AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಚಹಾ ಕುಡಿದರೆ ಕೊರೊನಾ ಸೋಂಕು ಬರುವುದಿಲ್ಲ ಎಂಬ ಮಾಹಿತಿ ನಿಜವೇ?

ಕೊವಿಡ್ ತಡೆಗಟ್ಟಲು ಹಲವು ರೀತಿಯ ಪರಿಹಾರೋಪಾಯಗಳನ್ನು ಜನರೇ ಒಬ್ಬರಿಂದ ಒಬ್ಬರಿಗೆ ಹಂಚುತ್ತಾರೆ. ಮತ್ತು ಅದನ್ನು ಬಲವಾಗಿ ನಂಬುವ ಜನರೂ ತುಂಬಾ ಇದ್ದಾರೆ.

Fact Check: ಚಹಾ ಕುಡಿದರೆ ಕೊರೊನಾ ಸೋಂಕು ಬರುವುದಿಲ್ಲ ಎಂಬ ಮಾಹಿತಿ ನಿಜವೇ?
ಚಹಾ
TV9 Web
| Edited By: |

Updated on:Aug 23, 2021 | 12:33 PM

Share

ಕೊರೊನಾ ಸೋಂಕು ಆರಂಭವಾದಾಗಿನಿಂದ ಒಂದಲ್ಲಾ ಒಂದು ರೀತಿಯ ಔಷಧ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುತ್ತದೆ. ಕೊವಿಡ್ ತಡೆಗಟ್ಟಲು ಹಲವು ರೀತಿಯ ಪರಿಹಾರೋಪಾಯಗಳನ್ನು ಜನರೇ ಒಬ್ಬರಿಂದ ಒಬ್ಬರಿಗೆ ಹಂಚುತ್ತಾರೆ. ಮತ್ತು ಅದನ್ನು ಬಲವಾಗಿ ನಂಬುವ ಜನರೂ ತುಂಬಾ ಇದ್ದಾರೆ. ವಾಟ್ಸಾಪ್‌ನಲ್ಲಿ ಹರಿದಾಡುವ ಇಂಥಾ ಎಲ್ಲಾ ಸುದ್ದಿಗಳು ನಿಜವೇ ಎಂದು ಯೋಚಿಸಲು ಬಹಳಷ್ಟು ಜನರು ಮುಂದಾಗುವುದಿಲ್ಲ‌. ಹಾಗೇ ಒಂದು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಯಾವುದೆಂದರೆ, ಚಹಾ ಕುಡಿಯುವುದರಿಂದ ಕೊರೊನಾ ಸೋಂಕನ್ನು ತಡೆಗಟ್ಟಬಹುದು ಎಂಬುದು. ಈ ಸುದ್ದಿ ನಿಜವೇ? ಇಲ್ಲಿದೆ ಮಾಹಿತಿ.

ಚಹಾ ಕುಡಿಯುವುದರಿಂದ ಕೊರೊನಾ ಸೋಂಕು ತಡೆಗಟ್ಟಬಹುದು ಎಂಬ ಸುದ್ದಿಯನ್ನು ಭಾರತ ಸರ್ಕಾರ ಅಲ್ಲಗಳೆದಿದೆ‌. MyGov India ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಚಹಾ ಕುಡಿಯುವುದರಿಂದ ಕೊರೊನಾ ಸೋಂಕು ಬರುವುದಿಲ್ಲ ಎಂಬ ಸುದ್ದಿ ಸುಳ್ಳು. ಅದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದು ತಿಳಿಸಿದೆ. ಚಹಾ ಕುಡಿಯುವುದರಿಂದ ಸೋಂಕು ಬರುವುದಿಲ್ಲ ಅಥವಾ ಬೇಗ ಕಡಿಮೆ ಆಗುತ್ತದೆ ಎಂಬುದಕ್ಕೆ ಯಾವುದೇ ನಿದರ್ಶನ ಇಲ್ಲ ಎಂದು ಹೇಳಿದೆ.

ಅಷ್ಟೇ ಅಲ್ಲದೆ, ಇಂಥಾ ಸುಳ್ಳು ಸುದ್ದಿಗಳಿಂದ ದಾರಿ ತಪ್ಪದಂತೆ ಎಚ್ಚರ ವಹಿಸಲೂ ಸೂಚಿಸಿದೆ. ಅಧಿಕೃತ ಮೂಲಗಳ ಮಾಹಿತಿ ಮಾತ್ರ ನಂಬಬೇಕು. ಹೀಗಿರುವ ಸುದ್ದಿಗಳನ್ನು ಮತ್ತೊಬ್ಬರಿಗೆ ಹಂಚುವಾಗ ಕೂಡ ಜಾಗ್ರತೆಯಾಗಿರುವಂತೆ, ಜವಾಬ್ದಾರಿಯಿಂದ ವರ್ತಿಸುವಂತೆ ಸರ್ಕಾರ ತಿಳಿಸಿದೆ.

ವೈರಾಣುವಿನ ಚಟುವಟಿಕೆ ತಡೆಗಟ್ಟಲು ಗ್ರೀನ್ ಟೀ ಕೆಲಸ ಮಾಡುತ್ತದೆಯೇ? ಎಂಬ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಈ ಬಗ್ಗೆ ಶಾಲಿಮಾರ್ ಭಾಗ್ ಫೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶತಜ್ಞ ಡಾ. ವಿಕಾಸ್ ಮೌರ್ಯ ಮಾಹಿತಿ ನೀಡಿದ್ದಾರೆ. ಆದರೆ ಸದ್ಯ, ಕೊವಿಡ್ ತಡೆಗಟ್ಟಲು ಚಹಾ ಸಹಾಯ ಮಾಡುತ್ತದೆ ಎಂಬ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಇಂಥ ತಪ್ಪು ಮಾಹಿತಿ ಹಂಚಬೇಡಿ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಸೋಂಕು ತಡೆಗಟ್ಟಲು ಇರುವುದು ಸರ್ಕಾರ ತಿಳಿಸಿದ ನಿಯಮಾವಳಿಗಳು ಮಾತ್ರ. ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಸಾಮಾಜಿಕ ಅಂತ ಪಾಲಿಸುವುದು ಈ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ಅವರು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ಕೊರೊನಾ ಸೋಂಕಿಗೂ ಬದುಕುವ ಹಕ್ಕಿದೆ, ಅದು ಕೂಡಾ ಒಂದು ಜೀವಿ’: ಉತ್ತರಾಖಂಡದ ಮಾಜಿ ಸಿಎಂ ರಾವತ್

Kichcha Sudeep: ಕೊರೊನಾದಿಂದ ಸುದೀಪ್​ ಗುಣಮುಖ; ಕಷ್ಟದ ದಿನಗಳನ್ನು ಎದುರಿಸಿ ಬಂದ ಕಿಚ್ಚ ಹೇಳಿದ್ದೇನು?

Published On - 8:32 pm, Fri, 14 May 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