ಆಸ್ಕರ್​ಗೆ ‘RRR’ ಯಾಕೆ ಸೆಲೆಕ್ಟ್​ ಆಗಲಿಲ್ಲ? ಆಯ್ಕೆ ಸಮಿತಿ ಅಧ್ಯಕ್ಷ ನಾಗಾಭರಣ ನೀಡಿದ ಸ್ಪಷ್ಟನೆ ಇಲ್ಲಿದೆ

Chhello Show | Oscar Awards: ಆಯ್ಕೆ ಸಮಿತಿಯಲ್ಲಿ 17 ಸದಸ್ಯರು ಇದ್ದರು. ‘ಆರ್​ಆರ್​ಆರ್​’ ಸೇರಿದಂತೆ ಒಟ್ಟು 13 ಸಿನಿಮಾಗಳನ್ನು ವೀಕ್ಷಿಸಿ, ಅಂತಿಮವಾಗಿ ‘ಚೆಲ್ಲೋ ಶೋ’ ಚಿತ್ರವನ್ನು ಆಯ್ಕೆ ಮಾಡಲಾಗಿದೆ.

ಆಸ್ಕರ್​ಗೆ ‘RRR’ ಯಾಕೆ ಸೆಲೆಕ್ಟ್​ ಆಗಲಿಲ್ಲ? ಆಯ್ಕೆ ಸಮಿತಿ ಅಧ್ಯಕ್ಷ ನಾಗಾಭರಣ ನೀಡಿದ ಸ್ಪಷ್ಟನೆ ಇಲ್ಲಿದೆ
ಆರ್​ಆರ್​ಆರ್​, ಚೆಲ್ಲೋ ಶೋ
Edited By:

Updated on: Sep 22, 2022 | 8:37 AM

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ (RRR) ಸಿನಿಮಾ ಅಥವಾ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ 95ನೇ ಸಾಲಿನ ಆಸ್ಕರ್​ ಪ್ರಶಸ್ತಿ (Oscar Awards) ಸ್ಪರ್ಧೆಗೆ ಭಾರತದಿಂದ ಆಯ್ಕೆ ಆಗಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ ಅದು ನಿಜವಾಗಿಲ್ಲ. ಅಂತಿಮವಾಗಿ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಯ್ಕೆ ಆಗಿದೆ. ಅಕಾಡೆಮಿ ಪ್ರಶಸ್ತಿಯ ‘ವಿದೇಶಿ ಭಾಷೆಯ ಫೀಚರ್​ ಫಿಲ್ಮ್​’ ವಿಭಾಗದಲ್ಲಿ ಈ ಚಿತ್ರ ಪೈಪೋಟಿ ನೀಡಲಿದೆ. ‘ಚೆಲ್ಲೋ ಶೋ’ ಆಯ್ಕೆ ಆಗಿದ್ದರ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ. ‘ಆರ್​ಆರ್​ಆರ್​’ ಸಿನಿಮಾ ಯಾಕೆ ಸೆಲೆಕ್ಟ್​ ಆಗಲಿಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತು ಆಯ್ಕೆ ಸಮಿತಿ ಅಧ್ಯಕ್ಷ ಟಿ.ಎಸ್​. ನಾಗಾಭರಣ (TS Nagabharana) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿ ವರ್ಷ ಆಸ್ಕರ್​ ಪ್ರಶಸ್ತಿ ಕಣಕ್ಕೆ ಭಾರತದಿಂದ ಒಂದು ಸಿನಿಮಾವನ್ನು ಆಧಿಕೃತವಾಗಿ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಈ ರೀತಿ ಆಯ್ಕೆ ಆಗಬೇಕು ಎಂದರೆ ಅಂಥ ಸಿನಿಮಾ ತುಂಬಾ ವಿಶೇಷವಾಗಿರಬೇಕು. ಪ್ರಶಸ್ತಿ ಗೆಲ್ಲಲು ಬೇಕಾದಂತಹ ಗುಣಗಳು ಆ ಚಿತ್ರಕ್ಕೆ ಇರಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ‘ಚೆಲ್ಲೋ ಶೋ’ ಹೆಚ್ಚು ಸೂಕ್ತ ಎನ್ನಲಾಗಿದೆ.

