ವಿದೇಶದಲ್ಲಿ ಪರ್ಫಾರ್ಮೆನ್ಸ್ ನೀಡಿ ಕೇವಲ 5 ರೂಪಾಯಿ ಸಂಭಾವನೆ ಪಡೆದಿದ್ದ ಜಾಕಿರ್ ಹುಸೇನ್

| Updated By: ರಾಜೇಶ್ ದುಗ್ಗುಮನೆ

Updated on: Dec 16, 2024 | 8:34 AM

ಜಾಕಿರ್ ಹುಸೇನ್ ಅವರು ಹುಟ್ಟಿದ್ದು 1951ರಲ್ಲಿ. ಉಸ್ತಾದ್ ಅಲ್ಲಾ ರಖಾ ಅವರ ಮಗನಾಗಿ ಜಾಕಿರ್ ಜನಿಸಿದರು. 12ನೇ ವಯಸ್ಸಿಗೆ ಅವರು ಸಾರ್ವಜನಿಕವಾಗಿ ಪರ್ಫಾರ್ಮೆನ್ಸ್ ನೀಡಿದರು. ಅವರಿಗೆ ವಿದೇಶದಲ್ಲೂ ಪರ್ಫಾರ್ಮೆನ್ಸ್ ಮಾಡುವ ಅವಕಾಶ ಸಿಕ್ಕಿತ್ತು. ವಿದೇಶದಲ್ಲಿ ಅವರು ನೀಡಿದ ಮೊದಲ ಪರ್ಫಾರ್ಮೆನ್ಸ್​ಗೆ ಸಿಕ್ಕ ಸಂಭಾವನೆ ಕೇವಲ 5 ರೂಪಾಯಿ.

ವಿದೇಶದಲ್ಲಿ ಪರ್ಫಾರ್ಮೆನ್ಸ್ ನೀಡಿ ಕೇವಲ 5 ರೂಪಾಯಿ ಸಂಭಾವನೆ ಪಡೆದಿದ್ದ ಜಾಕಿರ್ ಹುಸೇನ್
ಜಾಕಿರ್ ಹುಸೇನ್
Follow us on

ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ನಿಧನ ಹೊಂದಿದ್ದಾರೆ. ದೂರದ ಅಮೆರಿಕದಲ್ಲಿ ಅವರು ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತ್ತು. ಅವರು ಭಾನುವಾರ (ಡಿಸೆಂಬರ್ 15) ರಾತ್ರಿಯೇ ಕೊನೆಯುಸಿರು ಎಳೆದರು ಎಂದು ಕುಟುಂಬ ಖಚಿತಪಡಿಸಿದೆ. ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸುತ್ತಾ ಇದ್ದಾರೆ. ಅವರ ಸಂಭಾವನೆ ಹಾಗೂ ಅವರ ಆಸ್ತಿ ವಿಚಾರ ಚರ್ಚೆ ಆಗುತ್ತಿದೆ. ಆ ಬಗ್ಗೆ ಇಲ್ಲಿ ನೋಡೋಣ.

ಜಾಕಿರ್ ಹುಸೇನ್ ಅವರು ಹುಟ್ಟಿದ್ದು 1951ರಲ್ಲಿ. ಉಸ್ತಾದ್ ಅಲ್ಲಾ ರಖಾ ಅವರ ಮಗನಾಗಿ ಜಾಕಿರ್ ಜನಿಸಿದರು. 12ನೇ ವಯಸ್ಸಿಗೆ ಅವರು ಸಾರ್ವಜನಿಕವಾಗಿ ಪರ್ಫಾರ್ಮೆನ್ಸ್ ನೀಡಿದರು. ಅವರಿಗೆ ವಿದೇಶದಲ್ಲೂ ಪರ್ಫಾರ್ಮೆನ್ಸ್ ಮಾಡುವ ಅವಕಾಶ ಸಿಕ್ಕಿತ್ತು. ವಿದೇಶದಲ್ಲಿ ಅವರು ನೀಡಿದ ಮೊದಲ ಪರ್ಫಾರ್ಮೆನ್ಸ್​ಗೆ ಸಿಕ್ಕ ಸಂಭಾವನೆ ಕೇವಲ 5 ರೂಪಾಯಿ. ಆದರೆ, ವರ್ಷಗಳು ಕಳೆದಂತೆ ಅವರು ಮಿಂಚಿದರು.

1998ರಲ್ಲಿ ಜಾಕಿರ್ ಹುಸೇಸ್​ ಅವರಿಗೆ ಪದ್ಮಶ್ರೀ ಸಿಕ್ಕರೆ, 2002ರಲ್ಲಿ ಪದ್ಮ ಭೂಷಣ ಅವಾರ್ಡ್ ದೊರೆಯಿತು. ಅವರು ಗ್ರ್ಯಾಮಿ ಅವಾರ್ಡ್ ಕೂಡ ಗೆದ್ದಿದ್ದಾರೆ. ಜಾಕಿರ್ ಹುಸೇನ್ ಅವರು ಪ್ರತಿ ಕಾರ್ಯಕ್ರಮಕ್ಕೆ 5ರಿಂದ 10 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಅವರು ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ದೊಡ್ಡ ಶಿಷ್ಯ ವರ್ಗವನ್ನು ಅವರು ಹೊಂದಿದ್ದಾರೆ.

ಜಾಕಿರ್ ಹುಸೇನ್ ಹಣಕ್ಕಿಂತ ಹೆಚ್ಚಾಗಿ ಕಲೆಗೆ ಬೆಲೆ ಕೊಡುತ್ತಿದ್ದರು. ಅವರ ಒಟ್ಟೂ ಆಸ್ತಿ ​ 8ರಿಂದ 10 ಕೋಟಿ ರೂಪಾಯಿ ಇದೆ ಎಂದು ವರದಿ ಆಗಿದೆ. ಇತ್ತೀಚೆಗೆ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಇದ್ದ ಅನಾರೋಗ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ:  ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ನಿಧನ; ಖಚಿತ ಪಡಿಸಿದ ಕುಟುಂಬ

ಅವರು ತಬಲಾ ವಾದನವನ್ನು ವಿದೇಶಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಅವರು ವಿದೇಶದಲ್ಲೂ ಸಾಕಷ್ಟು ಪರ್ಫಾರ್ಮೆನ್ಸ್​ಗಳನ್ನು ನೀಡಿದ್ದಾರೆ. ಅವರ ನಿಧನಕ್ಕೆ ಇಡೀ ಜಗತ್ತು ಕಂಬನಿ ಮಿಡಿಯುತ್ತಿದೆ. ಅವರು ನಿಧನ ಹೊಂದಿದ ವಿಚಾರವನ್ನು ಆರಂಭದಲ್ಲಿ ಅಲ್ಲಗಳೆಯಲಾಯಿತು. ಅವರ ಕುಟುಂಬದವರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಜಾಕಿರ್ ಹುಸೇನ್ ಬದುಕಿಯೇ ಇದ್ದಾರೆ’ ಎಂದು ಹೇಳಿದ್ದರು. ಆ ಬಳಿಕ ನಿಧನ ವಾರ್ತೆಯನ್ನು ಖಚಿತಪಡಿಸಲಾಗಿದೆ. ಅವರನ್ನು ಕಳೆದುಕೊಂಡ ಸಂಗೀತ ಲೋಕ ಬಡವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.