Dates Health Benefits: ಮಳೆಗಾಲದ ಸಮಯದಲ್ಲಿ ಆರೋಗ್ಯ ಸುಧಾರಣೆಗೆ ಖರ್ಜೂರ ಒಳ್ಳೆಯದು- ತಜ್ಞರ ಸಲಹೆ
ಖರ್ಜೂರ ಸೇವನೆಯಿಂದ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವದರ ಜತೆಗೆ ಒಳ್ಳೆಯ ಅರೋಗ್ಯವನ್ನೂ ಪಡೆಯಬಹುದಾಗಿದೆ. ಈ ಕುರಿತಂತೆ ತಜ್ಞರು ಸಲಹೆ ನೀಡಿದ್ದಾರೆ.
ಖರ್ಜೂರ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಆಹಾರ ಪದಾರ್ಥ. ಡ್ರೈಫ್ರೂಟ್ಸ್ಗಳಲ್ಲಿ ಖರ್ಜೂರವನ್ನು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟಪಟ್ಟು ಸೇವಿಸುತ್ತಾರೆ. ನೀವು ಡಯಟ್ ಮಾಡುತ್ತಿದ್ದರೆ, ಸೇಬು ಹಣ್ಣು, ಬಾಳೆಹಣ್ಣು ತಿಂದು ಬೇಸತ್ತಿದ್ದರೆ ಖರ್ಜೂರವನ್ನು ಸೇವಿಸಬಹುದು. ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವದರ ಜತೆಗೆ ಒಳ್ಳೆಯ ಆರೋಗ್ಯವನ್ನೂ ಪಡೆಯಬಹುದಾಗಿದೆ. ಈ ಕುರಿತಂತೆ ತಜ್ಞರು ಸಲಹೆ ನೀಡಿದ್ದಾರೆ.
ರಕ್ತದೊತ್ತಡ ಸಮಸ್ಯೆಯಿಂದ ನಿಯಂತ್ರಣ ಪಡೆಯಲು ಖರ್ಜೂರ ಒಳ್ಳೆಯ ಆಹಾರ ಪದಾರ್ಥ. ರಾತ್ರಿಯಲ್ಲಿ ನಿದ್ರೆಯ ಸಮಸ್ಯೆ ಕಾಡುತ್ತಿದ್ದರೆ ಖರ್ಜೂರವನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಈ ಕುರಿತಂತೆ ನ್ಯೂಟ್ರಿಷಿಯನಿಸ್ಟ್ ರುಜುತಾ ದಿವೇಕರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಾನ್ಸೂನ್ ಸಮಯದಲ್ಲಿ ಒಳ್ಳೆಯ ಆಹಾರ ಎಂಬುದಾಗಿ ತಿಳಿಸಿದ್ದಾರೆ.
View this post on Instagram
ತಜ್ಞರ ಪ್ರಕಾರ ಖರ್ಜೂರ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಸುಧಾರಣೆಗಳಿವೆ ಎಂಬುದನ್ನು ತಿಳಿಯೋಣ. *ರಕ್ತದಲ್ಲಿ ಹಿಮೋಗ್ಲೋಬಿನ್ ನಿಯಂತ್ರಣಕ್ಕೆ ಸಹಯಕವಾಗುತ್ತದೆ. ಜತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದರೆ ಝರ್ಜೂರ ಸೇವನೆಯಿಂದ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು
*ಒಳ್ಳೆಯ ನಿದ್ರೆ ಪಡೆಯಲು ಖರ್ಜೂರ ಸೇವನೆ ಸಹಾಯಕವಾಗಿದೆ. ಒಳ್ಳೆಯ ಹಾರ್ಮೋನುಗಳ ಉತ್ಪಾದನೆಗೆ ಖರ್ಜೂರ ಸೇವನೆ ಸಹಕರಿಸುವುದರಿಂದ ರಾತ್ರಿಯ ಹೊತ್ತು ಒಳ್ಳೆಯ ನಿದ್ರೆ ಪಡೆಯಬಹುದು
*ಸೋಂಕಿನ ವಿರುದ್ಧ ಹೋರಾಡುವುದಲ್ಲದೆ ಕೆಲವು ಅಲರ್ಜಿ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಖರ್ಜೂರ ಸೇವನೆ ಒಳ್ಳೆಯದು
*ನಿಮ್ಮ ದೇಹದಲ್ಲಿ ಸದೃಢತೆಯನ್ನು ಕಾಪಾಡುವುದರ ಜತೆಗೆ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ನಿಮ್ಮ ದೇಹದ ತೂಕವನ್ನು ನಿಯಂತ್ರಣಕ್ಕೆ ತರಲು ಖರ್ಜೂರ ಸೇವನೆ ಉತ್ತಮ ಆಹಾರ
*ಎಸಿಡಿಸಿ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುತ್ತದೆ ಮತ್ತು ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಖರ್ಜೂರ ಸೇವನೆ ಉತ್ತಮ
ಖರ್ಜೂರ ಸೇವನೆಯಿಂದ ಬಹಳಷ್ಟು ಆರೋಗ್ಯ ಸುಧಾರಣೆಗಳಿವೆ. ಆದರೆ ಅತಿಯಾಗಿ ಸೇವಿಸುವುದು ಅನಾರೋಗ್ಯವನ್ನು ತರಬಹುದು. ಜತೆಗೆ ಆಹಾರ ಕ್ರಮ ಕೂಡಾ ಆರೋಗ್ಯ ಸುಧಾರಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಯಾವ ಕ್ರಮದಲ್ಲಿ ಖರ್ಜೂರ ಸೇವಿಸಬೇಕು ಎಂಬುದಕ್ಕೆ ತಜ್ಞರು ಕೆಲವು ಟಿಪ್ಸ್ಗಳನ್ನು ನೀಡಿದ್ದಾರೆ.
*ಬೆಳಗ್ಗೆ ಎದ್ದು ಮುಖ ತೊಳೆದ ತಕ್ಷಣ ಸೇವಿಸುವುದು *ಕಡಿಮೆ ಹಿಮೊಗ್ಲೋಬಿನ್ ಹೊಂದಿರುವವರು ಮಧ್ಯಾಹ್ನದ ಊಟದ ಬಳಿಕ ಸೇವಿಸುವುದು *ಮಕ್ಕಳಿಗೆ ಅಥವಾ ಪ್ರೌಢಾವಸ್ಥೆಯಲ್ಲಿರುವ ಮಕ್ಕಳಿಗೆ ಮಧ್ಯದ ಸಮಯದಲ್ಲಿ ಖರ್ಜೂರ ಸೇವಿಸುವುದು ಉತ್ತಮ
ಒಳ್ಳೆಯ ಗುಣಮಟ್ಟದ ಖರ್ಜೂರವನ್ನು ಸೇವಿಸಬೇಕು ಎಂದು ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ ಮನೆಯ ಸುತ್ತಮುತ್ತಲು ಬೆಳೆದ ಆಹಾರ ಪದಾರ್ಥಗಳಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
Health Tips: ಮಕ್ಕಳಿಂದ ವಯಸ್ಕರವರೆಗೂ ಇಷ್ಟಪಡುವ ಖರ್ಜೂರದ ಪ್ರಯೋಜನಗಳೇನು?
Health Tips: ಆಲ್ಕೋಹಾಲ್ ಜತೆಗೆ ಈ 5 ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