Signs You’re Eating Too Much Sugar: ನೀವು ಅತಿಯಾಗಿ ಸಕ್ಕರೆ ಸೇವಿಸುತ್ತಿದ್ದೀರಿ ಎಂಬುದಕ್ಕೆ ಈ 8 ಎಚ್ಚರಿಕೆ ಲಕ್ಷಣಗಳು ಸಾಕ್ಷಿ
ಸಕ್ಕರೆ ಬೆರೆಸಿದ ತಿನಿಸುಗಳು ಮತ್ತು ಪಾನೀಯಗಳು ಸುಲಭವಾಗಿ ಲಭ್ಯವಿದ್ದು ಅತಿಯಾದ ಸಕ್ಕರೆ ಸೇವನೆ ಒಳ್ಳೆಯದಲ್ಲ ಎಂಬುದು ತಿಳಿದಿರಬಹುದು. ಕೆಲವರು ತಮ್ಮ ಆರೋಗ್ಯದ ಮೇಲೆ ಬೀರುವ ಹಾನಿಯನ್ನು ಅರಿತುಕೊಳ್ಳದಿರಬಹುದು. ಇನ್ನು ಹೆಚ್ಚಿನವರಿಗೆ ಅವರು ಹೆಚ್ಚು ಸಕ್ಕರೆ ತಿನ್ನುತ್ತಿದ್ದಾರೆಯೇ ಇಲ್ಲವೇ ಎಂಬುದು ಸಹ ತಿಳಿದಿರುವುದಿಲ್ಲ. ಆದರೆ ನಿಮ್ಮ ದೇಹದಲ್ಲಿ ಕಂಡು ಬರುವ ಕೆಲವು ಲಕ್ಷಣಗಳಿಂದ ನೀವು ಹೆಚ್ಚು ಸಕ್ಕರೆ ಸೇವನೆ ಮಾಡುತ್ತಿದ್ದೀರೋ ಇಲ್ಲವೋ ಎಂಬುದು ತಿಳಿಯುತ್ತದೆ. ಈ ಬಗ್ಗೆ ಪೌಷ್ಟಿಕ ತಜ್ಞೆ ನೇಹಾ ಸಹಾಯ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ನೀವು ಹೆಚ್ಚು ಸಕ್ಕರೆ ಸೇವಿಸುತ್ತಿದ್ದೀರಿ ಎಂದು ಸೂಚಿಸುವ ಕೆಲವು ಲಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಸಿಹಿತಿಂಡಿಗಳನ್ನು ಬೇಡ ಎನ್ನುವುದು ತುಂಬಾ ಕಷ್ಟ, ಕೆಲವೊಮ್ಮೆ ಅಸಾಧ್ಯ ಕೂಡ. ಸಕ್ಕರೆ ಬೆರೆಸಿದ ತಿನಿಸುಗಳು ಮತ್ತು ಪಾನೀಯಗಳು ಸುಲಭವಾಗಿ ಲಭ್ಯವಿದ್ದು ಅತಿಯಾದ ಸಕ್ಕರೆ ಸೇವನೆ ಒಳ್ಳೆಯದಲ್ಲ ಎಂಬುದು ತಿಳಿದಿರಬಹುದು. ಕೆಲವರು ತಮ್ಮ ಆರೋಗ್ಯದ ಮೇಲೆ ಬೀರುವ ಹಾನಿಯನ್ನು ಅರಿತುಕೊಳ್ಳದಿರಬಹುದು. ಇನ್ನು ಹೆಚ್ಚಿನವರಿಗೆ ಅವರು ಹೆಚ್ಚು ಸಕ್ಕರೆ ತಿನ್ನುತ್ತಿದ್ದಾರೆಯೇ ಇಲ್ಲವೇ ಎಂಬುದು ಸಹ ತಿಳಿದಿರುವುದಿಲ್ಲ. ಆದರೆ ನಿಮ್ಮ ದೇಹದಲ್ಲಿ ಕಂಡು ಬರುವ ಕೆಲವು ಲಕ್ಷಣಗಳಿಂದ ನೀವು ಹೆಚ್ಚು ಸಕ್ಕರೆ ಸೇವನೆ ಮಾಡುತ್ತಿದ್ದೀರೋ ಇಲ್ಲವೋ ಎಂಬುದು ತಿಳಿಯುತ್ತದೆ. ಈ ಬಗ್ಗೆ ಪೌಷ್ಟಿಕ ತಜ್ಞೆ ನೇಹಾ ಸಹಾಯ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ನೀವು ಹೆಚ್ಚು ಸಕ್ಕರೆ ಸೇವಿಸುತ್ತಿದ್ದೀರಿ ಎಂದು ಸೂಚಿಸುವ ಕೆಲವು ಲಕ್ಷಣಗಳನ್ನು ಹಂಚಿಕೊಂಡಿದ್ದಾರೆ. ನಿಮ್ಮ ದೇಹ ನೀಡುವ ಎಚ್ಚರಿಕೆ ಸಂದೇಶಗಳನ್ನು ಅರ್ಥಮಾಡಿಕೊಳ್ಳುವುದು ಆರೋಗ್ಯಕರ ಜೀವನಶೈಲಿಯತ್ತ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಮುಖ ಹೆಜ್ಜೆಯಾಗಿದೆ. ನೀವು ಅತಿಯಾಗಿ ಸಕ್ಕರೆ ಸೇವನೆ ಮಾಡುತ್ತಿದ್ದೀರಿ ಎಂದು ಸೂಚಿಸುವ ಎಂಟು ಲಕ್ಷಣಗಳು ಇಲ್ಲಿವೆ.
