Ginger Honey Benefits: ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ರಾಮಬಾಣ ಈ ಶುಂಠಿ – ಜೇನುತುಪ್ಪದ ಮಿಠಾಯಿ
ಈ ಋತುವಿನ ಸಮಯದಲ್ಲಿ ಸಾಮಾನ್ಯವಾಗಿ ಅನಾರೋಗ್ಯವನ್ನು ಎದುರಿಸಲು ಅರಿಶಿನದ ಹಾಲು, ಶೀರಾ, ಮಸಾಲೆಯುಕ್ತ ಪಾನೀಯ, ಕಷಾಯಗಳು ಮತ್ತು ಇನ್ನಿತರ ಸಾಕಷ್ಟು ಮನೆ ಮದ್ದುಗಳು ನಿಮಗೆ ಈಗಾಗಲೇ ತಿಳಿದಿರುತ್ತದೆ. ಈ ಕ್ಯಾಂಡಿ ರೆಸಿಪಿಯನ್ನೊಮ್ಮೆ ಪ್ರಯತ್ನಿಸಿ.
ಚಳಿಗಾಲ ಬಂತೆಂದರೆ ಸಾಕು, ಜೊತೆಗೆ ಶೀತ, ಕೆಮ್ಮು ಮತ್ತು ಗಂಟಲು ನೋವು ಮುಂತಾದ ಕಾಯಿಲೆಗಳು ಜೊತೆಯಾಗಿಯೇ ಬರುತ್ತದೆ. ಈ ಚಳಿಗಾಲದಲ್ಲಿ ನೀವೂ ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆಯಲ್ಲಿಯೇ ರುಚಿಕರ ಮಿಠಾಯಿ ಮಾಡಿ ಕಿರಿ ಕಿರಿಯಿಂದ ಮುಕ್ತಿ ಪಡೆಯಿರಿ. ಈ ಋತುವಿನ ಸಮಯದಲ್ಲಿ ಸಾಮಾನ್ಯವಾಗಿ ಅನಾರೋಗ್ಯವನ್ನು ಎದುರಿಸಲು ಅರಿಶಿನದ ಹಾಲು, ಶೀರಾ, ಮಸಾಲೆಯುಕ್ತ ಪಾನೀಯ, ಕಷಾಯಗಳು ಮತ್ತು ಇನ್ನಿತರ ಸಾಕಷ್ಟು ಮನೆ ಮದ್ದುಗಳು ನಿಮಗೆ ಈಗಾಗಲೇ ತಿಳಿದಿರುತ್ತದೆ.
ಶುಂಠಿ ಮತ್ತು ಜೇನುತುಪ್ಪದ ಮಿಠಾಯಿ ಚಳಿಗಾಲದ ಕಾಯಿಲೆಗೆ ಒಂದು ಒಳ್ಳೆಯ ಪರಿಹಾರವಾಗಿದೆ. ಜೇನುತುಪ್ಪ ಮತ್ತು ಶುಂಠಿಯ ಸಂಯೋಜನೆಯು ನಿಮ್ಮನ್ನು ಬೆಚ್ಚಗಾಗಿಸುತ್ತದೆ ಮತ್ತು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಜೊತೆಗೆ, ಈ ಮಿಠಾಯಿ ನಿಮ್ಮ ಎಲ್ಲಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಮಿಠಾಯಿ ಮಾಡುವ ವಿಧಾನ ಇಲ್ಲಿದೆ
ಶುಂಠಿ, ಜೇನುತುಪ್ಪ, ಸಕ್ಕರೆ, ದಾಲ್ಚಿನ್ನಿ ಪುಡಿ ಇವಿಷ್ಟು ಪದಾರ್ಥಗಳನ್ನು ಉಪಯೋಗಿಸಿ ಸುಲಭವಾಗಿ ಮಿಠಾಯಿ ತಯಾರಿಸಬಹುದಾಗಿದೆ. ಪ್ರಾರಂಭದಲ್ಲಿ ಈ ಮಿಠಾಯಿಗಾಗಿ ಒಂದು ಮಧ್ಯಮ ಗಾತ್ರದ ಶುಂಠಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆಯಿರಿ. ನಂತರ ಚಿಕ್ಕ ಚಿಕ್ಕ ಹೋಳುಗಳಾಗಿ ತುಂಡರಿಸಿ ಹಾಗೂ ಮಿಕ್ಸಿ ಅಥವಾ ಗ್ರೈಂಡರ್ನಲ್ಲಿ ಸ್ವಲ್ಪ ನೀರು ಹಾಕಿ ಪುಡಿ ಮಾಡಿ.
ಮುಂದಿನ ಹಂತ ಒಂದು ಪ್ಯಾನ್ ಅಥವಾ ಪಾತ್ರೆ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ. ಪಾತ್ರೆ ಬಿಸಿಯಾದ ನಂತರ ಅದಕ್ಕೆ ಸಕ್ಕರೆ ಹಾಕಿ , ಸಕ್ಕರೆ ಕರಗುವ ತನಕ ಬಲವಾಗಿ ಬೆರೆಸಿ. ನಂತರ ಇದಕ್ಕೆ ಈಗಾಗಲೇ ಪೇಸ್ಟ್ ಮಾಡಿಟ್ಟ ಶುಂಠಿಯನ್ನು ಸೇರಿಸಿ. ನಂತರ 1/4 ಕಪ್ ಜೇನುತುಪ್ಪ ಮತ್ತು 1/2 ಟೀಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ. ನಂತರ ಇದನ್ನು ಮಧ್ಯಮ ಉರಿಯಲ್ಲಿ ಪ್ರೈ ಮಾಡಿ. ಇದು ಕುದಿಯುತ್ತಿದಂತೆ ಇದಕ್ಕೆ ಅರ್ಧ ನಿಂಬೆಯ ರಸವನ್ನು ಹಾಕಿ.
ಅಂತಿಮವಾಗಿ, ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಈಗಾಗಲೇ ತಯಾರಿಸಿದ ಮಿಶ್ರಣವನ್ನು ಸ್ವಲ್ಪ ಸ್ಪಲ್ಪ ಹಾಕಿ. ನಂತರ ಇದರ ಮೇಲೆ ಪುಡಿ ಮಾಡಿದ ಸಕ್ಕರೆಯನ್ನು ಸಿಂಪಡಿಸಿ. ಕೆಲವು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಈಗ ನಿಮ್ಮ ಶುಂಠಿ ಮತ್ತು ಜೇನುತುಪ್ಪದ ರುಚಿಕರ ಮಿಠಾಯಿ ಸಿದ್ಧವಾಗಿದೆ.
ಇದನ್ನು ಓದಿ: ಚಳಿಗಾಲದಲ್ಲೂ ನೀವು ಬೆವರುತ್ತಿದ್ದರೆ ಎಚ್ಚೆತ್ತುಕೊಳ್ಳಿ, ಈ ರೋಗಗಳ ಲಕ್ಷಣಗಳಾಗಿರಬಹುದು
ಇದನ್ನು ಪ್ರಯತ್ನಿಸಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಈ ಚಳಿಗಾಲದಲ್ಲಿ ಶೀತ, ಕೆಮ್ಮು ಮತ್ತು ಗಂಟಲು ನೋವಿನಿಂದ ಮುಕ್ತಿ ಪಡೆಯಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: