AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಈ ವರೆಗೂ ಸಮಂತಾ ಜೊತೆ ಸಿನಿಮಾ ಮಾಡಿಲ್ಲ ಯಾಕೆ?

Prabhas-Samantha: ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್, ಅಂತೆಯೇ ಸಮಂತಾ ಸಹ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ದಶಕಗಳಿಂದಲೂ ಇಬ್ಬರೂ ತೆಲುಗು ಚಿತ್ರರಂಗದಲ್ಲಿ ಇದ್ದಾರಾದರೂ ಒಮ್ಮೆಯೂ ಒಟ್ಟಿಗೆ ನಟಿಸಿಲ್ಲ ಏಕೆ? ಅದಕ್ಕೆ ಕಾರಣ ಇದೆ.

ಪ್ರಭಾಸ್ ಈ ವರೆಗೂ ಸಮಂತಾ ಜೊತೆ ಸಿನಿಮಾ ಮಾಡಿಲ್ಲ ಯಾಕೆ?
ಮಂಜುನಾಥ ಸಿ.
|

Updated on: Oct 23, 2024 | 5:43 PM

Share

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ತಮ್ಮ ಇಷ್ಟು ವರ್ಷದ ವೃತ್ತಿ ಜೀವನದಲ್ಲಿ ಹಲವು ಸ್ಟಾರ್ ನಟಿಯರೊಟ್ಟಿಗೆ ನಟಿಸಿದ್ದಾರೆ. ಇನ್ನು ಸಮಂತಾ ಸಹ ಪ್ರಭಾಸ್ ರೀತಿಯೇ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಸಮಂತಾ ಸಹ ತೆಲುಗು ಹಾಗೂ ತಮಿಳಿನ ಹಲವು ಸ್ಟಾರ್ ನಟರೊಟ್ಟಿಗೆ ನಾಯಕಿಯಾಗಿ ನಟಿಸಿದ್ದಾರೆ. ಪ್ರಭಾಸ್ ಹಾಗೂ ಸಮಂತಾ ಇಬ್ಬರಿಗೂ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇಬ್ಬರೂ ಸಹ ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿದ್ದಾರೆ. ಆದರೆ ಈ ಇಬ್ಬರೂ ಈವರೆಗೂ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿಲ್ಲ. ಅದಕ್ಕೆ ಕಾರಣವೂ ಇದೆ.

ಪ್ರಭಾಸ್ ಹಾಗೂ ಸಮಂತಾ ಒಟ್ಟಿಗೆ ನಟಿಸಬೇಕು ಎಂದು ಇಬ್ಬರ ಅಭಿಮಾನಿಗಳು ಹಲವು ಬಾರಿ ಕೇಳಿ ಕೊಂಡಿದ್ದಾರೆ. ಈಗಲೂ ಸಹ ಪ್ರಭಾಸ್ ಅಭಿಮಾನಿಗಳು ಸಮಂತಾಗೆ, ಸಮಂತಾ ಅಭಿಮಾನಿಗಳು ಪ್ರಭಾಸ್​ರ ಇನ್​​ಸ್ಟಾಗ್ರಾಂ ಪೋಸ್ಟ್​ಗಳಿಗೆ ಒಟ್ಟಿಗೆ ನಟಿಸುವಂತೆ ಕಮೆಂಟ್ ಮಾಡುತ್ತಿರುತ್ತಾರೆ. ಆದರೆ ಈ ಇಬ್ಬರೂ ಒಟ್ಟಿಗೆ ನಟಿಸದಿರಲು ಕಾರಣ ಪ್ರಭಾಸ್​ರ ಎತ್ತರ. ಹೌದು, ಪ್ರಭಾಸ್ ಆರು ಅಡಿ ಇದ್ದರೆ ಸಮಂತಾ 5.2 ಅಡಿಯಷ್ಟೆ ಇದ್ದಾರೆ. ಇಬ್ಬರ ಎತ್ತರದಲ್ಲಿ ದೊಡ್ಡ ವ್ಯತ್ಯಾಸ ಇರುವ ಕಾರಣ ಇಬ್ಬರೂ ಈವರೆಗೆ ಒಟ್ಟಿಗೆ ನಟಿಸಲು ಆಗಿಲ್ಲವಂತೆ.

