ಯಶ್ ರಾವಣನ ಪಾತ್ರ ಒಪ್ಪಿಕೊಳ್ಳಲು ಕಾರಣ ಆಗಿದ್ದು ಆ ಒಂದು ವಿಷಯ

ರಾಕಿಂಗ್ ಸ್ಟಾರ್ ಯಶ್ ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರ ಒಪ್ಪಿಕೊಳ್ಳಲು ಕಾರಣ ಬಹಿರಂಗವಾಗಿದೆ. ನಿರ್ದೇಶಕ ನಿತೇಶ್ ತಿವಾರಿ ರಾವಣನನ್ನು ಕೇವಲ ಕೆಟ್ಟವನಾಗಿ ತೋರಿಸದೆ, ಅವನ ಜ್ಞಾನ, ಭಕ್ತಿ ಮತ್ತು ಬಹುಮುಖಿ ಗುಣಗಳನ್ನು ಅನಾವರಣಗೊಳಿಸಿದ್ದಾರೆ. ರಣಬೀರ್ ಕಪೂರ್ ಕೂಡ ಈ ಪಾತ್ರದ ವಿಶಿಷ್ಟ ವ್ಯಾಖ್ಯಾನವನ್ನು ವಿವರಿಸಿದ್ದಾರೆ. ಅಹಂಕಾರ ಮತ್ತು ಪ್ರತೀಕಾರದ ಸಂದೇಶದೊಂದಿಗೆ, ಯಶ್ ಈ ಭಿನ್ನವಾದ ರಾವಣನ ಪಾತ್ರಕ್ಕೆ ಆಕರ್ಷಿತರಾಗಿದ್ದಾರೆ.

ಯಶ್ ರಾವಣನ ಪಾತ್ರ ಒಪ್ಪಿಕೊಳ್ಳಲು ಕಾರಣ ಆಗಿದ್ದು ಆ ಒಂದು ವಿಷಯ
ಯಶ್

Updated on: Apr 08, 2026 | 7:46 AM

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರ ಜೂನ್​ 4ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ಹಾಗೂ ಸಾಂಗ್ ರಿಲೀಸ್​ ಆಗಿ ಸದ್ದು ಮಾಡಿತ್ತು. ಈ ಚಿತ್ರದ ಜೊತೆ ಅವರು ‘ರಾಮಾಯಣ’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದಾರೆ. ಈ ಚಿತ್ರ ಒಪ್ಪಿಕೊಳ್ಳಲು ಕಾರಣವಾದ ವಿಷಯವೇನು ಎಂಬ ವಿಷಯ ಈಗ ರಿವೀಲ್ ಆಗಿದೆ.

ಇತ್ತೀಚೆಗೆ ರಿಲೀಸ್ ಆದ ‘ರಾಮಾಯಣ’ ಟೀಸರ್​​ನಲ್ಲಿ ಯಶ್ ಅವರು ರಾವಣನ ಪಾತ್ರ ಹೇಗಿರಬಹುದು ಎಂಬುದರ ಸಣ್ಣ ಝಲಕ್ ತೋರಿಸಲಾಗಿದೆ. ಈ ಟೀಸರ್​​ನಲ್ಲಿ ರಾವಣನ ಪಾತ್ರವನ್ನು ಹಿಂಭಾಗದಿಂದ ಮಾತ್ರ ತೋರಿಸಲಾಗಿದೆ. ಈ ಮೂಲಕ ನಿರೀಕ್ಷೆ ಮುಂದುವರಿಯುವಂತೆ ಮಾಡಲಾಗಿದೆ.ಈ ಪಾತ್ರದ ಬಗ್ಗೆ ನಿರ್ದೇಶಕ ನಿತೇಶ್ ತಿವಾರಿ ಇತ್ತೀಚೆಗೆ ಮಾತನಾಡಿದ್ದರು.

‘ರಾವಣ ಎಂದಾಕ್ಷಣ ನೆನಪಿಗೆ ಬರೋದು ಆತನ ಕೆಟ್ಟ ಗುಣಗಳು. ಆದರೆ, ರಾವಣ ಕೇವಲ ಕೆಟ್ಟವನು ಮಾತ್ರ ಆಗಿರಲಿಲ್ಲ. ಆತ, ಶಿವನ ದೊಡ್ಡ ಭಕ್ತನಾಗಿದ್ದ. ಆತನಿಗೆ ಸಾಕಷ್ಟು ಜ್ಞಾನ ಇತ್ತು. ರಾವಣನ ಹಲವು ಶೇಡ್​​ಗಳನ್ನು ತೋರಿಸುವ ಪ್ರಯತ್ನ ಸಿನಿಮಾದಲ್ಲಿ ಆಗಲಿದೆ’ ಎಂದು ನಿತೇಶ್ ಹೇಳಿದ್ದಾರೆ.

‘ಒಬ್ಬ ಮನುಷ್ಯ ಅಹಂಕಾರ ಮತ್ತು ಪ್ರತೀಕಾರವನ್ನು ಬೆಳೆಸಿಕೊಂಡರೆ ಅವನ ಯಾವುದೇ ಉತ್ತಮ ಗುಣಗಳು ಕೆಲಸಕ್ಕೆ ಬರೋದಿಲ್ಲ ಮತ್ತು ಅವನು ರಾವಣನಂತೆ ಕೊನೆಗೊಳ್ಳುತ್ತಾನೆ’ ಎಂಬ ಸಂದೇಶ ಸಿನಿಮಾದಲ್ಲಿ ಇರಲಿದೆಯಂತೆ. ಈ ಚಿತ್ರದಲ್ಲಿ ರಾವಣನ ವ್ಯಾಖ್ಯಾನವು ನಾವು ಈ ಮೊದಲು ನೋಡಿದ ಇತರ ರಾಮಾಯಣ ಚಿತ್ರಗಳಲ್ಲಿ ನೋಡಿದ್ದಕ್ಕಿಂತ ಬಹಳ ಭಿನ್ನವಾಗಿರುತ್ತದೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಯಶ್ ಅವರು ಈ ಪಾತ್ರವನ್ನು ನೋಡುವ ರೀತಿ ಕೂಡ ಭಿನ್ನವಾಗಿದೆ ಎಂದು ರಣಬೀರ್ ವಿವರಿಸಿದ್ದರು.

ಇದನ್ನೂ ಓದಿ: ರಾವಣನ ಪಾತ್ರ ಮಾಡಲು ಒಪ್ಪಿದ್ದೇಕೆ ಯಶ್, ನಿರ್ದೇಶಕರು ಕೊಟ್ಟರು ಉತ್ತರ

ಈ ಎಲ್ಲಾ ಕಾರಣದಿಂದ ಯಶ್ ಅವರು ರಾವಣನ ಪಾತ್ರ ಮಾಡಲು ಒಪ್ಪಿರಬಹುದು ಎನ್ನಲಾಗುತ್ತಿದೆ. ಈ ಮೊದಲು ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಯಶ್, ರಾವಣನ ಪಾತ್ರ ಮಾಡಲು ತುಂಬಾನೇ ಇಷ್ಟ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 7:43 am, Wed, 8 April 26

Follow Us