1. ಶಕ್ತಿಯ ಮಟ್ಟದಲ್ಲಿ ಏರಿಳಿತ
ಅತಿಯಾಗಿ ಸಕ್ಕರೆ ಸೇವನೆಯು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ, ನಂತರ ಹಠಾತ್ ಕುಸಿತ. ಏರಿಳಿತಗಳ ಈ ಚಕ್ರವು ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ಮೇಲೆ ಪ್ರಭಾವ ಬೀರುತ್ತದೆ. ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಕೆ ಮತ್ತು ಇಳಿತಗಳಿಂದ ನಿಮಗೆ ಆಯಾಸ ಹೆಚ್ಚಾಗಬಹುದು. ನಿಮ್ಮ ಶಕ್ತಿಯ ಮಟ್ಟವನ್ನು ಸ್ಥಿರವಾಗಿರಿಸಿಕೊಳ್ಳಲು, ಆಹಾರದಲ್ಲಿ ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ ಸಮೃದ್ಧ ಆಹಾರಗಳನ್ನು ಸೇವನೆ ಮಾಡಿ.
2. ಊದಿಕೊಂಡ ಮುಖ
ನಿಮ್ಮ ಮುಖವು ಸಾಮಾನ್ಯಕ್ಕಿಂತ ಉಬ್ಬಿದಂತೆ ಕಾಣುವುದನ್ನು ನೀವು ಗಮನಿಸಿದರೆ, ಅದು ನಿಮ್ಮ ಆಹಾರದಲ್ಲಿ ಅತಿಯಾದ ಸಕ್ಕರೆ ಸೇವನೆಯ ಸಂಕೇತವಾಗಿರಬಹುದು. ಅತಿಯಾದ ಸಕ್ಕರೆ ಸೇವನೆಯು ಮುಖದ ಊತಕ್ಕೆ ಕಾರಣವಾಗುತ್ತದೆ. ಹೈಡ್ರೇಟ್ ಆಗಿರುವುದು ಈ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸೌತೆಕಾಯಿ ಮತ್ತು ಸೆಲರಿಯಂತಹ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
3. ಮೂಡ್ ಸ್ವಿಂಗ್ಸ್
ಶುಗರ್ ನಿಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ ಇದು ಮಾನಸಿಕವಾಗಿಯೂ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಳಿತಗಳು ಮನಸ್ಥಿತಿಯ ಬದಲಾವಣೆಗಳು, ಕಿರಿಕಿರಿ ಮತ್ತು ಆತಂಕಕ್ಕೆ ಕಾರಣವಾಗಬಹುದು. ರಕ್ತದಲ್ಲಿ ಸಕ್ಕರೆ ಹೆಚ್ಚಾದಾಗ, ಅದು ನಿಮಗೆ ಶಕ್ತಿ ನೀಡಬಹುದು, ಅದರ ಕುಸಿತವು ಖಿನ್ನತೆ ಅಥವಾ ಕಿರಿಕಿರಿಗೆ ಕಾರಣವಾಗಬಹುದು. ನಿಮ್ಮ ಆಹಾರದಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸೇರಿಸುವುದು ಇದೆಲ್ಲಾ ಸಮಸ್ಯೆಗೆ ಪರಿಹಾರವಾಗಿದೆ.
4. ನಿರಂತರ ಉಬ್ಬರ
ನೀವು ನಿರಂತರ ಉಬ್ಬರ ಎದುರಿಸುತ್ತಿದ್ದರೆ, ಅದರಲ್ಲಿಯೂ ಬೆಳಗ್ಗಿನ ಸಮಯದಲ್ಲಿ ಉಬ್ಬರ ಬಂದರೆ ಇದು ನಿಮ್ಮ ಸಕ್ಕರೆ ಸೇವನೆಗೆ ಸಂಬಂಧಿಸಿರಬಹುದು. ಅತಿಯಾದ ಸಕ್ಕರೆ ನಿಮ್ಮ ಜೀರ್ಣ ಕ್ರಿಯೆಯನ್ನು ತಡೆಯುತ್ತದೆ ಇದರಿಂದ ಉಬ್ಬರ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಮೊಸರು ಮತ್ತು ತರಕಾರಿಗಳಂತಹ ಪ್ರೋಬಯಾಟಿಕ್ ಸಮೃದ್ಧ ಆಹಾರಗಳನ್ನು ಸೇರಿಸಿ.
