WITT Global Summit 2025: ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಟಿ ಯಾಮಿ ಗೌತಮ್

ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today) ಜಾಗತಿಕ ಶೃಂಗಸಭೆಯ ಮೂರನೇ ಆವೃತ್ತಿ ನಿನ್ನೆಯಿಂದ ಶುರುವಾಗಿದೆ. ದೆಹಲಿಯ ಭಾರತ ಮಂಟಪಂನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ, ಟಿವಿ9 ಕೆಲಸವನ್ನು ಶ್ಲಾಘಿಸಿದ್ದಾರೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಯಾಮಿ ಗೌತಮ್ ಅವರು ತಮ್ಮ ಪತಿ ಹಾಗೂ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ಮುಂಬರುವ ಚಿತ್ರ 'ಧುರಂಧರ್' ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.

WITT Global Summit 2025: ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಟಿ ಯಾಮಿ ಗೌತಮ್
ನಟಿ ಯಾಮಿ ಗೌತಮ್
Edited By:

Updated on: Mar 29, 2025 | 5:47 PM

ನವದೆಹಲಿ, ಮಾರ್ಚ್ 29: ಟಿವಿ9 ನೆಟ್ ವರ್ಕ್ ನ ‘ ವಾಟ್ ಇಂಡಿಯಾ ಥಿಂಕ್ಸ್ ಟುಡೇ (What India Thinks Today Global Summit 2025) ಜಾಗತಿಕ ಶೃಂಗಸಭೆ’ಯ ಮೂರನೇ ಆವೃತ್ತಿಗೆ ಮಾರ್ಚ್ 28 ರಂದು ಚಾಲನೆ ದೊರೆತಿದೆ. ಇಂದು ದೆಹಲಿ (dehli)ಯ ಭಾರತ್​ ಮಂಟಪ (bharat mantap) ದಲ್ಲಿ ಎರಡನೇ ದಿನದ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯುತ್ತಿದೆ. ಬಾಲಿವುಡ್ ನಟಿ ಯಾಮಿ ಗೌತಮ್ (Yami Gautam) ತನ್ನ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇದಿಕೆಯಲ್ಲಿ ತಮ್ಮ ಪತಿ ಆದಿತ್ಯ ಧರ್ (Aditya Dhar) ಅವರ ಮುಂಬರುವ ಚಿತ್ರ ‘ಧುರಂಧರ್’ (dhurandhar) ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ, ನಾನು ಹುಡುಗನಾಗಿದ್ದರೆ, ಈ ಚಿತ್ರದಲ್ಲಿ ನಾನೇ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದೆ’ ಎಂದು ಹೇಳಿದರು.

ವೇದಿಕೆಯ ಮೇಲೆ ಬಾಲಿವುಡ್ ನಟಿ ಯಾಮಿ ಗೌತಮ್ ಮಾತನಾಡುತ್ತಾ, ‘ಈ ಚಿತ್ರದ ಬಗ್ಗೆ ಮಾತನಾಡಲು ನನಗೆ ಅವಕಾಶವಿಲ್ಲ. ಆದಿತ್ಯ ಧರ್ ಅವರ ಅನುಮತಿಯಿಲ್ಲದೆ, ಅವರ ಪತ್ನಿಯಾಗಿ ಈ ವಿಶೇಷ ಸಂದರ್ಭದಲ್ಲಿ ಅವರ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದೇನೆ. ಆದಿತ್ಯರವರು ಬಹಳ ಅದ್ಭುತವಾದ ಚಿತ್ರವನ್ನು ಮಾಡುತ್ತಿದ್ದಾರೆ ಎಂದು ನಾನು ನಿಮ್ಮ ಬಳಿ ಹೇಳಲು ಬಯಸುತ್ತೇನೆ. ವಾಸ್ತವವಾಗಿ, ನಾನು ಆದಿತ್ಯರವರ ಬಗ್ಗೆ ಮಾತನಾಡುವಾಗಲೆಲ್ಲಾ ನನಗೆ ಪದಗಳು ಸಿಗುವುದಿಲ್ಲ. ಸಿನಿಮಾಗಳ ಮೇಲಿನ ಅವರ ಉತ್ಸಾಹ, ಪರಿಪೂರ್ಣತೆ, ಏನನ್ನಾದರೂ ಸಾಧಿಸಬೇಕು ಎನ್ನುವ ಉತ್ಸಾಹ ಅವರನ್ನು ಇಲ್ಲಿಗೆ ಕರೆತಂದಿದೆ ‘ ಎಂದರು.

ಇದನ್ನೂ ಓದಿ: ನನಗೆ ಭವಿಷ್ಯ ಹೇಳುವುದರಲ್ಲಿ ನಂಬಿಕೆ ಇಲ್ಲ, ಭವಿಷ್ಯ ಸೃಷ್ಟಿಸುವುದರಲ್ಲಿ ನಂಬಿಕೆಯಿದೆ : ಧೀರೇಂದ್ರ ಶಾಸ್ತ್ರಿ

ಇದನ್ನೂ ಓದಿ
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಬೇರೆ ಮಾಧ್ಯಮಗಳೂ ಇದನ್ನೇ ಅನುಸರಿಸುತ್ತವೆ; ಟಿವಿ9ಗೆ ಪ್ರಧಾನಿ ಮೋದಿ ಶ್ಲಾಘನೆ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಭಾರತ ಜಾಗತಿಕ ದಕ್ಷಿಣದ ದೇಶಗಳ ಧ್ವನಿಯಾಗುತ್ತಿದೆ; WITT ಶೃಂಗಸಭೆಯಲ್ಲಿ ಮೋದಿ

ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ನಟಿ ಯಾಮಿ ಗೌತಮ್

ಇದೇ ಸಂದರ್ಭದಲ್ಲಿ ಬಾಲಿವುಡ್ ನಟಿ ಯಾಮಿ ಗೌತಮ್ ಅಪ್ಡೇಟ್ ನೀಡಿದರು. ಈ ಚಿತ್ರದ ಬಗ್ಗೆ ಮಾತನಾಡಿದ ನಟಿ, ‘ಧುರಂಧರ್ ಚಿತ್ರದ ಬಗ್ಗೆ ಹೇಳುವುದಾದರೆ, ಇದು ಒಂದು ಥ್ರಿಲ್ಲರ್ ಚಿತ್ರ. ಇದರಲ್ಲಿ ತುಂಬಾ ಆಕ್ಷನ್ ಸೀನ್ ಗಳಿದ್ದು, ಇದು ನೈಜ ಘಟನೆಗಳಿಂದ ಪ್ರೇರಿತವಾದ ಕಥೆ. ನಾನು ಈ ಸ್ಕ್ರಿಪ್ಟ್ ಓದಿದಾಗ, ನನ್ನ ಅಭಿಪ್ರಾಯವನ್ನು ಅವರಿಗೆ ತಿಳಿಸಲು ತುಂಬಾ ಸಮಯ ಹಿಡಿಯಿತು. ಏಕೆಂದರೆ ಅಲ್ಲಿಯವರೆಗೆ ನಾನು ಅಂತಹ ಸ್ಕ್ರಿಪ್ಟ್ ಓದಿರಲಿಲ್ಲ. ಆದರೆ ಈ ಸ್ಕ್ರಿಪ್ಟ್ ಓದಿದ ಸ್ವಲ್ಪ ಸಮಯದ ನಂತರದಲ್ಲಿ ನಾನು ಆದಿತ್ಯನಿಗೆ, ನಾನು ಹುಡುಗನಾಗಿದ್ದರೆ ಈ ಪಾತ್ರವನ್ನು ನಾನೇ ನಿರ್ವಹಿಸುತ್ತಿದ್ದೆ ಎಂದು ಹೇಳಿದೆ. ನಾನು ಈ ಸಂದರ್ಭದಲ್ಲಿ ಹೇಳಬಹುದಾದದ್ದು ಇಷ್ಟೇ, ಆದಿತ್ಯ ತನ್ನ ಪ್ರೇಕ್ಷಕರನ್ನು ತುಂಬಾ ಗೌರವಿಸುತ್ತಾನೆ. ಹೀಗಾಗಿ ಈ ಚಿತ್ರವನ್ನು ಜನಸಾಮಾನ್ಯರು ಮತ್ತು ಪ್ರೇಕ್ಷಕ ವರ್ಗದವರು ಇಬ್ಬರಿಗೂ ಇಷ್ಟವಾಗುವಂತೆ ಮಾಡುತ್ತಿದ್ದಾನೆ. ಈ ಚಿತ್ರ ಬಿಡುಗಡೆಯಾದಾಗಲೆಲ್ಲಾ ಇಡೀ ಜಗತ್ತು ಈ ಚಿತ್ರ ನೋಡಿ ಮೆಚ್ಚಿಕೊಳ್ಳುತ್ತದೆ ಎಂದು ನನಗೆ ಖಾತ್ರಿಯಿದೆ’ ಎಂದು ಹೇಳಿದರು. ಈ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಅನೇಕ ಪ್ರಸಿದ್ಧ ನಟರು ನಟಿಸಿದ್ದಾರೆ.

WITT ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