AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಈ 7 ಔಷಧೀಯ ಸಸ್ಯಗಳು ಇರಲೇಬೇಕು! ತಪ್ಪದೆ ಬೆಳೆಸಿ ರೋಗಗಳಿಂದ ದೂರವಿರಿ

ತೋಟ ಅಥವಾ ಮನೆಯ ಬಾಲ್ಕನಿಯಲ್ಲಿ ನೀವು ಬೆಳೆಸುವ ಕೆಲವು ಸಸ್ಯಗಳು ಸೌಂದರ್ಯವರ್ಧಕವಾಗಿ ಮಾತ್ರವಲ್ಲ, ಅವು ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಮನೆಯಲ್ಲಿ ಬೆಳೆಸಬಹುದಾದ 7 ವಿಧದ ಔಷಧೀಯ ಸಸ್ಯ ಮತ್ತು ಅವುಗಳ ಉಪಯೋಗಗಳ ಬಗ್ಗೆ ಈ ಸ್ಟೋರಿಯಲ್ಲಿ ಹೇಳಲಾಗಿದೆ. ಇದು ಮನೆಯಲ್ಲಿಯೇ ದಿನನಿತ್ಯದ ಶೀತ, ಕೆಮ್ಮು ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಈ 7 ಔಷಧೀಯ ಸಸ್ಯಗಳು ಇರಲೇಬೇಕು! ತಪ್ಪದೆ ಬೆಳೆಸಿ ರೋಗಗಳಿಂದ ದೂರವಿರಿ
7 Medicinal PlantsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 16, 2026 | 8:56 PM

Share

ಪ್ರಕೃತಿ ನೀಡಿರುವ ಅನೇಕ ಸಸ್ಯಗಳಲ್ಲಿ ಔಷಧೀಯ (Medicinal Plants) ಗುಣಗಳು ಅಡಗಿವೆ. ಹಳೆಯ ಕಾಲದಲ್ಲಿ, ಸಣ್ಣಪುಟ್ಟ ಅನಾರೋಗ್ಯಗಳಿಗೆ ಮನೆಯ ಸುತ್ತಮುತ್ತಲಿನ ಸಸ್ಯಗಳನ್ನೇ ಔಷಧಿಯಾಗಿ ಬಳಸಲಾಗುತ್ತಿತ್ತು. ಇಂದಿಗೂ ಕೆಲವು ಸಸ್ಯಗಳನ್ನು ಮನೆಯಲ್ಲೇ ಬೆಳೆಸುವುದರಿಂದ ಆರೋಗ್ಯ ರಕ್ಷಣೆ ಸಾಧ್ಯವಾಗುತ್ತದೆ. ಹಾಗಾದರೆ ಯಾವ ಗಿಡಗಳನ್ನು ಮನೆಯಲ್ಲಿ ಬೆಳೆಸಬೇಕು, ಅದು ಯಾವ ರೋಗಕ್ಕೆ ಮುದ್ದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತುಳಸಿ: ಪ್ರತಿ ಭಾರತೀಯರ ಮನೆಯಲ್ಲೂ ಕಾಣುವ ತುಳಸಿ ಸಸ್ಯವನ್ನು “ಔಷಧಿಗಳ ರಾಣಿ” ಎಂದು ಕರೆಯಲಾಗುತ್ತದೆ. ತುಳಸಿ ಎಲೆಗಳ ರಸ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಇದು ಸಹಕಾರಿಯಾಗಿದೆ.

ಆಲೋವೆರಾ (Aloe Vera): ಅಲೋವೆರಾ ಅಥವಾ ಲೋಳೆಸರ ಚರ್ಮದ ಆರೈಕೆಗೆ ಮಾತ್ರವಲ್ಲ, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಸಣ್ಣಪುಟ್ಟ ಸುಟ್ಟ ಗಾಯಗಳನ್ನು ಗುಣಪಡಿಸಲು ಸಹ ಉಪಯೋಗವಾಗುತ್ತದೆ.

ಪುದೀನಾ: ಸಾಮಾನ್ಯವಾಗಿ ಪುದೀನಾ ಎಲೆಗಳು ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತವೆ. ಜೊತೆಗೆ ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.

ಕರಿಬೇವು: ಅಡುಗೆಗೆ ಬಳಸುವ ಕರಿಬೇವು ಸುವಾಸನೆ ನೀಡುವುದರ ಜೊತೆಗೆ ಕಣ್ಣಿನ ಆರೋಗ್ಯ ಮತ್ತು ಕೂದಲು ಉದುರುವ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಲೆಮನ್ ಗ್ರಾಸ್: ಲೆಮನ್ ಗ್ರಾಸ್ ಚಹಾ ಸೇವಿಸಿದರೆ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ಸಹಕಾರಿ.

ಓಂಕಾಳಿನ ಗಿಡ: ಮಕ್ಕಳಿಗೆ ಹೊಟ್ಟೆನೋವು ಬಂದಾಗ ಓಮದ ಅಥವಾ ಓಂಕಾಳಿನ ಎಲೆಗಳ ರಸ ಅಥವಾ ಪರಿಮಳ ತಕ್ಷಣದ ನೆಮ್ಮದಿ ನೀಡುತ್ತದೆ. ಜೀರ್ಣಕ್ರಿಯೆಗೂ ಇದು ಉತ್ತಮ.

ಅಮೃತಬಳ್ಳಿ (Giloy): ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅಮೃತಬಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಜ್ವರ ಮತ್ತು ಮಧುಮೇಹ ನಿಯಂತ್ರಣಕ್ಕೂ ಇದನ್ನು ಬಳಸಲಾಗುತ್ತದೆ.

ಈ ಸಸ್ಯಗಳನ್ನು ಮನೆಯಲ್ಲೇ ಬೆಳೆಸುವುದರಿಂದ ಶುದ್ಧ ಗಾಳಿಯ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನೂ ಪಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