ನನ್ನ ಮದುವೆ ಮಾಡಿಕೊಳ್ಳಿ: 58ರ ಸಲ್ಮಾನ್ ಖಾನ್​ಗೆ 25ರ ಸುಂದರಿ ಪ್ರಪೋಸ್; ‘ನೋ’ ಎಂದ ಸಲ್ಲು

ಸಲ್ಮಾನ್​ ಖಾನ್​ ಅವರಿಗೆ 58 ವರ್ಷ ಆಗಿದ್ದರೂ ಕೂಡ ಮದುವೆ ಆಗಿಲ್ಲ. ಈಗ ಅವರಿಗೆ ಮದುವೆ ಪ್ರಪೋಸ್ ಮಾಡಲಾಗಿದೆ. ಆದರೆ ಸದ್ಯಕ್ಕಂತೂ ಸಲ್ಮಾನ್ ಖಾನ್ ಅವರು ಮದುವೆಯ ಬಗ್ಗೆ ಯೋಚಿಸಿಲ್ಲ. ಹಾಗಾಗಿ ಅವರು ಮದುವೆ ಪ್ರಪೋಸ್​ ತಿರಸ್ಕರಿಸಿದ್ದಾರೆ. ‘ಬಿಗ್ ಬಾಸ್​ 18’ ಶೋನಲ್ಲಿ ಈ ಪ್ರಸಂಗ ನಡೆದಿದೆ.

ನನ್ನ ಮದುವೆ ಮಾಡಿಕೊಳ್ಳಿ: 58ರ ಸಲ್ಮಾನ್ ಖಾನ್​ಗೆ 25ರ ಸುಂದರಿ ಪ್ರಪೋಸ್; ‘ನೋ’ ಎಂದ ಸಲ್ಲು
ಚಾಹತ್ ಪಾಂಡೆ, ಸಲ್ಮಾನ್​ ಖಾನ್
Follow us
ಮದನ್​ ಕುಮಾರ್​
|

Updated on: Oct 23, 2024 | 4:51 PM

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಈಗ 58 ವರ್ಷ ವಯಸ್ಸು. ಕೆಲವು ನಟಿಯರ ಜೊತೆ ಅವರಿಗೆ ಈ ಮೊದಲು ಪ್ರೀತಿ ಚಿಗುರಿತ್ತು. ಆದರೆ ಮದುವೆ ಆಗಲೇ ಇಲ್ಲ. ಈಗಲೂ ಸಲ್ಮಾನ್ ಖಾನ್ ಅವರಿಗೆ ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಎದುರಾಗುತ್ತಲೇ ಇದೆ. ಸದ್ಯಕ್ಕಂತಲೂ ಸಿಂಗಲ್ ಆಗಿರುವ ಅವರಿಗೆ 25ರ ಪ್ರಾಯದ ಸುಂದರಿಯೊಬ್ಬರು ಪ್ರಪೋಸ್ ಮಾಡಿದ್ದಾರೆ. ಅದು ಕೂಡ ಬಿಗ್ ಬಾಸ್ ವೇದಿಕೆಯಲ್ಲಿ. ಆದರೆ ನಟಿ ಮಾಡಿದ ಪ್ರಪೋಸ್​ ಅನ್ನು ಸಲ್ಮಾನ್​ ಖಾನ್ ರಿಜೆಕ್ಟ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಹಿಂದಿ ಕಿರುತೆರೆಯಲ್ಲಿ ನಟಿ ಚಾಹತ್ ಪಾಂಡೆ ಅವರು ಖ್ಯಾತಿ ಗಳಿಸಿದ್ದಾರೆ. ಈಗ ಅವರು ‘ಬಿಗ್ ಬಾಸ್​ 18’ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇತ್ತೀಚೆಗಿನ ಸಂಚಿಕೆಯಲ್ಲಿ ಸಲ್ಮಾನ್​ ಖಾನ್​ ಅವರು ‘ನಿಮಗೆ ಯಾವ ರೀತಿಯ ಹುಡುಗ ಬೇಕು’ ಎಂದು ಚಾಹತ್ ಪಾಂಡೆಯನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಚಾಹತ್ ಅವರು, ‘ಕರಣ್ ವೀರ್ ಮೆಹ್ತಾ ರೀತಿ ಜಿಮ್​ಗೆ ಹೋಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವವರು, ಅವಿನಾಶ್ ಮಿಶ್ರಾ ರೀತಿ ಡ್ಯಾನ್ಸ್ ಮಾಡುವವರು, ವಿವಿಯನ್ ಡಿಸೇನಾ ರೀತಿ ಹೇರ್​ಸ್ಟೈಲ್ ಇರುವವರು ಬೇಕು’ ಎಂದು ಹೇಳಿದ್ದಾರೆ.

‘ಸರ್ ನೀವೇ ನನ್ನ ಮದುವೆ ಮಾಡಿಕೊಳ್ಳಿ’ ಎಂದು ಸಲ್ಮಾನ್ ಖಾನ್​ಗೆ ಚಾಹತ್ ಹೇಳಿದ್ದಾರೆ. ಆದರೆ ನಟಿಯ ಕಡೆಯಿಂದ ಬಂದ ಈ ಮದುವೆ ಪ್ರಪೋಸ್ ಅನ್ನು ಸಲ್ಮಾನ್​ ಖಾನ್​ ಅವರು ಒಪ್ಪಿಕೊಂಡಿಲ್ಲ. ‘ನೀವು ಹೇಳಿದ ಯಾವುದೇ ಗುಣಗಳು ನನ್ನಲ್ಲಿ ಇಲ್ಲ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ. ಆ ಮೂಲಕ ಅವರು ತಮಗೆ ಚಾಹತ್ ಪಾಂಡೆಯನ್ನು ಮದುವೆ ಆಗುವ ಆಸೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಜೀವ ಬೆದರಿಕೆ ನಡುವೆಯೂ ‘ಸಿಂಘಂ ಅಗೇನ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರ ಆಪ್ತ ಗೆಳೆಯ ಬಾಬಾ ಸಿದ್ಧಿಕಿ ಅವರನ್ನು ಕೆಲವೇ ದಿನಗಳ ಹಿಂದೆ ಗುಂಡಿಕ್ಕಿ ಸಾಯಿಸಲಾಯಿತು. ಅಲ್ಲದೇ ಸಲ್ಮಾನ್​ ಖಾನ್​ ಅವರಿಗೆ ಸಹಾಯ ಮಾಡುವ ಎಲ್ಲರಿಗೂ ಹಂತಕರಿಂದ ಬೆದರಿಕೆ ಇದೆ. ಸ್ವತಃ ಸಲ್ಮಾನ್ ಖಾನ್​ಗೂ ಜೀವ ಬೆದರಿಕೆ ಹಾಕಲಾಗಿದೆ. ಅದರ ನಡುವೆಯೂ ಅವರು ಸಿನಿಮಾ ಮತ್ತು ಬಿಗ್ ಬಾಸ್ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್