AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಾವಸ್ಥೆಯಲ್ಲಿ ನಿಮ್ಮ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಈ 6 ಆಸನ ಉತ್ತಮ

Pregnancy & Yoga: ಯೋಗ ಸೇರಿದಂತೆ ಗರ್ಭಾವಸ್ಥೆಯಲ್ಲಿ ಯಾವುದೇ ವ್ಯಾಯಾಮ ದಿನಚರಿಯನ್ನು ಪ್ರಾರಂಭಿಸುವ ಅಥವಾ ಮುಂದುವರಿಸುವ ಮೊದಲು ನಿಮ್ಮ ಆರೋಗ್ಯ ತಜ್ಞರು ವೈದ್ಯರನ್ನು ಸಂಪರ್ಕಿಸಿ. ಯೋಗ ಬೋಧಕರ ಮಾರ್ಗದರ್ಶನದಲ್ಲಿ ಪ್ರಸವಪೂರ್ವ ಯೋಗವನ್ನು ಅಭ್ಯಾಸ ಮಾಡುವುದರಿಂದ ನಿರ್ದಿಷ್ಟ ಮಾರ್ಪಾಡುಗಳನ್ನು ಒದಗಿಸಬಹುದು ಮತ್ತು ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು.

ಗರ್ಭಾವಸ್ಥೆಯಲ್ಲಿ ನಿಮ್ಮ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಈ 6 ಆಸನ ಉತ್ತಮ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 15, 2023 | 6:09 PM

Share

ಯೋಗವು ಗರ್ಭಿಣಿಯರಿಗೆ ಪ್ರಯೋಜನಕಾರಿಯಾಗಿದೆ. ಇದು ನಮ್ಯತೆ, ಶಕ್ತಿ ಮತ್ತು ಸಮತೋಲನವನ್ನು ಸುಧಾರಿಸುವ ಮೂಲಕ ಗರ್ಭಾವಸ್ಥೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಬೆನ್ನು ನೋವು, ಊತ ಮತ್ತು ನಿದ್ರಾಹೀನತೆಯಂತಹ ಸಾಮಾನ್ಯ ಗರ್ಭಾವಸ್ಥೆಯ ಅಸ್ವಸ್ಥತೆಗಳನ್ನು ನಿವಾರಿಸಲು ಯೋಗ ಸಹಾಯ ಮಾಡುತ್ತದೆ. ಇದು ನಿಮ್ಮ ಒತ್ತಡಕ್ಕೂ ಪರಿಹಾರ ಒದಗಿಸುತ್ತದೆ. ಜೊತೆಗೆ ಗರ್ಭಾವಸ್ಥೆಯಲ್ಲಿ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ. ಆದರೆ ಯೋಗ ಸೇರಿದಂತೆ ಗರ್ಭಾವಸ್ಥೆಯಲ್ಲಿ ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ವೈದ್ಯರೊಂದಿಗೆ ಸಮಾಲೋಚಿಸುವುದು ಮುಖ್ಯ. ಗರ್ಭಾವಸ್ಥೆಯಲ್ಲಿ ಯಾವ ಯೋಗ ಭಂಗಿಗಳು ಫಿಟ್ನೆಸ್ ಅನ್ನು ಹೆಚ್ಚಿಸುತ್ತವೆ ಮತ್ತು ಅವುಗಳನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಗರ್ಭಿಣಿಯರು ಸುರಕ್ಷಿತವಾಗಿ ಮಾಡಬಹುದಾದ 6 ಯೋಗ ಆಸನಗಳು ಇಲ್ಲಿವೆ:

