ಕೂದಲು ತುಂಡಾಗದಂತೆ ತಡೆಯಲು ಸರಳ ಮಾರ್ಗಗಳು ಇಲ್ಲಿವೆ
ಮಾನಸಿಕ ಒತ್ತಡ ಕೂದಲು ಒಡೆಯುವಿಕೆಗೆ ಕಾರಣವಾಗಬಹುದು. ಹೀಗಾಗಿ, ಮಾನಸಿಕ ನೆಮ್ಮದಿ ಕೂಡ ಬಹಳ ಮುಖ್ಯ. ಕೂದಲು ಒಡೆಯುವಿಕೆಯನ್ನು ತಡೆಗಟ್ಟಲು ನೀವು ಅಗಲವಾದ ಹಲ್ಲಿನ ಬಾಚಣಿಗೆಗಳನ್ನು ಬಳಸಿರಿ. ನಿಮ್ಮ ಕೂದಲು ಒಣಗಿದಾಗ ಮಾತ್ರ ನೀವು ಬಾಚಿಕೊಳ್ಳಬೇಕು. ಹಸಿ ಕೂದಲನ್ನು ಬಾಚಿದರೆ ಕೂದಲು ತುಂಡಾಗುತ್ತದೆ.

ಒತ್ತಡ, ಬಿಸಿಲು, ನೀರು ಹೀಗೆ ನಾನಾ ಕಾರಣಗಳಿಂದ ಕೂದಲು ತುಂಡಾಗುತ್ತದೆ. ನಮ್ಮ ಜೀವನಶೈಲಿ, ಆಹಾರಶೈಲಿಯಿಂದಲೂ ಕೂದಲ ತುದಿ ಒಡೆಯುತ್ತದೆ. ಹಾಗಾದರೆ, ಕೂದಲಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಯಾವ ರೀತಿಯ ಎಚ್ಚರಿಕೆ ವಹಿಸಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕೂದಲು ಒಡೆಯುವ 12 ಸಾಮಾನ್ಯ ಕಾರಣಗಳು:
1. ಆಹಾರ ಪದ್ಧತಿ: ನಿಮ್ಮ ದೈನಂದಿನ ಆಹಾರದಲ್ಲಿ ನೀವು ಸಾಕಷ್ಟು ಸತು, ಕಬ್ಬಿಣ ಮತ್ತು ಫೋಲಿಕ್ ಆಮ್ಲವನ್ನು ಸೇರಿಸಿಕೊಳ್ಳಿ. ಸಾಕಷ್ಟು ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಸೇವಿಸುವುದರಿಂದಲೂ ನಿಮ್ಮ ಕೂದಲನ್ನು ಹಾನಿಯಾಗದಂತೆ ಇರಿಸಬಹುದು.
2. ಒತ್ತಡ: ಮಾನಸಿಕ ಒತ್ತಡ ಕೂದಲು ಒಡೆಯುವಿಕೆಗೆ ಕಾರಣವಾಗಬಹುದು. ಹೀಗಾಗಿ, ಮಾನಸಿಕ ನೆಮ್ಮದಿ ಕೂಡ ಬಹಳ ಮುಖ್ಯ.
ಇದನ್ನೂ ಓದಿ: ನೆಗಡಿ, ಹೃದ್ರೋಗ, ಕ್ಯಾನ್ಸರ್ಗೂ ರಾಮಬಾಣ ಕ್ಯಾಮೊಮೈಲ್ ಟೀ
3. ಶುಷ್ಕತೆ: ಶುಷ್ಕ ಹವಾಮಾನ, ಕಡಿಮೆ ತೇವಾಂಶ ಮತ್ತು ಹೆಚ್ಚಿನ ಶಾಖ ಸೇರಿದಂತೆ ವಿವಿಧ ಅಂಶಗಳಿಂದಲೂ ಕೂದಲು ತುಂಡಾಗಬಹುದು. ನಿಮ್ಮ ಕೂದಲನ್ನು ತೊಳೆಯುವಾಗ ಬೆಚ್ಚಗಿನ ಮತ್ತು ತಣ್ಣನೆಯ ನೀರನ್ನು ಬಳಸಲು ಮರೆಯದಿರಿ. ಅತಿಯಾದ ಬಿಸಿ ನೀರಿನಿಂದ ಕೂದಲನ್ನು ತೊಳೆಯಬೇಡಿ. ಶಾಂಪೂವನ್ನು ನಿಮ್ಮ ನೆತ್ತಿಗೆ ಮಾತ್ರ ಹಾಕಿ. ಇಡೀ ಕೂದಲನ್ನು ಶಾಂಪೂವಿನಿಂದ ಉಜ್ಜಬೇಡಿ. ಇದರಿಂದ ಕೂದಲು ತುಂಡಾಗುತ್ತದೆ.
