Recipes for Kids: ಈ ಚಳಿಗಾಲದಲ್ಲಿ ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ಇಲ್ಲಿದೆ ಸೂಪರ್ ರೆಸಿಪಿಗಳು

ಚಳಿಗಾಲ ಬಂತೆಂದರೆ ಸಾಕು ಜೊತೆಗೆ ಶೀತ ಮತ್ತು ಜ್ವರ, ಕೆಮ್ಮಿನಂತಹ ವೈರಲ್ ಸೋಂಕುಗಳು ಹರಡಲು ಪ್ರಾರಂಭವಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ಇಲ್ಲಿದೆ ಸೂಪರ್ ರೆಸಿಪಿಸ್ಸ್ ಗಳು.

Recipes for Kids: ಈ ಚಳಿಗಾಲದಲ್ಲಿ ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ಇಲ್ಲಿದೆ ಸೂಪರ್ ರೆಸಿಪಿಗಳು
Recipes for KidsImage Credit source: Super Mama Arabia
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 17, 2022 | 4:26 PM

ಚಳಿಗಾಲದ ತಣ್ಣನೆಯ ವಾತಾವರಣವನ್ನು ಮಕ್ಕಳಂತೂ ಆನಂದಿಸುವುದು ಸಹಜ. ಜೊತೆಗೆ ಈ ಸಮಯದಲ್ಲಿ ಬಾಯಾರಿಕೆಗಳು ಕಡಿಮೆ ಆಗುವುದರಿಂದ ನೀರು ಕುಡಿಯುವುದನ್ನೇ ಮರೆತು ಬಿಡುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಆಗಾಗ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿ. ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರವನ್ನು ಮಕ್ಕಳು ಇಷ್ಟಪಟ್ಟು ತಿನ್ನುವಂತೆ ಮಾಡುವುದು ಸಾಹಸದ ಕೆಲಸವಾಗಿದೆ. ಆದ್ದರಿಂದ ಈಕೆಳಗಿನ ಪಾಕ ವಿಧಾನವನ್ನು ನಿಮ್ಮ ಮನೆಯಲ್ಲಿ ಪ್ರಯತ್ನಿಸಿ. ಇದು ರುಚಿಯ ಜೊತೆಗೆ ಆರೋಗ್ಯವನ್ನು ಕಾಪಾಡಲು ಸಹಾಯಮಾಡುತ್ತದೆ.

ಚಳಿಗಾಲ ಬಂತೆಂದರೆ ಸಾಕು ಜೊತೆಗೆ ಶೀತ ಮತ್ತು ಜ್ವರ, ಕೆಮ್ಮಿನಂತಹ ವೈರಲ್ ಸೋಂಕುಗಳು ಹರಡಲು ಪ್ರಾರಂಭವಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ಇಲ್ಲಿದೆ ಸೂಪರ್ ರೆಸಿಪಿಗಳು. ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ.

ಮಕ್ಕಳಿಗಾಗಿ ಐದು ಆರೋಗ್ಯಕರ ಚಳಿಗಾಲದ ಊಟದ ಪಾಕವಿಧಾನಗಳು ಇಲ್ಲಿವೆ. ಪಾಲಕ್ ರೋಲ್: ಗೋಧಿ ಹಿಟ್ಟು, ಪಾಲಕ್, ಎಣ್ಣೆ, ಉಪ್ಪು ಮತ್ತು ನೀರನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಬೆರೆಸಿ. ಸ್ಟಫಿಂಗ್‌ಗಾಗಿ, ತುರಿದ ಪನೀರ್, ಕ್ಯಾರೆಟ್, ಶುಂಠಿ-ಹಸಿರು ಮೆಣಸಿನಕಾಯಿ ಪೇಸ್ಟ್, ಕತ್ತರಿಸಿದ ಕೊತ್ತಂಬರಿ ಮತ್ತು ಉಪ್ಪನ್ನು ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿ. ನಂತರ ಈಗಾಗಲೇ ಗೋಧಿ ಹಿಟ್ಟು, ಪಾಲಕ್ ಮುಂತಾದವುಗಳನ್ನು ಬೆರೆಸಿ ಮಾಡಿಟ್ಟ ಹಿಟ್ಟಿನ ಒಳಗೆ ಸ್ಟಫಿಂಗ್‌ ಅನ್ನು ಸೇರಿಸಿ, ಮತ್ತು ಇದನ್ನು ರೋಲ್ ಮಾಡಿ.

ನಂತರ ಇದರ ಮೇಲೆ ಎಣ್ಣೆಯನ್ನು ಸವರಿ ರೋಲ್ ಸ್ವಲ್ಪ ಬಣ್ಣ ಬದಲಾಗುವ ವರೆಗೆ ಬೇಯಿಸಿ. ಇದನ್ನು ಮೊಸರಿನೊಂದಿಗೆ ಬಿಸಿಯಾಗಿ ನಿಮ್ಮ ಮಕ್ಕಳಿಗೆ ಕೊಡಿ.

ಬೇಬಿ ಕಾರ್ನ್ ಮತ್ತು ಕ್ಯಾಪ್ಸಿಕಂ ಪಲಾವ್: ಎಣ್ಣೆ ಸವರಿದ ಬಾಣಲೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದು ನಿಮಿಷ ಹುರಿಯಿರಿ. ಕತ್ತರಿಸಿದ ಬೇಬಿ ಕಾರ್ನ್ ಮತ್ತು ಕತ್ತರಿಸಿದ ಹಳದಿ, ಹಸಿರು ಮತ್ತು ಕೆಂಪು ಕ್ಯಾಪ್ಸಿಕಂ ಸೇರಿಸಿ ಮತ್ತು ಮೂರು-ನಾಲ್ಕು ನಿಮಿಷಗಳ ಕಾಲ ಹುರಿಯಿರಿ. ಟೊಮೆಟೊ ಕೆಚಪ್ ಮತ್ತು ಸಕ್ಕರೆ ಅಥವಾ ಜೇನು ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಬೇಯಿಸಿದ ಬಾಸ್ಮತಿ ಅಕ್ಕಿ, ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಎರಡು ನಿಮಿಷ ಬೇಯಿಸಿ ಮತ್ತು ಬಿಸಿಯಾಗಿ ಬಡಿಸಿ.