1. ತಡಾಸನ: ಇದನ್ನು ಪರ್ವತ ಭಂಗಿ ಎಂದು ಕೂಡ ಕರೆಯಲಾಗುತ್ತದೆ. ಇದು ರಕ್ತ ಸಂಚಾರವನ್ನು ಸುಧಾರಿಸುವುದು ಮತ್ತು ದೇಹವು ಬೇರೆ ಯೋಗಾಸನಗಳಿಗೆ ತಯಾರಾಗಲು ಇದು ನೆರವಾಗುವುದು. ಇದನ್ನು ಮಾಡುವಾಗ ಕಾಲಿನ ಮೇಲೆ ನೇರವಾಗಿ ನಿಂತು, ಪಾದಗಳನ್ನು ಜತೆಯಾಗಿರಿಸಿ. ಹಿಂಗಾಲು ಸ್ವಲ್ಪ ದೂರವಾಗಿರಲಿ. ತೊಡೆಯ ಸ್ನಾಯುಗಳನ್ನು ಬಿಗಿಯಾಗಿಸಿ. ಮೊಣಕಾಲುಗಳನ್ನು ಸ್ವಲ್ಪ ಎತ್ತಿ. ಆದರೆ ಹೊಟ್ಟೆಯ ಕೆಳಭಾಗಕ್ಕೆ ಹೆಚ್ಚು ಭಾರ ಹಾಕಬೇಡಿ. ಕೈಗಳನ್ನು ನೇರವಾಗಿ ದೇಹದ ಎರಡು ಬದಿಯಲ್ಲಿ ಇಡಿ. ಭುಜಗಳು, ಕೈಗಳು ಮತ್ತು ಎದೆಯನ್ನು ಬಿಗಿಯಾಗಿಸಿ ಉಸಿರಾಡಿ. ದೇಹದಲ್ಲಿ ಬಿಗಿತ್ವವನ್ನು ಅನುಭವಿಸಿ. ಹೀಗೆ ಕೆಲವು ಸೆಕೆಂಡುಗಳ ಕಾಲ ಇರಿ. ಇದರ ಬಳಿಕ ಉಸಿರು ಬಿಟ್ಟು ಆರಾಮ ಮಾಡಿ. ಈ ಸ್ಟ್ರೆಚ್ ಅನ್ನು 10 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ ಮತ್ತು 3- 5 ಬಾರಿ ಪುನರಾವರ್ತಿಸಿ.

2. ಬಾಲಾಸನ: ಬಾಲಾಸನವು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೆಲದ ಮೇಲೆ ಮಂಡಿಯೂರಿ, ನಿಮ್ಮ ದೇಹವನ್ನು ಮುಂದಕ್ಕೆ ಬಾಗಿಸಿ, ಮತ್ತು ಹಣೆಯನ್ನು ನೆಲಕ್ಕೆ ನಿಧಾನವಾಗಿ ಸ್ಪರ್ಶಿಸಿ, ದೇಹ ವಿಶ್ರಾಂತಿ ಪಡೆಯಲು ಬಿಡಿ. ನೀವು ಭೂಮಿಗೆ ಶರಣಾಗುವಾಗ ನಿಮ್ಮ ಬೆನ್ನಿನ ಕೆಳಭಾಗದಲ್ಲಿ ಮೃದುವಾದ ಹಿಗ್ಗುವಿಕೆಯ ಅನುಭವವಾಗುತ್ತದೆ. ಉದ್ವೇಗ ಮತ್ತು ಒತ್ತಡವನ್ನು ಹೊರಹಾಕಿ, ಆಳವಾಗಿ ಉಸಿರಾಡಿ. ಶಾಂತತೆ ಇರಲಿ. ಇದು ವಿಶ್ರಾಂತಿ ಭಂಗಿಯಾಗಿದೆ, ಜೊತೆಗೆ ಆರಾಮ ಮತ್ತು ವಿಶ್ರಾಂತಿಯನ್ನು ನೀಡುತ್ತದೆ ಈ ಭಂಗಿಯನ್ನು 10-15 ಸೆಕೆಂಡುಗಳ ಕಾಲ ಮಾಡಿ ಬಳಿಕ ಪ್ರತಿದಿನ 4- 5 ಸೆಟ್ ಗಳನ್ನು ಮಾಡಿ.

