ದಕ್ಷಿಣದ ಈ ಸೆಲೆಬ್ರಿಟಿಗಳು ಹೊಂದಿದ್ದಾರೆ ಐಷಾರಾಮಿ ಮನೆ; ಇಲ್ಲಿದೆ ವಿವರ..

ದಕ್ಷಿಣ ಭಾರತದಲ್ಲಿ ಹಲವು ಶ್ರೀಮಂತ ನಟರು ಇದ್ದಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ಅವರು ಐಷಾರಾಮಿ ಮನೆ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ದಕ್ಷಿಣದ ಈ ಸೆಲೆಬ್ರಿಟಿಗಳು ಹೊಂದಿದ್ದಾರೆ ಐಷಾರಾಮಿ ಮನೆ; ಇಲ್ಲಿದೆ ವಿವರ..
ದಕ್ಷಿಣದ ಈ ಸೆಲೆಬ್ರಿಟಿಗಳು ಹೊಂದಿದ್ದಾರೆ ಐಷಾರಾಮಿ ಮನೆ; ಇಲ್ಲಿದೆ ವಿವರ..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 04, 2023 | 12:20 PM

ಸೆಲೆಬ್ರಿಟಿ ಪಟ್ಟ ಸಿಕ್ಕ ತಕ್ಷಣ ಅನೇಕರು ಮನೆ ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ದೇಶ-ವಿದೇಶದಿಂದ ಪಿಠೋಪಕರಣಗಳನ್ನು ತಂದು ಮನೆಯನ್ನು ಅಲಂಕರಿಸುತ್ತಾರೆ. ಬರ್ತ್​ಡೇ ಸಂದರ್ಭದಲ್ಲಿ ಮನೆಯ ಎದುರು ಫ್ಯಾನ್ಸ್ ನೆರೆಯುತ್ತಾರೆ. ಹೀಗಾಗಿ, ಜಾಗ ದೊಡ್ಡದಿರಲಿ ಎಂದು ಸೆಲೆಬ್ರಿಟಿಗಳು ಇಚ್ಛಿಸುತ್ತಾರೆ. ಯಶ್ (Yash), ಜೂನಿಯರ್​ ಎನ್​ಟಿಆರ್​ ಸೇರಿ ದಕ್ಷಿಣದ ಈ ಸೆಲೆಬ್ರಿಟಿಗಳ ಮನೆ ಸಖತ್ ಐಷಾರಾಮಿ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಅಲ್ಲು ಅರ್ಜುನ್

‘ಪುಷ್ಪ 2’ ಕೆಲಸಗಳಲ್ಲಿ ನಟ ಅಲ್ಲು ಅರ್ಜುನ್ ತೊಡಗಿಕೊಂಡಿದ್ದಾರೆ. ಪ್ರತಿ ಸಿನಿಮಾಗೆ ಇವರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಇವರು ಹೈದರಾಬಾದ್​ನಲ್ಲಿ ದೊಡ್ಡದಾದ ಬಂಗಲೆ ಹೊಂದಿದ್ದಾರೆ. ಇದರ ಬೆಲೆ 100 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ಅವರ ನಿವಾಸದಲ್ಲಿ ಪೂಲ್, ಗಾರ್ಡನ್ ಇದೆ. ಅವರು ಮುಂಜಾನೆ ಗಾರ್ಡನ್ ಏರಿಯಾದಲ್ಲಿ ಧ್ಯಾನ ಮಾಡುತ್ತಾರೆ. ಮನೆಯ ಹೊರ ಭಾಗದಲ್ಲಿ ಎಎ ಲೋಗೋ ಇದೆ.

ದುಲ್ಕರ್ ಸಲ್ಮಾನ್

ಹಲವು ಭಾಷೆಗಳಲ್ಲಿ ನಟಿಸಿ ದುಲ್ಕರ್ ಸಲ್ಮಾನ್ ಫೇಮಸ್ ಆಗಿದ್ದಾರೆ. ಅವರು ಕೊಚ್ಚಿಯಲ್ಲಿ ಮನೆ ಹೊಂದಿದ್ದು, ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ. ಪತಿ, ಮಕ್ಕಳ ಜೊತೆ ಅವರು ಇಲ್ಲಿ ವಾಸವಾಗಿದ್ದಾರೆ. ಅವರ ಪತ್ನಿಯೇ ಈ ಮನೆಯ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ.

ಮಹೇಶ್ ಬಾಬು

ಮಹೇಶ್ ಬಾಬು ಅವರು ಹೈದರಾಬಾದ್​ನ ಜುಬ್ಲಿ ಹಿಲ್ಸ್​ನಲ್ಲಿ ಮನೆ ಹೊಂದಿದ್ದಾರೆ. ಟಾಲಿವುಡ್ ಹೀರೋಗಳ ಫೇವರಿಟ್ ಜಾಗ ಇದು. ನಮ್ರತಾ ಶಿರೋಡ್ಕರ್ ಹಾಗೂ ಮಕ್ಕಳ ಜೊತೆ ಮಹೇಶ್ ಬಾಬು ಇಲ್ಲಿ ವಾಸವಾಗಿದ್ದಾರೆ. ಈ ಮನೆಯ ಬೆಲೆ 28 ಕೋಟಿ ರೂಪಾಯಿ ಎನ್ನಲಾಗಿದೆ. ಸ್ವಿಮ್ಮಿಂಗ್ ಪೂಲ್, ಜಿಮ್ ಇತ್ಯಾದಿ ಸೌಕರ್ಯ ಇದೆ.

