Weight Loss: ನಿಮ್ಮ ಅಡುಗೆ ಮನೆಯಲ್ಲೇ ಇರುವ ಈ 5 ಮಸಾಲೆಗಳು ತೂಕ ನಿರ್ವಹಣೆಗೆ ಸಹಕಾರಿ

Health Tips | Indian Spices: ತೂಕ ಇಳಿಕೆಗೆ ನೀವು ವ್ಯಾಯಾಮ ಅಥವಾ ಇತರ ದೈಹಿಕ ಕ್ರಮಗಳೊಂದಿಗೆ ಆಹಾರದಲ್ಲೂ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಆಹಾರದಲ್ಲಿ ಬದಲಾವಣೆ ಎಂದರೆ ನೀವು ಕಠಿಣ ಡಯಟ್ ಪಾಲಿಸಬೇಕು ಎಂದರ್ಥವಲ್ಲ. ಹಲವು ಮಸಾಲೆ ಪದಾರ್ಥಗಳಿವೆ, ಅವುಗಳ ನಿಯಮಿತ ಸೇವನೆ ತೂಕವನ್ನು ನಿರ್ವಹಿಸಲು ಸಹಾಯ ಮಾಡಬಲ್ಲದು. ಯಾವೆಲ್ಲಾ ಮಸಾಲೆಗಳು?

Weight Loss: ನಿಮ್ಮ ಅಡುಗೆ ಮನೆಯಲ್ಲೇ ಇರುವ ಈ 5 ಮಸಾಲೆಗಳು ತೂಕ ನಿರ್ವಹಣೆಗೆ ಸಹಕಾರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Apr 10, 2022 | 6:30 AM

ಈ ಜಗತ್ತಿನಲ್ಲಿ ಜನರು ತಲೆಕೆಡಿಸಿಕೊಳ್ಳುವ ವಿಷಯಗಳಲ್ಲಿ ದೇಹದ ತೂಕವೂ ಒಂದು. ಬಹಳಷ್ಟು ಜನರಿಗೆ ತಮ್ಮ ದೇಹದ ತೂಕ ಹೆಚ್ಚಾಗುತ್ತಿದೆ, ಅದನ್ನು ಸರಿಪಡಿಸಿಕೊಳ್ಳಬೇಕು ಎಂಬ ಚಿಂತೆಯಿದ್ದರೆ, ಕೆಲವರಿಗೆ ತೂಕ ಹೆಚ್ಚಬೇಕು ಎಂದು ಕನಸಿರುತ್ತದೆ. ಇದಕ್ಕೆ ತಕ್ಕಂತೆ ತಮ್ಮ ದಿನಚರಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಜನರಿಗೆ ತೂಕ ಇಳಿಸಿಕೊಳ್ಳಬೇಕು ಎಂಬ ಕನಸಿದ್ದರೂ ಅದರೆಡೆಗೆ ಅವರು ಪ್ರಯತ್ನವನ್ನೇ ಮಾಡುವುದಿಲ್ಲ. ಅಥವಾ ಅದಕ್ಕೆ ಪೂರಕವಾದ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದಿಲ್ಲ. ಹೀಗಾದಾಗ ತೂಕ ಇಳಿಸಿಕೊಳ್ಳುವುದು (Weight Loss) ಕನಸಿನ ಮಾತೇ ಸರಿ. ನಾವು ಸ್ಲಿಮ್ ಆಗಿ ಕಾಣಬೇಕೆನ್ನುವುದು ಬೇರೆಯವರಿಂದ ಪ್ರಭಾವಿತರಾಗಿ ಹೇಳಬಾರದು. ನಾವು ದೀರ್ಘಕಾಲದವರೆಗೆ ಉತ್ತಮ ಆರೋಗ್ಯ ಹೊಂದಿರಲು ಫಿಟ್​ನೆಸ್ ಜತೆಜತೆಗೆ ತೂಕವೂ ಸಮಸ್ಥಿತಿಯಲ್ಲಿರುವುದು ಮುಖ್ಯ. ಈ ಆಯಾಮದಿಂದ ಯೋಚಿಸಿ, ತೂಕ ಇಳಿಕೆಗೆ ಮುಂದಡಿ ಇಟ್ಟರೆ ನೀವು ಸಫಲವಾಗಬಹುದು. ತೂಕ ಇಳಿಕೆಗೆ ನೀವು ವ್ಯಾಯಾಮ ಅಥವಾ ಇತರ ದೈಹಿಕ ಕ್ರಮಗಳೊಂದಿಗೆ ಆಹಾರದಲ್ಲೂ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಆಹಾರದಲ್ಲಿ ಬದಲಾವಣೆ ಎಂದರೆ ನೀವು ಕಠಿಣ ಡಯಟ್ ಪಾಲಿಸಬೇಕು ಎಂದರ್ಥವಲ್ಲ. ಹಲವು ಮಸಾಲೆ ಪದಾರ್ಥಗಳಿವೆ, ಅವುಗಳ ನಿಯಮಿತ ಸೇವನೆ ತೂಕವನ್ನು ನಿರ್ವಹಿಸಲು ಸಹಾಯ ಮಾಡಬಲ್ಲದು. ಯಾವೆಲ್ಲಾ ಮಸಾಲೆಗಳು? ಇದಕ್ಕಾಗಿ ನೀವು ಮಾಡಬೇಕಿರುವುದೇನು? ಇಲ್ಲಿದೆ ನೋಡಿ.

