AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onion Health Benefits: ಬೇಸಿಗೆಯಲ್ಲಿ ಹಸಿ ಈರುಳ್ಳಿ ಸೇವಿಸಿದರೆ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ?

Summer Health Benefits: ಬೇಸಿಗೆಯಲ್ಲಿ ರೋಗಗಳು, ವಿಶೇಷವಾಗಿ ಕೀಟಗಳಿಂದ ಹರಡುವ ರೋಗಗಳು ಹೆಚ್ಚಾಗಿರುತ್ತವೆ. ಹೀಗಾಗಿ, ಬೇಸಿಗೆಯಲ್ಲಿ ಹಸಿ ಈರುಳ್ಳಿ ತಿನ್ನುವುದರಿಂದ ಹಲವು ಉಪಯೋಗಗಳಿವೆ.

Onion Health Benefits: ಬೇಸಿಗೆಯಲ್ಲಿ ಹಸಿ ಈರುಳ್ಳಿ ಸೇವಿಸಿದರೆ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ?
ಈರುಳ್ಳಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 21, 2022 | 4:47 PM

ಅಡುಗೆಯಲ್ಲಿ ಈರುಳ್ಳಿ (Onion) ಬಹಳ ಮುಖ್ಯವಾದ ಪದಾರ್ಥ. ಆದರೆ, ಈ ಈರುಳ್ಳಿ ಕೇವಲ ನಿಮ್ಮ ಅಡುಗೆಗೆ ವಿಶಿಷ್ಟವಾದ ರುಚಿ ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಉಪಯುಕ್ತವಾಗಿದೆ. ಹಲವರು ಹಸಿ ಈರುಳ್ಳಿಯನ್ನು ತಿನ್ನಲು ಇಷ್ಟಪಡುವುದಿಲ್ಲ. ಹಸಿ ಈರುಳ್ಳಿ ತಿಂದರೆ ಬಾಯೆಲ್ಲಾ ವಾಸನೆ ಬರುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣ. ಆದರೆ, ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಈರುಳ್ಳಿ ಮೂಳೆಗಳ ಆರೋಗ್ಯ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಕ್ಯಾನ್ಸರ್ ಮತ್ತು ಮಧುಮೇಹದಿಂದ ರಕ್ಷಿಸುತ್ತದೆ. ಕೆಮ್ಮು, ನೆಗಡಿ ಮತ್ತು ಕಣ್ಣಿನ ಪೊರೆಗೆ ಕೂಡ ಈರುಳ್ಳಿ ರಾಮಬಾಣವಾಗಿದೆ.

ಬೇಸಿಗೆಯ ಋತುವಿನಲ್ಲಿ, ನಿಮ್ಮ ಆಹಾರದಲ್ಲಿ ಹಸಿ ಈರುಳ್ಳಿಯನ್ನು ಸೇರಿಸುವುದು ಸೋಂಕುಗಳನ್ನು ತಡೆಗಟ್ಟಲು ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಅಗತ್ಯವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಸಿ ಈರುಳ್ಳಿಯನ್ನು ತಿನ್ನುವುದು ಅನಾರೋಗ್ಯದ ಹರಡುವಿಕೆಯನ್ನು ತಡೆಯುವ ನಿಮ್ಮ ರೋಗನಿರೋಧಕ ವ್ಯವಸ್ಥೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಬೇಸಿಗೆಯಲ್ಲಿ ರೋಗಗಳು, ವಿಶೇಷವಾಗಿ ಕೀಟಗಳಿಂದ ಹರಡುವ ರೋಗಗಳು ಹೆಚ್ಚಾಗಿರುತ್ತವೆ. ಹೀಗಾಗಿ, ಬೇಸಿಗೆಯಲ್ಲಿ ಹಸಿ ಈರುಳ್ಳಿ ತಿನ್ನುವುದರಿಂದ ಹಲವು ಉಪಯೋಗಗಳಿವೆ.

ಈರುಳ್ಳಿಯು ವಿಟಮಿನ್‌ಗಳು, ಖನಿಜಗಳಿಂದ ತುಂಬಿದ್ದು, ಇವು ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತವೆ. ಈರುಳ್ಳಿಯು ಪ್ರಾಚೀನ ಕಾಲದಿಂದಲೂ ತಲೆನೋವು, ಹೃದಯ ಕಾಯಿಲೆಗಳು ಮತ್ತು ಬಾಯಿ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧೀಯ ಪರಿಣಾಮಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಈರುಳ್ಳಿ ಕೇವಲ 44 ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎಂಬ ವಸ್ತುವಿದ್ದು ಅದು ನೈಸರ್ಗಿಕ ಆಂಟಿಹಿಸ್ಟಮೈನ್ ಆಗಿ ಕಾರ್ಯನಿರ್ವಹಿಸುತ್ತದೆ.

