ಅಡುಗೆ ಮಾಡುವ ಸರಿಯಾದ ವಿಧಾನ ಯಾವುದು?; ಈ ತಪ್ಪು ಮಾಡಬೇಡಿ
ಅಡುಗೆ ವಿಧಾನ ಕೇವಲ ಆಹಾರದ ರುಚಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ನಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ, ಯಾವ ರೀತಿಯ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳಬಾರದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಈ ಮೂರು ಅಡುಗೆ ವಿಧಾನಗಳು ನಿಮ್ಮ ಆರೋಗ್ಯಕ್ಕೆ ಕುಂದು ತಂದೀತು ಎಚ್ಚರ.
ಹೊಸ ತಂತ್ರಜ್ಞಾನಗಳು ಈಗ ಅಡುಗೆ ಮನೆಯನ್ನು ಕೂಡ ಆವರಿಸಿಕೊಂಡಿವೆ. ಸರಿಯಾದ ಅಡುಗೆ ವಿಧಾನ ಕೇವಲ ಆಹಾರದ ರುಚಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ನಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಮರೆಯಬಾರದು. ನಾವು ಮಾಡುವ ಅಡುಗೆಯ ಕ್ರಮ ಆ ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಕೂಡ ನಿರ್ಧರಿಸುತ್ತದೆ. ಹೀಗಾಗಿ, ಪೌಷ್ಟಿಕತಜ್ಞರಾದ ಲೊವ್ನೀತ್ ಬಾತ್ರಾ ಇನ್ಸ್ಟಾಗ್ರಾಂನಲ್ಲಿ ಸರಿಯಾದ ರೀತಿಯ ಅಡುಗೆ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಏರ್ ಫ್ರೈಯಿಂಗ್:
ಪೌಷ್ಟಿಕತಜ್ಞರ ಪ್ರಕಾರ, ಮಾಂಸ ಮತ್ತು ಚೀಸ್ನಂತಹ ಆಹಾರಗಳನ್ನು ಗಾಳಿಯಲ್ಲಿ ಹುರಿಯುವಾಗ ಅವುಗಳ ಪೌಷ್ಟಿಕಾಂಶ ಕಡಿಮೆ ಆಗುತ್ತದೆ. ಏರ್ ಫ್ರೈಯಿಂಗ್‌ನಂತಹ ಒಣ ಅಡುಗೆ ವಿಧಾನಗಳ ಮೂಲಕ ಆಹಾರಗಳು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಸುಧಾರಿತ ಗ್ಲೈಕೇಶನ್ ಎಂಡ್ ಉತ್ಪನ್ನಗಳು (AGEs) ಉತ್ಪತ್ತಿಯಾಗುತ್ತವೆ. ಇದು ಆಹಾರದ ಪೌಷ್ಟಿಕಾಂಶವನ್ನು ಹದಗೆಡಿಸಬಹುದು.
ಇದನ್ನೂ ಓದಿ: ಕ್ಯಾಪ್ಸಿಕಂ ತಿನ್ನುವುದರಿಂದ ಆರೋಗ್ಯಕ್ಕೆ ಏನು ಪ್ರಯೋಜನ?
ಆದರೆ, ಏರ್ ಫ್ರೈಯರ್ ಆಹಾರವನ್ನು ಬೇಯಿಸಲು ಕಡಿಮೆ ಶಾಖವನ್ನು ಬಳಸುತ್ತದೆ. ಇದರಿಂದಾಗಿ ಡೀಪ್ ಫ್ರೈಯಲ್ಲಿ ಬಳಸುವ ಎಣ್ಣೆಯ ಶೇ.70 ರಿಂದ 80ರಷ್ಟು ಕಡಿಮೆಯಾಗುತ್ತದೆ ಎಂಬ ವಾದವೂ ಇದೆ. ಜಸ್ಲೋಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪೌಷ್ಟಿಕತಜ್ಞ ಮತ್ತು ಆಹಾರ ತಜ್ಞ ಭವಿಷ್ಯಾ ಖುಮಾನ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಕರಿದ ಆಹಾರಕ್ಕೆ ಹೋಲಿಸಿದರೆ ಏರ್ ಫ್ರೈಯರ್ನಲ್ಲಿ ತಯಾರಿಸುವ ಆಹಾರ ಹೆಚ್ಚಿನ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಅಡುಗೆ ಮಾಡುವ ಸರಿಯಾದ ವಿಧಾನದ ಬಗ್ಗೆ ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ.
View this post on Instagram
ಗ್ರಿಲ್ಲಿಂಗ್:
ಗ್ರಿಲ್ಲಿಂಗ್ ಆಹಾರವನ್ನು ಬೇಯಿಸಲು ಇನ್ನೊಂದು ಮಾರ್ಗವಾಗಿದೆ. ಹೆಚ್ಚಿನ ತಾಪಮಾನದಲ್ಲಿ ಮತ್ತು ತೆರೆದ ಬೆಂಕಿಯ ಮೇಲೆ ಗ್ರಿಲ್ಲಿಂಗ್ ಮಾಡುವುದರಿಂದ ಹೆಟೆರೊಸೈಕ್ಲಿಕ್ ಅಮೈನ್ಸ್ (HCAs) ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಎಂಬ ಸಂಭಾವ್ಯ ಹಾನಿಕಾರಕ ಸಂಯುಕ್ತಗಳ ರಚನೆಗೆ ಕಾರಣವಾಗಬಹುದು ಎಂದು ಬಾತ್ರಾ ಹೇಳಿದ್ದಾರೆ.
ಇದನ್ನೂ ಓದಿ: Dengue: ಡೆಂಗ್ಯೂ ಜ್ವರ ಬಂದಾಗ ಏನು ತಿನ್ನಬೇಕು? ಏನು ತಿನ್ನಲೇಬಾರದು?
ನಾನ್ಸ್ಟಿಕ್:
ಇತ್ತೀಚೆಗೆ ನಾನ್ ಸ್ಟಿಕ್ ಪಾತ್ರೆಗಳು ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಅವು ಅಡುಗೆಯನ್ನು ಸುಲಭವಾಗಿಸುವುದಲ್ಲದೆ ಕ್ಲೀನ್ ಮಾಡಲು ಕೂಡ ಬಹಳ ಸುಲಭವಾಗುತ್ತದೆ. ಆದರೆ ನಾನ್ ಸ್ಟಿಕ್ ಪ್ಯಾನ್ ಗಳಲ್ಲಿ ಅಡುಗೆ ಮಾಡುವುದು ಅತ್ಯಂತ ಹಾನಿಕಾರಕ. ನಾನ್-ಸ್ಟಿಕ್ ಪ್ಯಾನ್‌ಗಳ ಮೇಲೆ ಸಾಮಾನ್ಯವಾಗಿ ಟೆಫ್ಲಾನ್ ಎಂದು ಕರೆಯಲ್ಪಡುವ ಪಾಲಿಟೆಟ್ರಾಫ್ಲೋರೋಎಥಿಲೀನ್ (ಪಿಟಿಎಫ್‌ಇ) ಲೇಪನವು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ವಿಷವನ್ನು ಬಿಡುಗಡೆ ಮಾಡುತ್ತದೆ ಎಂದು ಬಾತ್ರಾ ತಿಳಿಸಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Wed, 20 September 23