5. ನಿದ್ರೆಯಲ್ಲಿ ತೊಂದರೆ
ಅತಿಯಾದ ಸಕ್ಕರೆ ಸೇವನೆಯು ನಿದ್ರೆಯ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲಿಯೂ ಮಲಗುವ ಸಮಯದಲ್ಲಿ ಸಕ್ಕರೆ ಬೆರೆಸಿದ ಆಹಾರಗಳನ್ನು ಸೇವನೆ ಮಾಡಿದರೆ ನಿಮ್ಮ ನಿದ್ರೆಗೆ ಭಂಗವಾಗುತ್ತದೆ. ಹಾಗಾಗಿ ಸಂಜೆ ಸಕ್ಕರೆ ಸೇವನೆ ಮಾಡುವುದನ್ನು ಮಿತಿಗೊಳಿಸಿ ಮೆಲಟೋನಿನ್ ಹೊಂದಿರುವ ಚೆರ್ರಿಗಳು ಮತ್ತು ಕ್ಯಾಮೊಮೈಲ್ ನಂತಹ ಗಿಡಮೂಲಿಕೆ ಚಹಾಗಳನ್ನು ಕುಡಿಯಿರಿ.
ಇದನ್ನೂ ಓದಿ: ಮಹಿಳೆಯರಿಗೆ ಹೋಲಿಸಿದರೆ ಪುರುಷರು ಬೇಗ ತೂಕ ಕಡಿಮೆ ಮಾಡಿಕೊಳ್ಳುತ್ತಾರೆ ಎಂಬುದು ನಿಜವೇ?
6. ಸಕ್ಕರೆ ತಿನ್ನಬೇಕು ಎಬ ಬಯಕೆ
ಪದೇ ಪದೇ ಸಿಹಿಯಾದ ಆಹಾರಗಳನ್ನು ಸೇವನೆ ಮಾಡಬೇಕು ಎಂದು ಅನಿಸುವುದು. ಅದರಲ್ಲಿಯೂ ಊಟದ ನಂತರ, ಸಿಹಿಯಾದ ಆಹಾರ ಸೇವನೆ ಮಾಡಬೇಕು ಎಂದು ಅನಿಸುವುದು. ಈ ಬಯಕೆಯನ್ನು ನಿಗ್ರಹಿಸಲು, ಕ್ರಮೇಣ ನಿಮ್ಮ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ ಹಣ್ಣು ಮತ್ತು ಬೀಜಗಳಂತಹ ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಿ.
7. ಚರ್ಮದ ಸಮಸ್ಯೆಗಳು
ಅತಿಯಾದ ಸಕ್ಕರೆ ಸೇವನೆಯು ಮೊಡವೆ, ಅಕಾಲಿಕ ಸುಕ್ಕುಗಳು ಮತ್ತು ದದ್ದುಗಳನ್ನು ಹೆಚ್ಚಿಸಬಹುದು. ಅಲ್ಲದೆ ಸಕ್ಕರೆ ಸೇವನೆಯು ಉರಿಯೂತವನ್ನು ಉತ್ತೇಜಿಸುತ್ತದೆ. ಹಾಗಾಗಿ ಚರ್ಮದ ಆರೋಗ್ಯವನ್ನು ಸುಧಾರಿಸಲು, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರ ಸೇವಿಸಿ. ಚರ್ಮದ ಆರೋಗ್ಯವನ್ನು ಹೆಚ್ಚಿಸಿ ಉರಿಯೂತವನ್ನು ಕಡಿಮೆ ಮಾಡಲು ಬೆರ್ರಿಗಳು, ಆವಕಾಡೊ ಮತ್ತು ಸೊಪ್ಪುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
8. ತೂಕ ಹೆಚ್ಚಳ
ಅಧಿಕ ಸಿಹಿಕಾರಕಗಳ ಸೇವನೆಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೆಚ್ಚುವರಿ ಸಕ್ಕರೆಯನ್ನು ದೇಹವು ಕೊಬ್ಬಾಗಿ ಪರಿವರ್ತಿಸುತ್ತದೆ, ಇದು ದೇಹದ ತೂಕ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ. ಹಾಗಾಗಿ ಆಹಾರದಲ್ಲಿ ಆರೋಗ್ಯಕರ ಆಯ್ಕೆಗಳಿರಲಿ. ಹಣ್ಣು, ತರಕಾರಿಗಳು ಮತ್ತು ಧಾನ್ಯಗಳನ್ನು ಆಹಾರಗಳಲ್ಲಿ ಸೇರಿಸಿರಿ. ಖರ್ಜೂರ, ಹಣ್ಣು ಮತ್ತು ಒಣದ್ರಾಕ್ಷಿಗಳು ಹೆಚ್ಚುವರಿ ಪೌಷ್ಠಿಕಾಂಶದೊಂದಿಗೆ ನೈಸರ್ಗಿಕ ಸಿಹಿಯನ್ನು ನೀಡುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