3. ತ್ರಿಕೋನಾಸನ: ನೇರವಾಗಿ ನಿಂತು, ನಿಮ್ಮ ಕಾಲುಗಳನ್ನು ಅಗಲವಾಗಿ ಇರಿಸಿ. ಈಗ ನಿಮ್ಮ ಬಲ ಪಾದವನ್ನು 90 ಡಿಗ್ರಿಗಳಲ್ಲಿ ಇರಿಸಿ ಮತ್ತು ನಿಮ್ಮ ಎಡ ಪಾದವನ್ನು 15 ಡಿಗ್ರಿಗಳಲ್ಲಿ ಇರಿಸಿ. ನಿಮ್ಮ ತೋಳುಗಳನ್ನು ಎರಡೂ ಬದಿಗಳಲ್ಲಿ ಅಗಲವಾಗಿ ಇರಿಸಿ. ಈಗ ದೀರ್ಘವಾಗಿ ಉಸಿರಾಡಿ. ಬಳಿಕ ನಿಮ್ಮ ದೇಹವನ್ನು ಬಲಭಾಗಕ್ಕೆ ಮತ್ತು ಸೊಂಟದಿಂದ ಕೆಳಕ್ಕೆ ಬಗ್ಗಿಸಿ, ನಿಮ್ಮ ಬಲಗೈಯನ್ನು ಕೆಳಕ್ಕೆ ಮತ್ತು ಎಡಗೈಯನ್ನು ಮೇಲಕ್ಕೆ ತೆಗೆದುಕೊಳ್ಳಿ. ನಿಮ್ಮ ಸೊಂಟವನ್ನು ನೇರವಾಗಿ ಇರಿಸಿ. ಈಗ ನಿಮ್ಮ ಬಲಗೈಯನ್ನು ನಿಮ್ಮ ಪಾದದ ಅಥವಾ ಕಾಲ್ಬೆರಳುಗಳ ಮೇಲೆ ಇರಿಸಿ, ನಿಮ್ಮ ಎಡಗೈಯನ್ನು ಮೇಲಕ್ಕೆ ಇರಿಸಿ. ದೇಹವನ್ನು ಹಿಗ್ಗಿಸಿ ಮತ್ತು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ಈ ಭಂಗಿಯನ್ನು 20- 25 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ಪ್ರತಿ ಉಸಿರಾಟದೊಂದಿಗೆ ದೇಹವು ಹೆಚ್ಚು ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತದೆ ಮತ್ತು ಪ್ರತಿ ಬದಿಗೆ 10 ಬಾರಿ ಪುನರಾವರ್ತಿಸಿ.

4. ಸೇತುಬಂಧಾಸನ: ಮೊದಲಿಗೆ, ನಿಮ್ಮ ಎರಡೂ ಕಾಲುಗಳು ಮುಂದಕ್ಕೆ ಚಾಚಿ ಕೆಳಗೆ ಕುಳಿತುಕೊಳ್ಳಬೇಕು. ನಿಧಾನವಾಗಿ ಹಾಗೆ ಹಿಂದಕ್ಕೆ ಬಾಗಿ ಮಲಗಿಕೊಳ್ಳಿ. ನಿಮ್ಮ ಪಾದಗಳಿಗೆ ಮತ್ತು ಸೊಂಟಕ್ಕೆ ಸ್ವಲ್ಪ ಅಂತರವಿರುವಂತೆ ಮಂಡಿಯನ್ನು ಹಿಂದಕ್ಕೆ ಮಡಿಚಿ. ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿ ಅಂಗೈ ಕೆಳಕ್ಕೆ ಮುಖ ಮಾಡುವಂತೆ ಇರಿಸಬೇಕು. ದೀರ್ಘವಾಗಿ ಉಸಿರಾಡಿ, ನಿಧಾನವಾಗಿ ಬೆನ್ನನ್ನು ಎತ್ತಬೇಕು. ನಿಮ್ಮ ಗದ್ದವು ನಿಮ್ಮ ಎದೆಭಾಗಕ್ಕೆ ತಾಕುವ ತನಕ ಮೇಲೆತ್ತಬೇಕು. ನಿಮ್ಮ ಎರಡೂ ತೊಡೆಗಳು ಸಮನಾಂತರವಾಗಿರಬೇಕು. ಎರಡೂ ಅಂಗೈಗಳನ್ನು ನೆಲಕ್ಕೆ ಒತ್ತಿ, ನಿಮ್ಮ ಬೆನ್ನನ್ನು ಮೇಲೆತ್ತಿ. ಇದೇ ಭಂಗಿಯನ್ನು ಸ್ವಲ್ಪ ಸಮಯಗಳ ಕಾಲ ಮಾಡಿ.