‘ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ’ ವತಿಯಿಂದ ‘ಚೆಲ್ಲೋ ಶೋ’ ಸೆಲೆಕ್ಟ್​ ಆಗಿದೆ. ಆಯ್ಕೆ ಸಮಿತಿಗೆ ಟಿ.ಎಸ್​. ನಾಗಾಭರಣ ಅಧ್ಯಕ್ಷರಾಗಿದ್ದು, ತಮ್ಮ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ. ‘ಎಲ್ಲರೂ ಆರ್​ಆರ್​ಆರ್​ ಆಯ್ಕೆ ಆಗಲಿ ಎಂದು ನಿರೀಕ್ಷಿಸಿದ್ದರು. ಅದು ಕೂಡ ಉತ್ತಮ ಸಿನಿಮಾ. ಆ ಮಾತನ್ನು ತಳ್ಳಿಹಾಕುವಂತಿಲ್ಲ. ಆಯ್ಕೆ ಸಮಿತಿಯ ಮುಂದಿದ್ದ ಎಲ್ಲ 13 ಸಿನಿಮಾಗಳು ಉತ್ತಮವಾಗಿದ್ದವು. ನಾವು ಒಂದನ್ನು ಆಯ್ಕೆ ಮಾಡಬೇಕಿತ್ತು. ಇನ್ನುಳಿದ ಚಿತ್ರತಂಡಗಳಿಗೆ ನಿರಾಸೆ ಸಹಜ. ಆಸ್ಕರ್​ಗೆ ಆಯ್ಕೆ ಆಗಲು ಸಿನಿಮಾದ ಮನರಂಜನೆ, ಮಾಸ್​ ಗುಣ, ಮಾರ್ಕೆಟಿಂಗ್​, ಮೇಕಿಂಗ್, ಚಿತ್ರದ ಕಲೆಕ್ಷನ್​​ ಮುಖ್ಯವಲ್ಲ. ಕಥೆ ಮುಖ್ಯವಾಗುತ್ತದೆಯೇ ಹೊರತು ಜನಪ್ರಿಯತೆ ಅಲ್ಲ’ ಎಂದು ನಾಗಾಭರಣ ಹೇಳಿದ್ದಾರೆ ಎಂದು ‘ಹಿಂದುಸ್ತಾನ್​ ಟೈಮ್ಸ್​’ ವರದಿ ಮಾಡಿದೆ.

ಇದನ್ನೂ ಓದಿ
‘ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಆಸ್ಕರ್​ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ
Aamir Khan: ವಿರೋಧದ ನಡುವೆಯೂ ‘ಆಸ್ಕರ್​’ ಗಮನ ಸೆಳೆದ ‘ಲಾಲ್​ ಸಿಂಗ್​ ಚಡ್ಡಾ’; ಆಮಿರ್​ ಖಾನ್​ ಫ್ಯಾನ್ಸ್​ ಖುಷ್​
ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್​; ಅಕಾಡೆಮಿ ನಿರ್ಧಾರ
ಆಸ್ಕರ್​ ವೇದಿಕೆಯಲ್ಲಿ ನಟ ಕ್ರಿಸ್​ ರಾಕ್​ ಕೆನ್ನೆಗೆ ಹೊಡೆದ ವಿಲ್​ ಸ್ಮಿತ್​ ಬಗ್ಗೆ ತಾಯಿಯ ಪ್ರತಿಕ್ರಿಯೆ ಏನು?

ಈ ಆಯ್ಕೆ ಸಮಿತಿಯಲ್ಲಿ ಒಟ್ಟು 17 ಸದಸ್ಯರು ಇದ್ದರು. ಎಲ್ಲ 13 ಸಿನಿಮಾಗಳನ್ನು ವೀಕ್ಷಿಸಿ, ಅಂತಿಮವಾಗಿ ‘ಚೆಲ್ಲೋ ಶೋ’ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ‘ಒಂದು ಸಿನಿಮಾ ಹೃದಯಸ್ಪರ್ಶಿ ಆಗಿರಬೇಕು. ಅದೇ ಮುಖ್ಯ. ಭಾರತವನ್ನು ಬೇರೆ ರೀತಿಯಲ್ಲಿ ಪ್ರತಿನಿಧಿಸುವ ಸಿನಿಮಾ ಇದು’ ಎಂದು ನಾಗಾಭರಣ ಹೇಳಿದ್ದಾರೆ ಎಂದು ವರದಿ ಪ್ರಕಟ ಆಗಿದೆ.

ಪ್ಯಾನ್​ ನಳಿನ್​ ಅವರು ‘ಚೆಲ್ಲೋ ಶೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಕೊನೆಯ ಸಿನಿಮಾ ಶೋ’ ಎಂಬುದು ಈ ಶೀರ್ಷಿಕೆಯ ಅರ್ಥ. ನಿರ್ದೇಶಕರು ತಮ್ಮ ಬಾಲ್ಯದ ಅನುಭವಗಳನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿರುವ 9ರ ಪ್ರಾಯದ ಬಾಲಕನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:37 am, Thu, 22 September 22