ತೂಕ ನಿರ್ವಹಣೆಗೆ 5 ಮಸಾಲೆಗಳು:

ಜೀರಾ:

ಜೀರಿಗೆಯು ಥೈಮೋಲ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿದೆ. ಇದು ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಯು ತೂಕ ನಷ್ಟಕ್ಕೆ ಸಹಾಯಕವಾಗಿದೆ. ಆಯುರ್ವೇದ ತಜ್ಞರ ಪ್ರಕಾರ, ಜೀರಿಗೆ ನೀರು ಅತ್ಯುತ್ತಮ ಪಾನೀಯ. ಇದು ದೇಹಕ್ಕೆ ಬೇಡದ್ದನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಪಿತ್ತರಸದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಜತೆಗೆ ಯಕೃತ್ತಿನ ಆರೋಗ್ಯಕ್ಕೂ ಸಹಕಾರಿ.

ಕೊತ್ತಂಬರಿ ಬೀಜಗಳು (ಧನಿಯಾ):

ಐದು ಮಸಾಲೆಗಳಲ್ಲಿ ಅತ್ಯಂತ ಅವಶ್ಯಕವಾಗಿದ್ದು ಕೊತ್ತಂಬರಿ (ಧನಿಯಾ). ಇದರಲ್ಲಿ ವಿವಿಧ ಖನಿಜಗಳು (ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಫೋಲಿಕ್ ಆಮ್ಲ) ಮತ್ತು ವಿಟಮಿನ್‌ಗಳ (ಎ, ಕೆ, ಮತ್ತು ಸಿ) ಇರುತ್ತವೆ. ಹಲವಾರು ಇತರ ಆರೋಗ್ಯ ಪ್ರಯೋಜನಗಳ ಜೊತೆಗೆ, ದನಿಯಾ ಜೀರ್ಣಕ್ರಿಯೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ಎರಡು ಚಮಚ ಧನಿಯಾ ಬೀಜಗಳನ್ನು ರಾತ್ರಿಯಿಡೀ ನೆನೆಸಿ, ಮರುದಿನ ಬೆಳಿಗ್ಗೆ ಅದನ್ನು ಕುದಿಸಿ ಮತ್ತು ಬೀಜಗಳನ್ನು ಸೋಸಿದ ನಂತರ ಸೇವಿಸುವುದು.

