AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian 2: ‘ಇಂಡಿಯನ್​ 2’ ಚಿತ್ರದಲ್ಲಿ ಯುವರಾಜ್​ ಸಿಂಗ್​ ತಂದೆ ಯೋಗರಾಜ್​ ಸಿಂಗ್​ ನಟನೆ; ಫೋಟೋ ವೈರಲ್​

Kamal Haasan | Yograj Singh: ‘ಇಂಡಿಯನ್​ 2’ ಸಿನಿಮಾದಲ್ಲಿ ಕಮಲ್​ ಹಾಸನ್​ ಅವರಿಗೆ ಡಿಫರೆಂಟ್​ ಗೆಟಪ್ ಇರಲಿದೆ. ಯೋಗರಾಜ್​ ಸಿಂಗ್​ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

Indian 2: ‘ಇಂಡಿಯನ್​ 2’ ಚಿತ್ರದಲ್ಲಿ ಯುವರಾಜ್​ ಸಿಂಗ್​ ತಂದೆ ಯೋಗರಾಜ್​ ಸಿಂಗ್​ ನಟನೆ; ಫೋಟೋ ವೈರಲ್​
ಕಮಲ್ ಹಾಸನ್, ಯೋಗರಾಜ್ ಸಿಂಗ್
TV9 Web
| Updated By: ಮದನ್​ ಕುಮಾರ್​|

Updated on:Nov 02, 2022 | 9:38 AM

Share

ಕ್ರಿಕೆಟ್​ ಮತ್ತು ಸಿನಿಮಾ ನಡುವೆ ಬಲವಾದ ನಂಟು ಇದೆ. ಕ್ರಿಕೆಟ್​ನಲ್ಲಿ ಮಿಂಚಿದವರು ನಂತರ ಸಿನಿಮಾಗಳಲ್ಲಿ ನಟಿಸಿದ ಉದಾಹರಣೆ ಸಾಕಷ್ಟಿದೆ. ಅದೇ ರೀತಿ, ಸಿನಿಮಾ ಮಂದಿ ಕೂಡ ಅನೇಕ ಬಾರಿ ಬ್ಯಾಟ್​ ಹಿಡಿದು ಕ್ರಿಕೆಟ್​ ಮೈದಾನಕ್ಕೆ ಇಳಿದಿದ್ದುಂಟು. ಯುವರಾಜ್​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್​ (Yograj Singh) ಕೂಡ ಮಾಜಿ ಕ್ರಿಕೆಟರ್​. ಅವರಿಗೂ ಬಣ್ಣದ ಲೋಕದ ಜೊತೆ ನಂಟು ಇದೆ. ಕೆಲವು ಬಾಲಿವುಡ್​ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿರುವ ಅವರು ಈಗ ಕಮಲ್​ ಹಾಸನ್​ (Kamal Haasan) ಜೊತೆ ಅಭಿನಯಿಸುವ ಅವಕಾಶ ಪಡೆದಿದ್ದಾರೆ. ಈ ಕುರಿತು ಅವರೇ ಅಪ್​ಡೇಟ್​ ನೀಡಿದ್ದಾರೆ. ಬಹುನಿರೀಕ್ಷಿತ ‘ಇಂಡಿಯನ್​ 2’ (Indian 2) ಚಿತ್ರತಂಡದ ಸೆಟ್​ನಿಂದ ಯೋಗರಾಜ್​ ಸಿಂಗ್ ಅವರು ಫೋಟೋ ಹಂಚಿಕೊಂಡಿದ್ದಾರೆ.

