ರಾವಣನ ಪಾತ್ರ ಮಾಡಲು ಒಪ್ಪಿದ್ದೇಕೆ ಯಶ್, ನಿರ್ದೇಶಕರು ಕೊಟ್ಟರು ಉತ್ತರ
Yash movie: ‘ರಾಮಾಯಣ’ ಸಿನಿಮಾಕ್ಕೆ ವಿಶ್ವದರ್ಜೆಯ ವಿಎಫ್ಎಕ್ಸ್ ತಂತ್ರಜ್ಞಾನ ಬಳಸಲಾಗಿದೆ. ಸಿನಿಮಾವನ್ನು ಐಮ್ಯಾಕ್ಸ್ ಗಾಗಿ ವಿಶೇಷವಾಗಿ ಚಿತ್ರೀಕರಿಸಲಾಗಿದೆ. ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿಯೂ ಹಾಗೂ ರಾವಣನಾಗಿ ನಟ ಯಶ್ ನಟಿಸಿದ್ದಾರೆ. ಆದರೆ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್, ರಾವಣನಂಥಹಾ ವಿಲನ್ ಪಾತ್ರದಲ್ಲಿ ನಟಿಸಲು ಒಪ್ಪಿದ್ದೇಕೆ? ನಿರ್ದೇಶಕ ನಿತೀಶ್ ತಿವಾರಿ ಉತ್ತರ ನೀಡಿದ್ದಾರೆ.

ರಣ್ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಎರಡು ಭಾಗಗಳ ನಿರ್ಮಾಣಕ್ಕೆ ಸುಮಾರು 4000 ಕೋಟಿ ಬಜೆಟ್ ಮೀಸಲಿಡಲಾಗಿದೆಯಂತೆ. ಸಿನಿಮಾಕ್ಕೆ ವಿಶ್ವದರ್ಜೆಯ ವಿಎಫ್ಎಕ್ಸ್ ತಂತ್ರಜ್ಞಾನ ಬಳಸಲಾಗಿದೆ. ಸಿನಿಮಾವನ್ನು ಐಮ್ಯಾಕ್ಸ್ ಗಾಗಿ ವಿಶೇಷವಾಗಿ ಚಿತ್ರೀಕರಿಸಲಾಗಿದೆ. ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿಯೂ ಹಾಗೂ ರಾವಣನಾಗಿ ನಟ ಯಶ್ ನಟಿಸಿದ್ದಾರೆ. ಆದರೆ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್, ರಾವಣನಂಥಹಾ ವಿಲನ್ ಪಾತ್ರದಲ್ಲಿ ನಟಿಸಲು ಒಪ್ಪಿದ್ದೇಕೆ? ನಿರ್ದೇಶಕ ನಿತೀಶ್ ತಿವಾರಿ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಿತೀಶ್ ತಿವಾರಿ, ‘ರಾವಣನದ್ದು ಬಹಳ ಸಂಕೀರ್ಣವಾದ ವ್ಯಕ್ತಿತ್ವ. ಆತನನ್ನು ಕೇವಲ ಒಬ್ಬ ‘ವಿಲನ್’ ಆಗಿಯೇ ನೋಡಲಾಗಿದೆ. ಆದರೆ ಆತ ಜ್ಞಾನವಂತನಾಗಿದ್ದ, ಸಂಗೀತಗಾರನಾಗಿದ್ದ, ವೈದ್ಯ ಜ್ಞಾನ ಪಾರಂಗತನಾಗಿದ್ದ, ಎಲ್ಲಕ್ಕಿಂತಲೂ ಮಿಗಿಲಾಗಿ ಆತ ಮಹಾನ್ ಶಿವಭಕ್ತನಾಗಿದ್ದ. ನಾವು ರಾವಣನನ್ನು ಒಬ್ಬ ದುಷ್ಟ ಎಂದು ಚಿತ್ರಿಸದೆ ಆತನ ಗುಣ-ಅವಗುಣ ಎರಡನ್ನು ತೋರಿಸಲಿದ್ದೇವೆ, ಇಂಥಹಾ ಪಾತ್ರ ಮಾಡಲು ದೊಡ್ಡ ಸ್ಟಾರ್ಡಮ್ ಮತ್ತು ಕಾನ್ಫಡೆನ್ಸ್ ಇರುವ ಯಶ್ ಅವರಿಂದಲೇ ಸಾಧ್ಯ’ ಎಂದಿದ್ದಾರೆ.
ಇದನ್ನೂ ಓದಿ:ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?
ರಾವಣನ ಪಾತ್ರ ಸಂಕೀರ್ಣವಾಗಿರುವ ಕಾರಣ ಯಾರೆಂದರು ಅವರು ಆ ಪಾತ್ರದಲ್ಲಿ ನಟಿಸುವುದು ನನಗೆ ಇಷ್ಟವಿರಲಿಲ್ಲ. ನಾವು ರಾವಣನನ್ನು ತೋರಿಸುವ ರೀತಿ ಇಷ್ಟವಾಗಿಯೇ ಯಶ್ ಅವರು ಆ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕತೆ ಕೇಳಿದ ಬಳಿಕ ಸ್ವತಃ ರಣ್ಬೀರ್ ಕಪೂರ್ ಅವರು ಸಹ, ‘ನಾವು ನೋಡಿರುವ ‘ರಾಮಾಯಣ’ಗಳಲ್ಲಿಯೇ ಅತ್ಯಂತ ಭಿನ್ನವಾಗಿ ರಾವಣನ ಪಾತ್ರವನ್ನು ಈ ಸಿನಿಮಾನಲ್ಲಿ ಡಿಸೈನ್ ಮಾಡಲಾಗಿದೆ’ ಎಂದು ಮೆಚ್ಚಿಕೊಂಡಿದ್ದಾಗಿಯೂ ಸಹ ನಿತೇಶ್ ತಿವಾರಿ ಹೇಳಿದ್ದಾರೆ.
ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿರುವುದು ಮಾತ್ರವೇ ಅಲ್ಲದೆ ಸಿನಿಮಾದ ಸಹ ನಿರ್ಮಾಪಕ ಸಹ ಆಗಿದ್ದಾರೆ. ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ, ಕಾಜಲ್ ಅಗರ್ವಾಲ್ ಮಂಡೋದರಿಯಾಗಿ, ರವಿ ದುಬೆ ಲಕ್ಷ್ಮಣನಾಗಿ, ರಕುಲ್ ಪ್ರೀತ್ ಸಿಂಗ್ ಶೂರ್ಪಣಕಿ ಆಗಿ, ಲಾರಾ ದತ್ತ ಕೈಕೆಯಾಗಿ, ಕುನಾಲ್ ಕಪೂರ್ ಇಂದ್ರನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾಗಿರುವ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರುಗಳು ಸಂಗೀತ ನೀಡಿದ್ದಾರೆ. ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
