Home Remedies: ಪಾದ, ಹಿಮ್ಮಡಿ ನೋವಿಗೆ ಎಲೆಕೋಸಿನಿಂದ ಮುಕ್ತಿ

ನಿಮ್ಮ ಮನೆಗಳಲ್ಲೂ ಹಿಮ್ಮಡಿ, ಪಾದದ ನೋವಿನಿಂದ ಬಳುತ್ತಿರುವವರು ಇರಬಹುದು. ಕೆಲವರಿಗೆ ಎಷ್ಟೇ ಔಷಧಿಗಳನ್ನು ಪ್ರಯತ್ನಿಸಿದರೂ ಈ ನೋವಿನಿಂದ ಮುಕ್ತಿ ಸಿಕ್ಕಿರುವುದಿಲ್ಲ. ಹಾಗಾದರೆ ಎಲೆಕೋಸು ಇಂತಹ ನೋವನ್ನು ಹೇಗೆ ನಿವಾರಣೆ ಮಾಡುತ್ತದೆ? ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Home Remedies: ಪಾದ, ಹಿಮ್ಮಡಿ ನೋವಿಗೆ ಎಲೆಕೋಸಿನಿಂದ ಮುಕ್ತಿ
ಸರಳ ಮನೆಮದ್ದು
Edited By:

Updated on: Jun 26, 2024 | 5:01 PM

ಎಲೆಕೋಸು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಇದರ ಆರೋಗ್ಯ ಪ್ರಯೋಜನಗಳು ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅದರಲ್ಲಿ ನೋವು ನಿವಾರಣೆಯೂ ಸೇರಿಕೊಂಡಿದೆ. ನಿಮ್ಮ ಮನೆಗಳಲ್ಲೂ ಹಿಮ್ಮಡಿ, ಪಾದದ ನೋವಿನಿಂದ ಬಳುತ್ತಿರುವವರು ಇರಬಹುದು. ಕೆಲವರಿಗೆ ಎಷ್ಟೇ ಔಷಧಿಗಳನ್ನು ಪ್ರಯತ್ನಿಸಿದರೂ ಈ ನೋವಿನಿಂದ ಮುಕ್ತಿ ಸಿಕ್ಕಿರುವುದಿಲ್ಲ. ಹಾಗಾದರೆ ಎಲೆಕೋಸು ಇಂತಹ ನೋವನ್ನು ಹೇಗೆ ನಿವಾರಣೆ ಮಾಡುತ್ತದೆ? ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಆರ್ ಡಿ ಕುಕ್ಕಿಂಗ್ ಕನ್ನಡ ಎಂಬ ಫೇಸ್ ಬುಕ್ ಖಾತೆಯಲ್ಲಿ ಇದಕ್ಕೆ ಸಂಬಂಧ ಪಟ್ಟ ಹಾಗೆ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಪಾದ ಮತ್ತು ಹಿಮ್ಮಡಿ ನೋವನ್ನು ಬೇಗ ಕಡಿಮೆ ಮಾಡಿಕೊಳ್ಳಲು ಒಂದು ಸರಳ ಸಲಹೆಯನ್ನು ನೀಡಿದ್ದಾರೆ. ಇದು ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿಕೊಂಡು, ಸರಳವಾಗಿ ಮಾಡಬಹುದಾಗಿದ್ದು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ.

ಇದನ್ನೂ ಓದಿ: ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ, ಈ ಮನೆಮದ್ದು ಟ್ರೈ ಮಾಡಿ

ಪಾದ, ಹಿಮ್ಮಡಿ ನೋವಿಗೆ ಎಲೆಕೋಸು ಹೇಗೆ ಬಳಸಬೇಕು

ಎಲೆಕೋಸು ಅಥವಾ ಕ್ಯಾಬಿಜ್ ಮೇಲಿನ ಒಂದು ಪದರ ಅಥವಾ ಸಿಪ್ಪೆ ತೆಗೆದು ಅದಕ್ಕೆ ಬಿಸಿ ಮಾಡಿದ ಸಾಸಿವೆ ಎಣ್ಣೆಯನ್ನು ಹಾಕಿ, ಬಳಿಕ ಅದಕ್ಕೆ ಸ್ವಲ್ಪ ಅರಿಶಿನ, ಸ್ವಲ್ಪ ಜಾಯಿಕಾಯಿಯನ್ನು ತುರಿದು ಹಾಕಬೇಕು ನಂತರ ಅದನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಒಂದು ದಾರದ ಸಹಾಯದಿಂದ ಹಿಮ್ಮಡಿ ಮತ್ತು ಪಾದ ಮುಚ್ಚುವಂತೆ ಕಟ್ಟಿಕೊಳ್ಳಿ. 3 ಗಂಟೆ ನಂತರ ಅದನ್ನು ತೆಗೆದು ಆ ಜಾಗಕ್ಕೆ ಬಿಸಿ ನೀರಿನ ಶಾಖ ಕೊಡಿ. ಈ ರೀತಿ ಮಾಡುವುದರಿಂದ ಪಾದ ಮತ್ತು ಹಿಮ್ಮಡಿ ನೋವು ಮಾಯವಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us