ಮುಟ್ಟಿನ ಸಮಯದಲ್ಲಿ ನೋವಿನಿಂದ ರಕ್ಷಣೆ ಪಡೆಯಲು ಈ ಆಹಾರಗಳನ್ನು ಸೇವಿಸಿ

ಹೆಣ್ಣುಮಕ್ಕಳು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ನೋವನ್ನು ಅನುಭವಿಸಿಯೇ ಇರುತ್ತಾರೆ, ಆ ಸಮಯದಲ್ಲಿ ಮೈ-ಕೈ ನೋವು, ತಲೆ ನೋವು, ಹೊಟ್ಟೆನೋವು, ಸುಸ್ತು ಸಾಮಾನ್ಯವಾಗಿ ಕಾಡುವ ತೊಂದರೆಯಾಗಿದೆ.

ಮುಟ್ಟಿನ ಸಮಯದಲ್ಲಿ ನೋವಿನಿಂದ ರಕ್ಷಣೆ ಪಡೆಯಲು ಈ ಆಹಾರಗಳನ್ನು ಸೇವಿಸಿ
ಮುಟ್ಟಿನ ನೋವು
Follow us
TV9 Web
| Updated By: ನಯನಾ ರಾಜೀವ್

Updated on: May 07, 2022 | 6:07 PM

ಹೆಣ್ಣುಮಕ್ಕಳು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ನೋವನ್ನು ಅನುಭವಿಸಿಯೇ ಇರುತ್ತಾರೆ, ಆ ಸಮಯದಲ್ಲಿ ಮೈ-ಕೈ ನೋವು, ತಲೆ ನೋವು, ಹೊಟ್ಟೆನೋವು, ಸುಸ್ತು ಸಾಮಾನ್ಯವಾಗಿ ಕಾಡುವ ತೊಂದರೆಯಾಗಿದೆ. ಆದರೆ ಕೆಲವೊಬ್ಬರಿಗೆ ಸಣ್ಣ ಪ್ರಮಾಣದಲ್ಲಿ ಇನ್ನೂ ಕೆಲವರು ದೊಡ್ಡ ಪ್ರಮಾಣದಲ್ಲಿ ನೋವನ್ನು ಅನುಭವಿಸುತ್ತಾರೆ. ನೀವು ಕೂಡ ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ನೋವು ಅನುಭವಿಸುತ್ತಿದ್ದರೆ ಈ ಕೆಲಸ ಮಾಡಿ.

ಯೋಗ: ಯೋಗ ಮಾಡುವುದರಿಂದ ಮುಟ್ಟಿನ ಸಮಯದಲ್ಲಾಗುವ ನೋವನ್ನು ಕಡಿಮೆ ಮಾಡಬಹುದು, ಯೋಗದಲ್ಲಿ ಎಲ್ಲಾ ಆಸನಗಳನ್ನು ಮಾಡಲಾಗದಿದ್ದರೂ ಕೆಲವು ಆಸನಗಳು ತುಂಬಾ ಉಪಯುಕ್ತವಾಗಿರುತ್ತದೆ. ಗೋಮುಖಾಸನ, ಭುಜಂಗಾಸನ ಹಾಗೂ ಜಾನು ಶಿರಸಾಸನವನ್ನು ಮಾಡಿ. ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನಿ: ಮುಟ್ಟಿನ ಸಮಯದಲ್ಲಿ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಯನ್ನು ಬೆಳಗಿನ ಜಾವ ಸೇವಿಸುವುದರಿಂದ ನೋವನ್ನು ಕಡಿಮೆ ಮಾಡಬಹುದು.

ಬಾಳೆಹಣ್ಣು ಸೇವನೆ: ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹಾಗೂ ವಿಟಮಿನ್ ಬಿ6 ಅಂಶ ಹೆಚ್ಚಿದ್ದು ನೋವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.

