ನೈಸರ್ಗಿಕವಾಗಿ ಸಿಗುವ ಸಿಹಿ ಅಂಶ ಹೊಂದಿರುವ ಅವರೆಕಾಳು ಅಗತ್ಯವಾದ ವಿಟಮಿನ್ ಮತ್ತು ವಿಟಮಿನ್ ಕೆ, ಸಿ ಮತ್ತು ಮ್ಯಾಂಗನೀಸ್, ಫೈಬರ್ಗಳಿಂದ ಕೂಡಿದೆ. ಅತಿಯಾಗಿ ನಾರಿನಾಂಶ ಹೊಂದಿರುವ ಅವರೆಕಾಳು ಪೌಷ್ಟಿಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಅವರೆಕಾಳು ಪಲ್ಯದ ಜತೆಗೆ ಸಾಂಬಾರು ಪದಾರ್ಥಗಳಲ್ಲಿ ಬಳಸಬಹುದು. ವಿಧದ ಪದಾರ್ಥಗಳನ್ನು ಮಾಡಿ ರುಚಿಕರವಾದ ಆಹಾರ ಸೇವಿಸುವುದರ ಜತೆಗೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.
ಜೀರ್ಣಕ್ರಿಯೆ
ಅವರೆಕಾಳು ಸೇವನೆಯು ನಿಮ್ಮ ಜೀರ್ಣಕ್ರಿಯೆಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಕರುಳು ಆರೋಗ್ಯವೂ ಸುಧಾರಿಸುತ್ತದೆ. ಸಲಾಡ್, ಕರಿಗಳ ತಯಾರಿಕೆಯಲ್ಲಿ ಇವುಗಳಲ್ಲಿ ಬಳಸಬಹುದು. ಇದರಿಂದ ಆರೋಗ್ಯ ಪ್ರಯೋಜನ ಸುಧಾರಿಸುತ್ತದೆ.
ಕಬ್ಬಿಣದ ಉತ್ತಮ ಮೂಲ
ಅವರೆಕಾಳು ಸೇವನೆ ಕಬ್ಬಿಣದ ಉತ್ತಮ ಮೂಲವಾಗಿದೆ. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಪ್ರಮುಖ ಕಾರಣವಾಗಬಹುದು. ನೀವು ಸಾಕಷ್ಟು ಕಬ್ಬಿಣಾಂಶವನ್ನು ಹೊಂದಿಲ್ಲದಿದ್ದರೆ ನಿಮ್ಮ ದೇಹವು ಸಾಕಷ್ಟು ಆರೋಗ್ಯಕರ ಆಮ್ಲಜನಕ ಸಾಗಿಸುವ ಕೆಂಪು ರಕ್ತಕಣಗಳನ್ನು ಉತ್ಪಾದಿಸುವುದಿಲ್ಲ. ಇದರಿಂದಾಗಿ ಹಿಮೋಗ್ಲೋಬಿನ್ ಕೊರತೆ ಉಂಟಾಗುತ್ತದೆ. ಜತೆಗೆ ನಿಮ್ಮ ದೇಹಕ್ಕೆ ಶಕ್ತಿ ತುಂಬುತ್ತದೆ.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಅವರೆಕಾಳು ಸೇವನೆ ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ಲುಟೀನ್ ವೃದ್ಧಾಪ್ಯದಲ್ಲಿ ಕಣ್ಣಿನ ಪೊರೆ ಮತ್ತು ದೃಷ್ಟಿ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅವರೆಕಾಳು ಸೇವನೆಯಿಂದ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಹೃದಯಕ್ಕೆ ಒಳ್ಳೆಯದು
ಅವರೆಕಾಳಿನಲ್ಲಿರುವ ಕರಗದ ಫೈಬರ್ ಅಂಶವು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ.
ತೂಕನಷ್ಟ
ಬೀನ್ಸ್, ಜೋಳ ಈ ರೀತಿಯ ಹೆಚ್ಚು ಭಾರವಾದ ದ್ವಿದಳ ಧಾನ್ಯಗಳಿಗೆ ಹೋಲಿಸಿದರೆ ಬಟಾಣಿ ಕಡಿಮೆ ಕೊಬ್ಬನ್ನು ಹೊಂದಿದೆ. ಜತೆಗೆ ಕ್ಯಾಲೊರಿಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಫೈಬರ್ ಅಂಶವು ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ.
ಚರ್ಮಕ್ಕೆ ಒಳ್ಳೆಯದು
ಅವರೆಕಾಳಿನಲ್ಲಿರುವ ವಿಟಮಿನ್ ಸಿ ಅಂಶದ ಅತ್ಯುತ್ತಮ ಮೂಲವಾಗಿದೆ. ಇದು ಕಾಲಜನ್ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಕಾಲಜನ್ ಚರ್ಮದ ಆರೋಗ್ಯವನ್ನು ಸುಧಾರಿಸುವುದರ ಜತೆಗೆ ಚರ್ಮ ಹೊಳೆಯುವಂತೆ ಮಾಡಲು ಸಹಾಯಕವಾಗಿದೆ.
ಇದನ್ನೂ ಓದಿ:
Health Tips: ಗರ್ಭಿಣಿಯರು ಆರೋಗ್ಯ ಸುಧಾರಣೆಗೆ ಸೇವಿಸಬೇಕಾದ ಪೋಷಕಾಂಶಗಳು
Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ
(Health benefits of peas check in Kannada)
Published On - 1:07 pm, Wed, 15 September 21