ಯುವ ನಟಿ ಜೊತೆ ಟೀಂ ಇಂಡಿಯಾ ಆಟಗಾರನ ಡೇಟಿಂಗ್; ಚಾಂಪಿಯನ್ಸ್ ಟ್ರೋಫಿಯಲ್ಲಿ ಹೊರಬಿತ್ತು ಸತ್ಯ
ಬಾಲಿವುಡ್ ನಟಿ ಅವನೀತ್ ಕೌರ್ ಮತ್ತು ಟೀಂ ಇಂಡಿಯಾ ಆಟಗಾರನ ನಡುವಿನ ಸಂಬಂಧದ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವರಿಬ್ಬರೂ ಪ್ರೀತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವನೀತ್ ಕೌರ್ ಅಭಿಮಾನಿಗಳು ಇದನ್ನು ತಳ್ಳಿ ಹಾಕಿದ್ದು, ಸರಿಯಾದ ಸಾಕ್ಷ್ಯ ನೀಡುವಂತೆ ಕೋರಿದ್ದಾರೆ.

ಬಾಲಿವುಡ್ನ ಯುವ ನಟಿ ಅವನೀತ್ ಕೌರ್ ಅವರಿಗೆ ಈಗಿನ್ನೂ 23 ವರ್ಷ ವಯಸ್ಸು. ಈಗಾಗಲೇ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ರಾಘವ್ ಶರ್ಮಾ ಜೊತೆ ಅವರು ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಈಗ ಅವರ ಹೆಸರು ಟೀಂ ಇಂಡಿಯಾದ ಯುವ ಆಟಗಾರನ ಜೊತೆ ತಳುಕು ಹಾಕಿಕೊಂಡಿದೆ. ಇವರಿಬ್ಬರೂ ಪ್ರೀತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವನೀತ್ ಕೌರ್ ಅಭಿಮಾನಿಗಳು ಇದನ್ನು ತಳ್ಳಿ ಹಾಕಿದ್ದು, ಸರಿಯಾದ ಸಾಕ್ಷ್ಯ ನೀಡುವಂತೆ ಕೋರಿದ್ದಾರೆ.
ಅವನೀತ್ ಕೌರ್ ಹೆಸರು ತಳುಕು ಹಾಕಿಕೊಂಡಿದ್ದು ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಜೊತೆ. ಶುಭ್ಮನ್ ಟೀಂ ಇಂಡಿಯಾದ ಓಪನರ್ ಆಗಿದ್ದಾರೆ. ಅವನೀತ್ ಹಾಗೂ ಶುಭ್ಮನ್ ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಭಾತತದ ಮ್ಯಾಚ್ ವೀಕ್ಷಣೆಗೆ ಅವನೀತ್ ತೆರಳಿದ್ದರು. ಇದರಿಂದ ಈ ವದಂತಿ ಮತ್ತಷ್ಟು ಹೆಚ್ಚಿದೆ.
ಅವನೀತ್ ಕೌರ್ ಅವರು ಇಂಡಿಯಾ vs ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಮ್ಯಾಚ್ ವೀಕ್ಷಿಸಲು ದುಬೈಗೆ ತೆರಳಿದ್ದರು. ಅವರು ಇಂಡಿಯಾ ಪರವಾಗಿ ಚಿಯರ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಅನೇಕರು ‘ಗಿಲ್.. ಗಿಲ್’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಅವರನ್ನು ಅತ್ತಿಗೆ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಇವರು ಕ್ರಿಕೆಟಿಗರನ್ನು ಇಂಪ್ರೆಸ್ ಮಾಡಲು ಸ್ಟೇಡಿಯಂಗೆ ಬರುತ್ತಾರೆ ಎಂದಿದ್ದಾರೆ.
ಶುಭ್ಮನ್ ಗಿಲ್ ಅವರು ಈ ಮೊದಲು ಸಾರಾ ತೆಂಡೂಲ್ಕರ್ ಜೊತೆ ಸುತ್ತಾಡುತ್ತಿದ್ದರು ಎನ್ನಲಾಗಿದೆ. ಕೆಲವು ಸಂದರ್ಭದಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದು ಇದೆ. ಆದರೆ, ಇವರು ಬೇರೆ ಆದರು ಎನ್ನುವ ಸುದ್ದಿ ಸದ್ಯ ಹರಿದಾಡುತ್ತಿದೆ. ಈಗ ಅವರು ಅವನೀತ್ ಜೊತೆ ಸುತ್ತಾಡುತ್ತಿರುವ ಸುದ್ದಿ ಜೋರಾಗಿದೆ.
ಇದನ್ನೂ ಓದಿ: ಚಹಲ್ ಜೊತೆ ಕಾಣಿಸಿಕೊಂಡ ಈ ಸುಂದರಿ ಯಾರು? ಚಿತ್ರರಂಗದ ಜೊತೆ ಇದೆ ನಂಟು
ಸದ್ಯ ಅವನೀತ್ ಆಗಲಿ ಶುಭ್ಮನ್ ಆಗಲಿ ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಅವರನೀತ್ ಸೋಶಿಯಲ್ ಮೀಡಿಯಾ ಕಮೆಂಟ್ಗಳಿಗೂ ಸ್ಪಷ್ಟನೆ ಕೊಡುವ ಕೆಲಸವನ್ನು ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:40 am, Mon, 10 March 25