ಬಿಸಿ ನೀರಿನ ಬ್ಯಾಗ್: ಬಿಸಿ ನೀರಿನ ಬ್ಯಾಗ್​ ಅನ್ನು ಹೊಟ್ಟೆಯ ಮೇಲಿರಿಸುವುದರಿಂದ ನೋವು ಕಡಿಮೆಯಾಗಲಿದೆ. ಹಾಗೆಯೇ ಬಿಸಿ ನೀರನ್ನು ಕುಡಿಯುವುದು ಹಾಗೂ ಬಿಸಿನೀರಿನಲ್ಲಿ ಸ್ನಾನ ಮಾಡಿ. ಡಾರ್ಕ್ ಚಾಕೊಲೇಟ್: ಮುಟ್ಟಿನ ಸಮಯದಲ್ಲಿ ಡಾರ್ಕ್ ಚಾಕೊಲೇಟ್​ಗಳನ್ನು ಸೇವಿಸಿ ಬಾದಾಮಿ ಹಾಗೂ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ನೀರು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು.

ಯಾವುದನ್ನು ಸೇವಿಸಬಾರದು? ಹೆಚ್ಚು ಚಹಾ ಮತ್ತು ಕಾಫಿ ಸೇವಿಸಬೇಡಿ ಕೆಲವರು ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ಚಹಾ ಮತ್ತು ಕಾಫಿ(Tea and Coffee) ಸೇವಿಸುತ್ತಾರೆ. ಇದರಲ್ಲಿರುವ ಕೆಫೀನ್ ನಿಮ್ಮ ನೋವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್ ಶೇಖರಣೆ ಆಗುತ್ತದೆ. ಇದರಿಂದಾಗಿ ನಿಮ್ಮ ನೋವು ಹೆಚ್ಚಾಗಬಹುದು.

ತಣ್ಣನೆಯ ಆಹಾರ/ ಪಾನೀಯಗಳನ್ನು ಸೇವಿಸಬೇಡಿ ಮುಟ್ಟಿನ ಸಮಯ(Periods Time)ದಲ್ಲಿ ಮೊಸರು, ಮಜ್ಜಿಗೆ, ತಂಪು ಪಾನೀಯಗಳು ಹೀಗೆ ಮುಂತಾದ ತಣ್ಣನೆಯ ಆಹಾರಗಳನ್ನ ಸೇವಿಸಬೇಡಿ . ಇದು ಹೊಟ್ಟೆಯಲ್ಲಿ ಊತವನ್ನು ಹೆಚ್ಚಿಸುತ್ತದೆ ಮತ್ತು ನೋವನ್ನು ಹೆಚ್ಚಿಸುತ್ತದೆ.

ಜಂಕ್ ಫುಡ್ ಅಥವಾ ಪ್ಯಾಕೆಟ್ ಆಹಾರದಿಂದ ದೂರವಿರಿ ಜಂಕ್ ಫುಡ್ ಅಥವಾ ಪ್ಯಾಕೆಟ್ ಆಹಾರದಿಂದ ದೂರವಿರಬೇಕು. ಈ ಸಮಯದಲ್ಲಿ ದೇಹದಿಂದ ರಕ್ತ ಹೊರಹೋಗುತ್ತದೆ, ಆದ್ದರಿಂದ ದೇಹಕ್ಕೆ ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ ಈ ಮಧ್ಯೆ, ಸುಲಭವಾಗಿ ಜೀರ್ಣವಾಗುವಂತಹ ಆರೋಗ್ಯಕರ ಮತ್ತು ಮೆದುವಾದ ಆಹಾರವನ್ನು ಸೇವಿಸಿ.

ಮದ್ಯ ಅಥವಾ ಮಾದಕ ವಸ್ತುಗಳಿಂದ ದೂರವಿರಿ ಪಿರಿಯಡ್ಸ್ ಸಮಯದಲ್ಲಿ ಆಲ್ಕೋಹಾಲ್(Alcohol) ಅಥವಾ ಔಷಧಗಳ ಬಳಕೆಯು ಹೊಟ್ಟೆಯ ಕೆಳಭಾಗದಲ್ಲಿ ಊತವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಕಾರಣದಿಂದಾಗಿ, ನಿಮ್ಮ ನೋವು ಕೂಡ ಹೆಚ್ಚಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ಆಲ್ಕೋಹಾಲ್ ಸೇವಿಸಬೇಡಿ. ನೀವು ಹಣ್ಣಿನ ರಸವನ್ನು ಸೇವಿಸಬಹುದು ಬಹಳ ಉತ್ತಮ.

ಜೀವನಶೈಲಿ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