ಎತ್ತರದಲ್ಲಿ ಹೆಚ್ಚು ವ್ಯತ್ಯಾಸ ಇರುವ ಕಾರಣ ಇವರನ್ನು ಒಟ್ಟಿಗೆ ಹಾಕಿಕೊಳ್ಳಲು ಯಾವ ನಿರ್ದೇಶಕರು ಸಹ ಮುಂದಾಗಿಲ್ಲ. ಎತ್ತರದಲ್ಲಿ ವ್ಯತ್ಯಾಸ ಇರುವ ನಟ-ನಟಿಯರು ಒಟ್ಟಿಗೆ ನಟಿಸಿದರೆ ಶೂಟಿಂಗ್​ ಬಹಳ ಕಷ್ಟವಾಗುತ್ತದೆ ಆ ಕಾರಣಕ್ಕೆ ಯಾವ ನಿರ್ದೇಶಕರೂ ಸಹ ಈ ಇಬ್ಬರನ್ನು ಒಟ್ಟಿಗೆ ಹಾಕಿಕೊಂಡಿಲ್ಲ. ಅಸಲಿಗೆ ಪ್ರಭಾಸ್ ನಟನೆಯ ‘ಸಾಹೋ’ ಸಿನಿಮಾಕ್ಕೆ ಸಮಂತಾ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಬಳಿಕ ನಾಯಕಿ ಪಾತ್ರ ಬಾಲಿವುಡ್​ನ ಶ್ರದ್ಧಾ ಕಪೂರ್ ಪಾಲಾಯ್ತು.

ಇದನ್ನೂ ಓದಿ:ದಿ ರಾಜಾ ಸಾಬ್: ಹುಟ್ಟುಹಬ್ಬದ ದಿನ ಹಾರರ್ ಅವತಾರದಲ್ಲಿ ದರ್ಶನ ನೀಡಿದ ಪ್ರಭಾಸ್

ಸಮಂತಾ, ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್​ಟಿಆರ್, ನಾಗ ಚೈತನ್ಯ, ನಾನಿ, ವಿಜಯ್ ದೇವರಕೊಂಡ, ಮಹೇಶ್ ಬಾಬು, ತಮಿಳಿನಲ್ಲಿ ವಿಜಯ್, ವಿಶಾಲ್ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಪ್ರಭಾಸ್, ಅನುಷ್ಕಾ ಶೆಟ್ಟಿ, ಕಾಜೊಲ್, ತಮನ್ನಾ, ತ್ರಿಷಾ, ಶ್ರೆಯಾ, ಇಲಿಯಾನ ಬಾಲಿವುಡ್ ನಟಿಯರಾದ ಕಂಗನಾ ರನೌತ್, ಶ್ರದ್ಧಾ ಕಪೂರ್, ಪೂಜಾ ಹೆಗ್ಡೆ, ದೀಪಿಕಾ ಪಡುಕೋಣೆ ಅವರುಗಳೊಟ್ಟಿಗೆ ನಟಿಸಿದ್ದಾರೆ.

ಪ್ರಭಾಸ್ ಪ್ರಸ್ತುತ ‘ರಾಜಾ ಸಾಬ್’, ರಘು ಹನುಪುಡಿಯ ಹೆಸರಿಡದ ಸಿನಿಮಾ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’, ‘ಕಲ್ಕಿ 2’, ‘ಸಲಾರ್ 2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ರಾಜಾ ಸಾಬ್’ ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ. ಇನ್ನು ಸಮಂತಾ ನಟಿಸಿರುವ ಹಿಂದಿ ವೆಬ್ ಸರಣಿ ‘ಸಿಟಾಡೆಲ್: ಹನಿ ಬನಿ’ ಬಿಡುಗಡೆ ಆಗಲಿದೆ. ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮರಾಠಿಯ ‘ತುಂಬಾಡ್’ ನಿರ್ದೇಶಿಸಿದ್ದ ನಿರ್ದೇಶಕನ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಹೊಸದೊಂದು ಸಿನಿಮಾಕ್ಕೂ ಎಸ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್