ಸಿದ್ದಾರ್ಥ್ ಮಲ್ಹೋತ್ರಾ ಮೊದಲ ಸಂಭಾವನೆ ಇಷ್ಟೇನಾ? ವೈರಲ್ ಆಯ್ತು ಹೇಳಿಕೆ

| Updated By: ರಾಜೇಶ್ ದುಗ್ಗುಮನೆ

Updated on: Mar 21, 2024 | 9:33 AM

ಸಿದ್ದಾರ್ಥ್ ಅವರು ಕರಣ್ ಜೋಹರ್ ನಿರ್ಮಾಣದ ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾ 2012ರಲ್ಲಿ ರಿಲೀಸ್ ಆಯಿತು. ನಟನೆಗೆ ಕಾಲಿಡುವುದಕ್ಕೂ ಮೊದಲು ಸಿದ್ದಾರ್ಥ್ ಅವರು ಮಾಡೆಲ್ ಆಗಿದ್ದರು. ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.

ಸಿದ್ದಾರ್ಥ್ ಮಲ್ಹೋತ್ರಾ ಮೊದಲ ಸಂಭಾವನೆ ಇಷ್ಟೇನಾ? ವೈರಲ್ ಆಯ್ತು ಹೇಳಿಕೆ
ಸಿದ್ದಾರ್ಥ್
Follow us on

ನಟ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅವರು ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಅವರ ನಟನೆಯ ‘ಯೋಧ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಆದರೆ, ಈ ಚಿತ್ರ ಅಂದುಕೊಂಡ ರೀತಿಯಲ್ಲಿ ಬಿಸ್ನೆಸ್ ಮಾಡುತ್ತಿಲ್ಲ. ಸಿದ್ದಾರ್ಥ್ ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅವರ ಮೊದಲ ಸಂಭಾವನೆ ಎಷ್ಟು ಎಂದು ಕೇಳಿದರೆ ನೀವು ಅಚ್ಚರಿ ಪಡೋದು ಗ್ಯಾರಂಟಿ.

ಸಿದ್ದಾರ್ಥ್ ಅವರು ಕರಣ್ ಜೋಹರ್ ನಿರ್ಮಾಣದ ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾ 2012ರಲ್ಲಿ ರಿಲೀಸ್ ಆಯಿತು. ನಟನೆಗೆ ಕಾಲಿಡುವುದಕ್ಕೂ ಮೊದಲು ಸಿದ್ದಾರ್ಥ್ ಅವರು ಮಾಡೆಲ್ ಆಗಿದ್ದರು. ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಅವರು ಮಾಡೆಲ್ ಆದಾಗ ಪಡೆದ ಮೊದಲ ಸಂಭಾವನೆ ಎಂದರೆ ಅದು 2,500 ರೂಪಾಯಿ. ಇದು ಅವರ ಮೊದಲ ಗಳಿಕೆ.

ನ್ಯೂಸ್18 ನಡೆಸಿದ ‘ರೈಸಿಂಗ್ ಭಾರತ ಸಮ್ಮಿತ್​’ನಲ್ಲಿ ಸಿದ್ದಾರ್ಥ್ ಭಾಗಿ ಆಗಿದ್ದರು. ಈ ವೇಳೆ ಅವರು ಮಾತನಾಡಿದ್ದಾರೆ. ‘ಆ ಜರ್ನಿ ತನ್ನದೇ ಆದ ಕಷ್ಟಗಳನ್ನು ಹೊಂದಿತ್ತು. ಅದು ಅಷ್ಟು ಸುಲಭವಾಗಿರಲಿಲ್ಲ. ನನಗೆ 20 ವರ್ಷ. ನಾನು ಏಜೇನ್ಸಿ ಮೂಲಕ ಒಂದು ಆಡಿಷನ್​ಗೆ ಹೋಗಿದ್ದೆ. ಅವರು ನನ್ನ ಫೋಟೋನ ಪೇಪರ್​ನಲ್ಲಿ ನೋಡಿದ್ದರು’ ಎಂದಿದ್ದಾರೆ ಸಿದ್ದಾರ್ಥ್.