ಕಾರಣಾಂತರಗಳಿಂದ ‘ಇಂಡಿಯನ್​ 2’ ಸಿನಿಮಾದ ಕೆಲಸಗಳು ತಡವಾಗಿವೆ. ‘ವಿಕ್ರಮ್​’ ಚಿತ್ರದ ಯಶಸ್ಸಿನ ಬಳಿಕ ಕಮಲ್​ ಹಾಸನ್​ ಅವರು ಹೊಸ ಹುಮ್ಮಸ್ಸಿನೊಂದಿಗೆ ‘ಇಂಡಿಯನ್​ 2’ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಇದೇ ಚಿತ್ರದಲ್ಲಿ ಯುವರಾಜ್​ ಸಿಂಗ್​ ತಂದೆ ಯೋಗರಾಜ್​ ಸಿಂಗ್​ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
Kamal Haasan: ವಿಶ್ವಾದ್ಯಂತ 200 ಕೋಟಿ ರೂ. ಬಾಚಿಕೊಂಡ ‘ವಿಕ್ರಮ್​’ ಸಿನಿಮಾ; ಗೆಲುವಿನ ಖುಷಿಯಲ್ಲಿ ಕಮಲ್​ ಹಾಸನ್​
Image
‘ವಿಕ್ರಮ್​’ ವಿಲನ್ ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್​; ಇದರ ಬೆಲೆ ಎಷ್ಟು ಲಕ್ಷ? ಗೆಸ್ ಮಾಡಿ
Image
‘ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ’ ಎಂದ ಕಮಲ್​ ಹಾಸನ್​; ಏನದು?
Image
ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ

ನವೆಂಬರ್​ 1ರಂದು ಚೆನ್ನೈನಲ್ಲಿ ‘ಇಂಡಿಯನ್​ 2’ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಕ್ಯಾಮೆರಾ ಎದುರಿಸಲು ಸಜ್ಜಾಗುತ್ತಿರುವ ಯೋಗರಾಜ್​ ಸಿಂಗ್​ ಅವರು ಕನ್ನಡಿ ಎದುರು ಕುಳಿತು ಮೇಕಪ್​ ಮಾಡಿಸಿಕೊಳ್ಳುತ್ತಿರುವ ಸಂದರ್ಭದ ಫೋಟೋ ಪೋಸ್ಟ್​ ಮಾಡಿದ್ದಾರೆ. ‘ಕ್ಯಾಮೆರಾ ಹಿಂದೆ ಕೆಲಸ ಮಾಡುವ ಎಲ್ಲ ದೊಡ್ಡ ಹೀರೋಗಳಿಗೆ ನನ್ನ ಕಡೆಯಿಂದ ಗೌರವ. ನನ್ನನ್ನು ಹೆಚ್ಚು ಸ್ಮಾರ್ಟ್​ ಆಗಿ ಕಾಣುವಂತೆ ಮಾಡಿದ ಮೇಕಪ್​ ಕಲಾವಿದರಿಗೆ ಧನ್ಯವಾದಗಳು. ‘ಇಂಡಿಯನ್​ 2’ ಚಿತ್ರದಲ್ಲಿ ಲೆಜೆಂಡರಿ ನಟ ಕಮಲ್​ ಹಾಸನ್​ ಜೊತೆ ನಟಿಸಲು ಪಂಜಾಬ್ ಸಿಂಹ ರೆಡಿ’ ಎಂದು ಯೋಗರಾಜ್​ ಸಿಂಗ್​ ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ.

ಖ್ಯಾತ ನಿರ್ದೇಶಕ ಶಂಕರ್​ ಅವರು ‘ಇಂಡಿಯನ್​ 2’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಆ ಕಾರಣದಿಂದ ಸಹಜವಾಗಿಯೇ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಡಿಫರೆಂಟ್​ ಗೆಟಪ್​ನಲ್ಲಿ ಕಮಲ್​ ಹಾಸನ್​ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಯೋಗರಾಜ್​ ಸಿಂಗ್​ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

ಈ ಚಿತ್ರದಲ್ಲಿ ಕಮಲ್​ ಹಾಸನ್​ ಜೊತೆ ಕಾಜಲ್​ ಅಗರ್​ವಾಲ್​ ಅವರು ನಟಿಸುತ್ತಿದ್ದಾರೆ. ರಾಕುಲ್​ ಪ್ರೀತ್​ ಸಿಂಗ್​, ಸಿದ್ದಾರ್ಥ್​, ಸಮುದ್ರಖಣಿ, ಬಾಬಿ ಸಿಂಹ, ವೆನ್ನೆಲಾ ಕಿಶೋರ್​ ಮುಂತಾದವರು ಸಹ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್​ ರವಿಚಂದರ್​ ಸಂಗೀತ ಇರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:38 am, Wed, 2 November 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​