4. ಕೂದಲನ್ನು ಬಿಸಿ ಮಾಡಬೇಡಿ: ನಿಮ್ಮ ಹೇರ್ ಡ್ರೈಯರ್, ಫ್ಲಾಟ್ ಐರನ್ ಅಥವಾ ಕರ್ಲಿಂಗ್ ಉಪಕರಣ ಬಳಸಿದಾಗ ಕೂದಲು ಬಿಸಿಯಾಗಿ ತುಂಡಾಗಬಹುದು.
5. ಅತಿಯಾಗಿ ತೊಳೆಯುವುದು: ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನಿಮ್ಮ ನೆತ್ತಿಯಲ್ಲಿ ಹೆಚ್ಚುವರಿ ಮೇದೋಗ್ರಂಥಿಗಳ (ನೈಸರ್ಗಿಕ ಎಣ್ಣೆ) ಉತ್ಪಾದನೆಯಾಗುವ ಸಾಧ್ಯತೆಯಿದೆ. ಇದರಿಂದ ನೀವು ಅಗತ್ಯಕ್ಕಿಂತ ಹೆಚ್ಚಾಗಿ ನಿಮ್ಮ ಕೂದಲನ್ನು ತೊಳೆಯಬೇಕಾಗುತ್ತದೆ. ನೀವು ಎಣ್ಣೆಯುಕ್ತ ಕೂದಲನ್ನು ಹೊಂದಿದ್ದರೆ ದಿನವೂ ಕೂದಲನ್ನು ತೊಳೆಯುವುದು ಉತ್ತಮವಾಗಿದೆ.
6. ರಭಸವಾಗಿ ಕೂದಲನ್ನು ಟವೆಲ್ನಿಂದ ಉಜ್ಜುವುದು: ನೀವು ಸ್ನಾನ ಮಾಡಿ ಹೊರಬಂದಾಗ ನಿಮ್ಮ ಚರ್ಮ ಮತ್ತು ಕೂದಲಿನ ಮೇಲೆ ಟವೆಲ್ ಅನ್ನು ಉಜ್ಜುವುದು ಸಾಮಾನ್ಯ. ಆದರೆ, ಇದರಿಂದ ನಿಮ್ಮ ಕೂದಲು ದುರ್ಬಲವಾಗುತ್ತದೆ. ಹೀಗಾಗಿ, ಕೂದಲನ್ನು ಉಜ್ಜಿ ಒರೆಸಿಕೊಳ್ಳುವ ಬದಲು ಕೂದಲಿನ ಮೇಲೆ ಕಾಟನ್ ಟವೆಲ್ ಅನ್ನು ತಲೆಗೆ ಸುತ್ತಿಕೊಳ್ಳಿ.
7. ಅಗಲ ಹಲ್ಲಿನ ಬಾಚಣಿಗೆ ಬಳಸಿ: ಕೂದಲು ಒಡೆಯುವಿಕೆಯನ್ನು ತಡೆಗಟ್ಟಲು ನೀವು ಅಗಲವಾದ ಹಲ್ಲಿನ ಬಾಚಣಿಗೆಗಳನ್ನು ಬಳಸಿರಿ. ನಿಮ್ಮ ಕೂದಲು ಒಣಗಿದಾಗ ಮಾತ್ರ ನೀವು ಬಾಚಿಕೊಳ್ಳಬೇಕು. ಹಸಿ ಕೂದಲನ್ನು ಬಾಚಿದರೆ ಕೂದಲು ತುಂಡಾಗುತ್ತದೆ.
ಇದನ್ನೂ ಓದಿ: ಆಫೀಸ್ ಕೆಲಸದ ವೇಳೆ ನಿಮ್ಮ ಡಯೆಟ್ ಹೇಗಿರಬೇಕು?
ಆರೋಗ್ಯಕರ ಕೂದಲಿಗೆ ಸಲಹೆಗಳು:
– ಪ್ರತಿದಿನ ನಿಮ್ಮ ಕೂದಲನ್ನು ತೊಳೆಯಿರಿ. ಸ್ವಿಮ್ಮಿಂಗ್ ಪೂಲ್‌ಗೆ ಹೋದ ನಂತರ ಸ್ವಿಮ್ಮರ್ ಶಾಂಪೂ ಮತ್ತು ಕಂಡಿಷನರ್ ಸೆಟ್ ಬಳಸಿ.
– ಸಾಧ್ಯವಾದಾಗ ನಿಮ್ಮ ಕೂದಲನ್ನು ಡ್ರೈಯರ್ನಲ್ಲಿ ಒಣಗಿಸದೆ ಗಾಳಿಯಲ್ಲಿ ಒಣಗಿಸಲು ಪ್ರಯತ್ನಿಸಿ.
– ಕೂದಲನ್ನು ಬಹಳ ಬಿಗಿಯಾಗಿ ಕಟ್ಟಬೇಡಿ.
– ನಿಮ್ಮ ಕೂದಲಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀಡಲು ಪೌಷ್ಟಿಕಾಂಶಭರಿತವಾದ ಆಹಾರವನ್ನು ಸೇವಿಸಿ.
– ಅತಿಯಾದ ಬಿಸಿಲಿಗೆ ಕೂದಲನ್ನು ಒಡ್ಡಬೇಡಿ.
