಗಿ ಅಂಬೆಡ್ಕರ್ ಕುರಿತ ಸಂಭಾಷಣೆಯೊಂದಕ್ಕೂ ಸಹ ಸಿಬಿಎಫ್​​ಸಿ ಕತ್ತರಿ ಹಾಕಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಸಿನಿಮಾದ ನಿರ್ಮಾಪಕ ವೆಂಕಟ್ ವಿವರಿಸಿದ್ದಾರೆ.

ಸಂವಿಧಾನ ಫಾಲೋ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ಸಿನಿಮಾನಲ್ಲಿ ಸರಳವಾದ ಭಾಷೆಯಲ್ಲಿ ವಿವರಿಸಲಾಗಿದೆ. ಸಂವಿಧಾನ ಫಾಲೋ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ಮಕ್ಕಳಿಗೆ ವಿವರಿಸುವ ಸಂಭಾಷಣೆ. ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಹೇಳುವ ಸಂಭಾಷಣೆ ಒಂದು ಸೀನ್​​ನಲ್ಲಿ ಇತ್ತು. ‘ಅಂಬೇಡ್ಕರ್ ಸಂವಿಧಾನವನ್ನು ಫಾಲೋ ಮಾಡದಿದ್ದರೆ, ಟಿವಿಕೆ ಸಂವಿಧಾನದ ಮೂಲಕ ಪಾಠ ಕಲಿಸಬೇಕಾಗುತ್ತದೆ’ ಎಂಬ ಸಂಭಾಷಣೆ ಸಿನಿಮಾನಲ್ಲಿತ್ತು’ ಎಂದು ವೆಂಕಟ್ ಹೇಳಿದ್ದಾರೆ. ಆದರೆ ಆ ಸಂಭಾಷಣೆಯನ್ನು ಇದೀಗ ಸಿಬಿಎಫ್​​ಸಿ ಸೂಚನೆ ಮೇರೆಗೆ ತೆಗೆದು ಹಾಕಲಾಗಿದೆಯಂತೆ.

ಸೃಜನಶೀಲ ಸ್ವಾತಂತ್ರ್ಯ ಮತ್ತು ಕಠಿಣ ಸೆನ್ಸಾರ್ ನಿಯಮಗಳ ನಡುವಿನ ಸಮತೋಲನವನ್ನು ಕಾಪಾಡುವುದು ಕಷ್ಟ ಎಂದಿರುವ ನಿರ್ಮಾಪಕ ವೆಂಕಟ್, ‘ಸಿನಿಮಾದಲ್ಲಿನ ಕೆಲವು ರಾಜಕೀಯ ವಿಷಯಗಳ ಉಲ್ಲೇಖ ಮತ್ತು ವ್ಯಕ್ತಿಗಳ ಹೆಸರನ್ನು ಬಳಸುವಾಗ ತುಂಬಾ ಜಾಗರೂಕರಾಗಿರಬೇಕು. ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಿಬಿಎಫ್​​ಸಿ ಯಾವ ಯಾವ ಕಟ್​​ಗೆ ಸೂಚಿಸಿತ್ತೊ ಅದೆಲ್ಲವನ್ನೂ ನಾವು ಪಾಲಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್

‘ಆದರೆ ಈ ಬದಲಾವಣೆಗ ಸಿಳಿಂದ ಸಿನಿಮಾದ ಮೂಲ ಕಥೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಚಿತ್ರತಂಡ ಹೇಳಿದ್ದು, ವಿಜಯ್ ಅವರ ಈ ಚಿತ್ರವು ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಜುಲೈ 23 ರಂದು ಈ ಚಿತ್ರವು ತೆರೆಕಾಣಲಿದ್ದು, ಅಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಸಿಬಿಎಫ್​​ಸಿಯು ಸಮಾಜದ ಬಗ್ಗೆ ಕಾಳಜಿಯಿಂದ ಕಟ್ಟಲಾಗಿರುವ ದೃಶ್ಯ, ಸಂಭಾಷಣೆಗಳಿಗೆ ಕತ್ತರಿ ಹಾಕಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಜನ ನಾಯಗನ್’ ಸಿನಿಮಾ ಜುಲೈ 23ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾ ಅನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ. ವಿಜಯ್ ಪಾತ್ರದ ಸಾಕು ಪುತ್ರಿಯಾಗಿ ಮಲಯಾಳಂ ನಟಿ ಮಮಿತಾ ಬೈಜು ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Fri, 17 July 26

Follow Us
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಹರಿಯಾಣದಲ್ಲಿ ದೇಶದ ಮೊದಲ 'ಹೈಡ್ರೋಜನ್ ರೈಲಿ'ಗೆ ಪಿಎಂ ಮೋದಿ ಇಂದು ಚಾಲನೆ
ಹರಿಯಾಣದಲ್ಲಿ ದೇಶದ ಮೊದಲ 'ಹೈಡ್ರೋಜನ್ ರೈಲಿ'ಗೆ ಪಿಎಂ ಮೋದಿ ಇಂದು ಚಾಲನೆ
Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ
Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ
'ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ'
'ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ'
ಮೊದಲ ಬಾರಿಗೆ ಇರಾನ್ ಮೇಲೆ ದಾಳಿ ನಡೆಸಿದ ಯುಎಇ
ಮೊದಲ ಬಾರಿಗೆ ಇರಾನ್ ಮೇಲೆ ದಾಳಿ ನಡೆಸಿದ ಯುಎಇ
'ದಿನಕ್ಕೆ 17 ಗಂಟೆ ಓದು, ನಿದ್ದೆಯನ್ನೂ ತ್ಯಜಿಸಿದ್ದೆ';NEET UG ಟಾಪರ್ ಮಾತು
'ದಿನಕ್ಕೆ 17 ಗಂಟೆ ಓದು, ನಿದ್ದೆಯನ್ನೂ ತ್ಯಜಿಸಿದ್ದೆ';NEET UG ಟಾಪರ್ ಮಾತು
ಬೀಳುವ ಸ್ಥಿತಿಯಲ್ಲಿ 141 ವರ್ಷಗಳ ಇತಿಹಾಸವಿರುವ ಹಾರವಾಡ ಸರ್ಕಾರಿ ಶಾಲೆ
ಬೀಳುವ ಸ್ಥಿತಿಯಲ್ಲಿ 141 ವರ್ಷಗಳ ಇತಿಹಾಸವಿರುವ ಹಾರವಾಡ ಸರ್ಕಾರಿ ಶಾಲೆ