ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ನಾಗ ಚೈತನ್ಯ-ಶೋಭಿತಾ
ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಾಗ ಚೈತನ್ಯ ಹಾಗೂ ಹಾಟ್ ನಟಿ ಶೋಭಿತಾ ಧುಲಿಪಾಲ ಬಿಗ್ಬಾಸ್ಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಮನೆ ಸದಸ್ಯರಾಗಿ ಅಲ್ಲ ಬದಲಿಗೆ ಅತಿಥಿಗಳಾಗಿ. ಅಂದಹಾಗೆ ನಾಗ ಚೈತನ್ಯ-ಶೋಭಿತಾ ಹೋಗಲಿರುವ ತೆಲುಗು ಬಿಗ್ಬಾಸ್ ಅನ್ನು ನಾಗ ಚೈತನ್ಯ ತಂದೆ ನಾಗಾರ್ಜುನ ನಿರೂಪಣೆ ಮಾಡುತ್ತಾರೆ. ಹಿಂದೊಮ್ಮೆ ಸಮಂತಾ ಸಹ ನಿರೂಪಣೆ ಮಾಡಿದ್ದರು.
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಅವರು ಇತ್ತೀಚೆಗೆ ಟಾಕ್ ಆಫ್ ದಿ ಟೌಟ್ ಆಗಿರೋದು ಗೊತ್ತೇ ಇದೆ. ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಹಲ್ಚಲ್ ಎಬ್ಬಿಸಿತು. ಇವರ ಮದುವೆಗೆ ಫ್ಯಾನ್ಸ್ ಕಾದಿರುವಾಗಲೇ ಒಂದು ಬಿಸಿಬಿಸಿ ಸುದ್ದಿ ಹರಿದಾಡಿದೆ. ಅದೇನು ಅಂತೀರಾ? ಈ ಜೋಡಿ ಶೀಘ್ರವೇ ‘ಬಿಗ್ ಬಾಸ್ ತೆಲುಗು ಸೀಸನ್ 8’ರ ಮನೆಗೆ ಕಾಲಿಡುತ್ತಾರಂತೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಅವರು ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡರು. ಇವರ ಲವ್ ವಿಚಾರ ಇಷ್ಟು ದಿನ ಗುಟ್ಟಾಗಿಯೇ ಇತ್ತು. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದರು. ಹೀಗಿರುವಾಗಲೇ ಇವರು ನಿಶ್ಚಿತಾರ್ಥ ಮಾಡಿಕೊಂಡರು. ನಾಗ ಚೈತನ್ಯ ಹಾಗೂ ಶೋಭಿತಾ ಜೋಡಿ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ತೆರಳಲಿದ್ದಾರಂತೆ.
ಇದನ್ನೂ ಓದಿ:ಮದುವೆ ಹೇಗಿರಬೇಕು? ಕನಸು ರಿವೀಲ್ ಮಾಡಿದ ನಾಗ ಚೈತನ್ಯ
ವೀಕೆಂಡ್ನಲ್ಲಿ ಅತಿಥಿಗಳನ್ನು ಕರೆಸೋ ಪದ್ಧತಿ ಮೊದಲಿನಿಂದಲೂ ಬಿಗ್ ಬಾಸ್ನಲ್ಲಿ ಚಾಲ್ತಿಯಲ್ಲಿ ಇದೆ. ಈಗ ನಾಗ ಚೈತನ್ಯ ಹಾಗೂ ಶೋಭಿತಾ ಅವರು ತೆರಳಲಿದ್ದಾರಂತೆ. ಇವರು ಮನೆ ಒಳಗೇ ಹೋಗುತ್ತಾರಾ ಅಥವಾ ವೇದಿಕೆ ಮೇಲೆ ಬಂದು ಹೋಸ್ಟ್ ಅಕ್ಕಿನೇನಿ ನಾಗಾರ್ಜುನ ಜೊತೆ ಮಾತನಾಡಿ ತೆರಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಈವರೆಗೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಒಂದೊಮ್ಮೆ ಬಿಗ್ ಬಾಸ್ಗೆ ಅವರು ಬಂದರೆ ಸಹಜವಾಗಿಯೇ ಟಿಆರ್ಪಿ ಹೆಚ್ಚುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡೂ ಈ ರೀತಿ ಮಾಡಲಾಗಿದೆ ಎಂದು ವರದಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಇತ್ತೀಚೆಗೆ ತೆಲುಗು ಬಿಗ್ ಬಾಸ್ ಆರಂಭ ಆಗಿದೆ. ಅಕ್ಕಿನೇನಿ ನಾಗಾರ್ಜುನ ಅವರು ಇದನ್ನು ಹೋಸ್ಟ್ ಮಾಡುತ್ತಿದ್ದಾರೆ. ವೀಕೆಂಡ್ನಲ್ಲಿ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಹಲವು ಟ್ವಿಸ್ಟ್ಗಳನ್ನು ಕೂಡ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