ವೆಜ್‌ ಸಾಂಡ್‌ವಿಚ್: ಇಂದಿನ ಮಕ್ಕಳು ದೋಸೆ, ಇಡ್ಲಿಗಳಿಗಿಂತ ಹೆಚ್ಚಾಗಿ ಸಾಂಡ್‌ವಿಚ್, ಬರ್ಗರ್ ಗಳನ್ನು ಇಷ್ಟ ಪಡುವುದ್ದರಿಂದ ಅವರಿಗೆ ಮನೆಯಲ್ಲೇ ಆರೋಗ್ಯಕರ ವೆಜ್‌ ಸಾಂಡ್‌ವಿಚ್ ತಯಾರಿಸಿ ಕೊಡಿ. ಎಣ್ಣೆ ಸವರಿದ ಬಾಣಲೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಎರಡು ನಿಮಿಷಗಳ ಕಾಲ ಹುರಿಯಿರಿ. ಕತ್ತರಿಸಿದ ಕ್ಯಾಪ್ಸಿಕಂ, ಕೋಸುಗಡ್ಡೆ ಮತ್ತು ಕ್ಯಾರೆಟ್ ಸೇರಿಸಿ ಮತ್ತು ಚೆನ್ನಾಗಿ ಹುರಿಯಿರಿ. ಕತ್ತರಿಸಿದ ಟೊಮ್ಯಾಟೊ ಮತ್ತು ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮತ್ತು ಎರಡು-ಮೂರು ನಿಮಿಷ ಬೇಯಿಸಿ. ಬೇಯಿಸಿದ ಜೋಳದ ಕಾಳುಗಳು, ಟೊಮೆಟೊ ಕೆಚಪ್ ಮತ್ತು ಉಪ್ಪು ಸೇರಿಸಿ ಮತ್ತು ಮಿಶ್ರಣ ಮಾಡಿ. ಇದನ್ನು ಎರಡು ನಿಮಿಷ ಬೇಯಿಸಿ. ನಂತರ ಇದನ್ನು ಬ್ರೆಡ್ ನಲ್ಲಿ ಇಟ್ಟು ಆಕರ್ಷಕವಾಗಿ ಕಾಣುವಂತೆ ಮಾಡಿ, ಮಕ್ಕಳಿಗೆ ಕೊಡಿ.

ಹಸಿರು ಬಟಾಣಿಯೊಂದಿಗಿನ ಪನ್ನೀರ್ ಬರ್ಗರ್: ಪುಡಿಮಾಡಿದ ಪನೀರ್, ಬೇಯಿಸಿ ಚೆನ್ನಾಗಿ ಹಿಸುಕಿದ ಹಸಿರು ಬಟಾಣಿ, ಕೊತ್ತಂಬರಿ ಸೊಪ್ಪು, ಬ್ರೆಡ್ ತುಂಡುಗಳು, ಉಪ್ಪು ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್ ಎಲ್ಲವನ್ನು ಒಟ್ಟಿಗೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಚಪ್ಪಟೆ(ಕಟ್ಲೆಟ್) ಆಕಾರ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿ.

ಇದನ್ನು ಓದಿ: ಚಹಾದ ಬಳಿಕ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?

ಗೋಧಿ ಹಿಟ್ಟಿನ ಬರ್ಗರ್ ಬನ್‌ಗಳನ್ನು ತೆಗೆದುಕೊಂಡು ಅಡ್ಡಲಾಗಿ ಎರಡು ಭಾಗಗಳಾಗಿ ಕತ್ತರಿಸಿ. ಅದಕ್ಕೆ ಬೆಣ್ಣೆಯನ್ನು ಸವರಿ ಮತ್ತು ಸ್ವಲ್ಪ ಹೊತ್ತು ಫ್ರೈ ಮಾಡಿ. ನಂತರ ಇದಕ್ಕೆ ಮೇಯನೇಸ್ ಅನ್ನು ಸೇರಿಸಿ, ಮೇಯನೇಸ್ ಅನ್ನು ಮನೆಯಲ್ಲೇ ತಯಾರಿಸಬಹುದು, ಮಾರುಕಟ್ಟೆಯಲ್ಲೂ ಲಭ್ಯವಿದೆ.

ನಂತರ ಈ ಬರ್ಗರ್ ಒಳಗೆ ಈಗಾಗಲೇ ಮಾಡಿಟ್ಟ ಕಟ್ಲೆಟ್, ಟೊಮೆಟೊ ಮತ್ತು ಈರುಳ್ಳಿ ಚೂರುಗಳನ್ನು ಸೇರಿಸಿ, ಉಪ್ಪು ಮತ್ತು ಮೆಣಸು ಸಿಂಪಡಿಸಿ. ಆಕರ್ಷಕವಾಗಿ ಕಾಣುವಂತೆ ಮಾಡಿ ನಿಮ್ಮ ಮಕ್ಕಳಿಗೆ ನೀಡಿ.

ಜೀವನ ಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 3:21 pm, Thu, 17 November 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