5. ವಿಪರಿತಾ ಕರಣಿ: ಮನಸ್ಸು ಮತ್ತು ದೇಹಕ್ಕೆ ಶಾಂತತೆಯನ್ನು ತರುವ ಭಂಗಿ ಎಂದರೆ ಅದು ವಿಪರಿತಾ ಕರಣಿ. ದಿನದ ಹೊರೆಗಳಿಂದ ಪಾರಾಗಲು ನೀವು ಈ ಆಸನದ ಮೊರೆ ಹೋಗಬಹುದು. ಈ ಆಸನ ಮಾಡುವಾಗ ನಿಮ್ಮ ಬೆನ್ನಿನ ಮೇಲೆ ಮಲಗಿ, ನಿಮ್ಮ ಕಾಲುಗಳನ್ನು ಗೋಡೆಗೆ ಅಥವಾ ಇನ್ನಿತರ ವಸ್ತುಗಳಿಗೆ ತಾಡಿಕೊಳ್ಳಿ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿ ಇಡೀ ದೇಹವನ್ನು ವಿಶ್ರಾಂತಿಗೊಳಿಸಲು ಅವಕಾಶ ಮಾಡಿಕೊಡಿ. ಒತ್ತಡ ಹೇಗೆ ಮಾಯವಾಗುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.

6. ಶವಾಸನ (ಶವದ ಭಂಗಿ): ವಿಶ್ರಾಂತಿ ಭಂಗಿಯಾದ ಶವಾಸನವು ನಿಮ್ಮನ್ನು ಸಂಪೂರ್ಣವಾಗಿ ಎಲ್ಲ ಚಿಂತೆಗಳಿಂದ ಶರಣಾಗಲು ಮತ್ತು ದಿನದ ಒತ್ತಡ, ಆತಂಕ ಎಲ್ಲವನ್ನೂ ಮರೆಸಾಲು ಸಹಾಯ ಮಾಡುತ್ತದೆ. ಅಂಗಾತವಾಗಿ ಮಲಗಿ, ತೋಳುಗಳನ್ನು ಮಡಚದೆ ನೇರವಾಗಿ ಇಟ್ಟುಕೊಳ್ಳಿ. ಅಂಗೈಯನ್ನು ಮೇಲಕ್ಕೆ ಮುಖ ಮಾಡಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ದೇಹದಲ್ಲಿರುವ ಉದ್ವೇಗವನ್ನು ಹೊರಹಾಕಿ. ಆಳವಾಗಿ ವಿಶ್ರಾಂತ ಸ್ಥಿತಿಯನ್ನು ಪ್ರವೇಶಿಸುತ್ತಿದ್ದಂತೆ, ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ, ಯಾವುದೇ ನಕಾರಾತ್ಮಕ ಯೋಚನೆ ಇದ್ದರೂ ಹೊರಹಾಕಿ. ಈ ಆನಂದಮಯ ನಿಶ್ಚಲತೆಯಲ್ಲಿ, ಶಾಂತಿಯನ್ನು ಕಂಡುಕೊಳ್ಳಿ ಮತ್ತು ನಿಮ್ಮ ಆಂತರಿಕ ಸಮತೋಲನವನ್ನು ಕಾಪಾಡಿಕೊಳ್ಳಿ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

ಆದರೆ ಯೋಗ ಸೇರಿದಂತೆ ಗರ್ಭಾವಸ್ಥೆಯಲ್ಲಿ ಯಾವುದೇ ವ್ಯಾಯಾಮ ದಿನಚರಿಯನ್ನು ಪ್ರಾರಂಭಿಸುವ ಅಥವಾ ಮುಂದುವರಿಸುವ ಮೊದಲು ನಿಮ್ಮ ಆರೋಗ್ಯ ತಜ್ಞರು ವೈದ್ಯರನ್ನು ಸಂಪರ್ಕಿಸಿ. ಯೋಗ ಬೋಧಕರ ಮಾರ್ಗದರ್ಶನದಲ್ಲಿ ಪ್ರಸವಪೂರ್ವ ಯೋಗವನ್ನು ಅಭ್ಯಾಸ ಮಾಡುವುದರಿಂದ ನಿರ್ದಿಷ್ಟ ಮಾರ್ಪಾಡುಗಳನ್ನು ಒದಗಿಸಬಹುದು ಮತ್ತು ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು.

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