ಓಮ (ಕ್ಯಾರಮ್ ಸೀಡ್ಸ್):

ಹೆಚ್ಚುವರಿ ತೂಕ ಇಳಿಸಲು ಓಮ ಸಹಕಾರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಕಡಿಮೆ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ ಇದರಿಂದ ತೂಕ ನಷ್ಟಕ್ಕೆ ಸಹಾಯಕವಾಗುತ್ತದೆ. ನೀವು ಒಂದು ಚಮಚ ಓಮವನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ ಮತ್ತು ದಿನವಿಡೀ ಸ್ವಲ್ಪ ಸ್ವಲ್ಪ ಅದನ್ನು ಕುಡಿಯಿರಿ.

ಇಂಗು:

ನಮ್ಮ ಆಹಾರಕ್ಕೆ ಪರಿಮಳ ಸೂಸಕದ ಹೊರತಾಗಿ ಇಂಗು ಉತ್ತಮ ಚಯಾಪಚಯ ಕ್ರಿಯೆಗೆ ಬಲುಉಪಕಾರಿಯಾಗಿದೆ. ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಇದು ನಿಯಂತ್ರಿಸುತ್ತದೆ. ಬಿಸಿನೀರಿನಲ್ಲಿ ಅರ್ಧ ಚಮಚ ಇಂಗನ್ನು ಸೇರಿಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಕರಿಮೆಣಸು/ ಕಾಳು ಮೆಣಸು:

ಕರಿಮೆಣಸಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ. ನಾರಿನಂಶ ಕೂಡ ಇದ್ದು ತೂಕ ನಷ್ಟಕ್ಕೆ ಇದು ಸಹಕಾರಿಯಾಗಿದೆ. ತಜ್ಞರ ಪ್ರಕಾರ, ಕರಿಮೆಣಸಿನ ಚಹಾ ತೂಕ ನಿರ್ವಹಣೆಗೆ ಸಹಾಯಕ. ಕರಿಮೆಣಸಿನಲ್ಲಿ ಪೈಪರಿನ್ ಇದ್ದು, ಇದು ಚಯಾಪಚಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಜತೆಗೆ ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ನಿಗ್ರಹಿಸುತ್ತದೆ. ಇದನ್ನು ಹಲವಾರು ವಿಧಗಳಲ್ಲಿ ಸೇವಿಸಬಹುದು. ಒಬ್ಬರು ಎರಡರಿಂದ ಮೂರು ಕಾಳುಮೆಣಸುಗಳನ್ನು ಅಗಿಯಬಹುದು ಅಥವಾ ಬೇರೆ ರೂಪದಲ್ಲಿಯಾದರೂ ಸೇವಿಸಬಹುದು.

ಈ ಮಸಾಲೆಗಳು ಪ್ರತಿ ಮನೆಯಲ್ಲಿ ಲಭ್ಯವಿರುತ್ತವೆ. ತೂಕ ನಿರ್ವಹಣೆಗಾಗಿ ಈ ಮಸಾಲೆಗಳನ್ನು ನಿಯಮಿತವಾಗಿ ಬಳಸುವುದರೊಂದಿಗೆ ನಿರಂತರವಾಗಿ ದೈಹಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿ. ನಿಮ್ಮ ಆಹಾರದಲ್ಲಿ ಹೊಸದನ್ನು ಅಳವಿಡಿಸಿಕೊಳ್ಳುವ ಮೊದಲು ಕುಟುಂಬ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.

ಇದನ್ನೂ ಓದಿ: ಈ ಪಾನೀಯಗಳು ಕೊಲೆಸ್ಟ್ರಾಲ್ ಮತ್ತು ತೂಕ ಕಡಿಮೆ ಮಾಡಲು ಸಹಕಾರಿ..!

ನೀವು ಕುಡಿಯುವ ನೀರು ನಿಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ; ಇಲ್ಲಿದೆ ತಜ್ಞರ ಸಲಹೆ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್