‘ನಾನು ಮಾಡೆಲಿಂಗ್ ಮಾಡುತ್ತಿದ್ದೆ. ಹೀಗಾಗಿ ನನ್ನ ಫೋಟೋ ಪೇಪರ್​ನಲ್ಲಿ ಬರುತ್ತಿತ್ತು. ನಾನು ಸ್ಯಾಮ್​ಸಂಗ್ ಮೊಬೈಲ್ ಕ್ಯಾಂಪೇನ್​ಗೆ ಜಾಹೀರಾತು ಮಾಡಿದ್ದೆ. ಅವರಿಗೆ ಹುಡುಗಿ ಹಾಗೂ ಹುಡುಗ ಬೇಕಿದ್ದರು. ಅವರು ಎರಡೂವರೆ ಸಾವಿರ ರೂಪಾಯಿ ನೀಡಿದ್ದರು. ಆಗ ನಮ್ಮ ಬೆಲೆ ಅಷ್ಟಿತ್ತು’ ಎಂದಿದ್ದಾರೆ ಅವರು. ಈ ಮೂಲಕ ಮೊದಲ ಸಂಭಾವನೆ ರಿವೀಲ್ ಮಾಡಿದ್ದಾರೆ.

‘ನಾನು ನೇರವಾಗಿ ನಿರ್ಮಾಣ ಸಂಸ್ಥೆಯವರ ಬಳಿಯೇ ಹೋದೆ. ನಾನು ಹೋಗಿದ್ದು ನಟನಾಗಿ ಅಲ್ಲ ಸಹಾಯಕ ನಿರ್ದೇಶಕನಾಗಿ. ಆ ದಿನಗಳು ನನ್ನ ದಾರಿಯನ್ನು ನಿರ್ಧಾರ ಮಾಡಿದ್ದೆವು’ ಎಂದಿದ್ದಾರೆ ಸಿದ್ದಾರ್ಥ್. ಅವರು ಕರಣ್ ಜೋಹರ್ ಅವರ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಅನ್ನೋದು ವಿಶೇಷ.

ಇದನ್ನೂ ಓದಿ: ಹಾರಾಡುತ್ತಿರುವ ವಿಮಾನದಲ್ಲಿ ‘ಯೋಧ’ ಟ್ರೇಲರ್ ರಿಲೀಸ್; ಹೈಜಾಕ್ ಕಥೆ ಹೇಳಲು ಬಂದ ಸಿದ್ದಾರ್ಥ್

ನಟನೆಯ ಜೊತೆಗೆ ಸಿದ್ದಾರ್ಥ್ ಅವರು ನಿರ್ದೇಶನದ ಬಗ್ಗೆಯೂ ಜ್ಞಾನ ಪಡೆದುಕೊಂಡರು. ಇದು ಅವರಿಗೆ ಸಹಯ ಆಗಿತ್ತು. ಕ್ಯಾಮೆರಾ ಎದುರು ಹೇಗೆ ಕಾಣಿಸಿಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳು ಅವರಿಗೆ ಕಲಿಯಲು ಸಿಕ್ಕವು. ಕರಣ್ ಜೋಹರ್ ಅವರು ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ಅವರನ್ನು ಲಾಂಚ್ ಮಾಡಿದರು. ಅವರಿಗೆ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.

ಯೋಧ ಸಿನಿಮಾ ಗಳಿಕೆ

‘ಯೋಧ’ ಸಿನಿಮಾದ ಗಳಿಕೆ ಆರು ದಿನಕ್ಕೆ ಕೇವಲ 23 ಕೋಟಿ ರೂಪಾಯಿ ಆಗಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಸಿನಿಮಾ 50 ಕೋಟಿ ರೂಪಾಯಿ ಗಳಿಕೆ ಮಾಡುವುದು ಅನುಮಾನವೇ. ಈ ವೀಕೆಂಡ್ ಸಿನಿಮಾ ಉತ್ತಮ ಗಳಿಕೆ ಮಾಡುವ ಅನಿವಾರ್ಯತೆ ಇದೆ. ಸಿದ್ದಾರ್ಥ್ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಯೋಧನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