ಯಶ್

ಯಶ್ ಅವರು ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಸಮೀಪ ಮನೆ ಹೊಂದಿದ್ದಾರೆ. ಪ್ರೆಸ್ಟೀಜ್ ಅಪಾರ್ಟ್​ಮೆಂಟ್​ನಲ್ಲಿ ಯಶ್ ಅವರು ಲಕ್ಷುರಿ ಡುಪ್ಲೆಕ್ಸ್ ಮನೆ ಹೊಂದಿದ್ದಾರೆ. ವಿದೇಶದಿಂದ ವಸ್ತುಗಳನ್ನು ತರಿಸಿ ಮನೆಯ ಇಂಟೀರಿಯರ್ ಡಿಸೈನ್  ಮಾಡಲಾಗಿದೆ. ಗೃಹ ಪ್ರವೇಶದ ಸಂದರ್ಭದ ಫೋಟೋ ವೈರಲ್ ಆಗಿತ್ತು.

ಧನುಷ್

ಧನುಷ್ ಅವರು ಕನಸಿನ ಮನೆ ಕಟ್ಟಿಸಿದ್ದಾರೆ. ಚೆನ್ನೈನಲ್ಲಿ ಅವರು 19,000 ಚದರ ಅಡಿಯ ಮನೆ ಹೊಂದಿದ್ದಾರೆ. ವಿಶಾಲವಾದ ಬಾಲ್ಕನಿ, ರೂಂ, ಟೆರೇಸ್ ಗಾರ್ಡನ್ ಇದೆ. ಈ ಮನೆ ನಿರ್ಮಾಣಕ್ಕೆ 150 ಕೋಟಿ ರೂಪಾಯಿ ಖರ್ಚಾಗಿತ್ತು ಎನ್ನಲಾಗಿದೆ. ಗೃಹ ಪ್ರವೇಶದ ಸಂದರ್ಭದ ಫೋಟೋ ವೈರಲ್ ಆಗಿತ್ತು.

ಶಿವರಾಜ್​ಕುಮಾರ್

ನಟ ಶಿವರಾಜ್​ಕುಮಾರ್ ಅವರು 125ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಬೆಂಗಳೂರಿನ ನಾಗಾವರದಲ್ಲಿ ವಿಶಾಲವಾದ ಮನೆ ಹೊಂದಿದ್ದಾರೆ. ಅನೇಕ ಸಿನಿಮಾಗಳ ಸುದ್ದಿಗೋಷ್ಠಿಗಳನ್ನು ಅವರು ಇಲ್ಲಿ ನಡಡೆಸಿದ್ದಾರೆ.

ನಾಗ ಚೈತನ್ಯ

ನಾಗ ಚೈತನ್ಯ ಅವರು 15 ಕೋಟಿ ರೂಪಾಯಿಯ ಮನೆ ಹೊಂದಿದ್ದಾರೆ. ಇದು ಹೈದರಾಬಾದ್​ನಲ್ಲಿದೆ. ಈ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್, ಟೆರೇಸ್ ಇದೆ. ಹಲವು ಕೋಣೆಗಳನ್ನು ಈ ಮನೆ ಹೊಂದಿದೆ.

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಅವರು ಹೈದರಾಬಾದ್​ನ ಜುಬ್ಲಿ ಹಿಲ್ಸ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಇದರ ಬೆಲೆ 15 ಕೋಟಿ ರೂಪಾಯಿ ಎನ್ನಲಾಗಿದೆ. ಕುಟುಂಬದ ಜೊತೆ ಅವರು ಇಲ್ಲಿ ವಾಸವಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಇಲ್ಲಿಗೆ ಆಗಾಗ ಭೇಟಿ ನೀಡುತ್ತಾರೆ ಎಂದು ವರದಿ ಆಗಿದೆ.

ರಾಮ್ ಚರಣ್

‘ಆರ್​ಆರ್​ಆರ್’ ಮೂಲಕ ರಾಮ್ ಚರಣ್ ಫೇಮಸ್ ಆಗಿದ್ದಾರೆ. ಅವರು 25 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣ ಆಗಿರುವ ಮನೆಯಲ್ಲಿ ವಾಸವಾಗಿದ್ದಾರೆ. ಇದರ ಬೆಲೆ 30 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸ್ವಿಮಿಂಗ್ ಪೂಲ್, ಟೆನ್ನಿಸ್ ಕೋರ್ಟ್​​ ಮತ್ತಿತ್ಯಾದಿ ಸೌಕರ್ಯವನ್ನು ಇದು ಹೊಂದಿದೆ. ಪತ್ನಿ ಉಪಾಸನಾ, ಮಗಳು ಕ್ಲಿನ್​ಕಾರಾ ಜೊತೆ ಅವರು ಇಲ್ಲಿ ವಾಸವಾಗಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಮನೆಯಲ್ಲಿ ದೀಪಾವಳಿ ಪಾರ್ಟಿ, ಟಾಲಿವುಡ್ ತಾರೆಯರ ಸಂಗಮ

ಜೂನಿಯರ್ ಎನ್​ಟಿಆರ್

ಜೂನಿಯರ್ ಎನ್​ಟಿಆರ್ ಅವರು ಜುಬ್ಲಿ ಹಿಲ್ಸ್​ನಲ್ಲಿ ಮನೆ ಹೊಂದಿದ್ದಾರೆ. ಹಲವು ಮಾಡರ್ನ್​ ಸೌಕರ್ಯಗಳನ್ನು ಈ ಮನೆ ಹೊಂದಿದೆ. ಈ ಮನೆಯ ಬೆಲೆ 25 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