ಈರುಳ್ಳಿ ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಪ್ರತಿ ದಿನ ನಾವು ಸೇವಿಸುವ ಆಹಾರದಲ್ಲಿ ತುಂಬಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಮ್ಮ ಹೃದಯದ ಕಾರ್ಯವನ್ನು ಹಠಾತ್ತನೆ ಯಾವಾಗ ಸ್ಥಗಿತಗೊಳಿಸುತ್ತದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ! ಆದ್ದರಿಂದ, ಈರುಳ್ಳಿಯ ಸೇವನೆಯಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಇಂತಹ ಹತ್ತು ಹಲವಾರು ಪ್ರಯೋಜನಗಳು ಹಸಿ ಈರುಳ್ಳಿ ತಿನ್ನುವುದರಿಂದ ನಮಗೆ ಸಿಗುತ್ತವೆ. ದೇಹದ ಅಲರ್ಜಿ ಸಮಸ್ಯೆಗಳು ಎಂದರೆ ಕಣ್ಣಿನ ಕೆರೆತ, ಗಂಟಲು ಕೆರೆತ, ನೆಗಡಿಗೆ ಕಾರಣವೆಂದರೆ ‘ಹಿಸ್ಟಮಿನ್’ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿ ಬಿಡುಗಡೆಯಾಗುವುದು. ಇಂತಹ ಅಲರ್ಜಿ ಸಮಸ್ಯೆಗಳಿಂದ ಪಾರಾಗಲು ಈ ಹಿಸ್ಟಮಿನ್ ಹಾರ್ಮೋನಿನ ಬಿಡುಗಡೆಯನ್ನು ನಿಲ್ಲಿಸಬೇಕು. ಇದಕ್ಕೆ ದಿನವೂ 1 ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಈರುಳ್ಳಿ ಸೇವನೆಯು ಗ್ಯಾಸ್ ಸಮಸ್ಯೆಯಲ್ಲಿ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ಒಂದು ಟೀಸ್ಪೂನ್ ಈರುಳ್ಳಿ ರಸ, 1 ಬೆಳ್ಳುಳ್ಳಿ, ಸ್ವಲ್ಪ ಶುಂಠಿ, 1 ಟೀಸ್ಪೂನ್ ಜೇನುತುಪ್ಪ ಮತ್ತು 2 ಟೀಸ್ಪೂನ್ ನೀರು ಮಿಶ್ರಣ ಮಾಡಿ. ಅದರ ಮಿಶ್ರಣವನ್ನು ತಯಾರಿಸಿ, ದಿನಕ್ಕೆ ಒಮ್ಮೆ ಸೇವಿಸಿ. ಈರುಳ್ಳಿ ಸೇವಿಸುವುದರಿಂದ ಶೀತ, ಕೆಮ್ಮು, ಕಿವಿ, ಜ್ವರ ಮತ್ತು ಚರ್ಮದ ಸಮಸ್ಯೆಗಳಲ್ಲೂ ಪರಿಹಾರ ಸಿಗುತ್ತದೆ.

ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಒಸಡಿನ ಸೋಂಕು ಮತ್ತು ಬಾಯಿ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಆಂಟಿಬ್ಯಾಕ್ಟೀರಿಯಲ್ ಗುಣಗಳಿಂದ ಕೂಡಿದ ಈರುಳ್ಳಿಯನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೀರ್ಣಕ್ರಿಯೆಯೂ ಚೆನ್ನಾಗಿ ಆಗುತ್ತದೆ.

ಇದನ್ನೂ ಓದಿ: Women Health: ಮಹಿಳೆಯರಲ್ಲಿನ ಈ ನಾಲ್ಕು ಆರೋಗ್ಯ ಸಮಸ್ಯೆಗಳಿಗೆ ಹಸಿ ಈರುಳ್ಳಿ ಸೇವನೆಯಿಂದ ಸಿಗಲಿದೆ ಪರಿಹಾರ!

ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಇದೆಯೇ? ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ ವಹಿಸಿ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?