AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಂಧದಲ್ಲಿ ಅತಿಯಾಗಿ ಅನುಮಾನಿಸುವುದು ರಿಲೇಷನ್‌ಶಿಪ್ ಒಸಿಡಿಯ ಲಕ್ಷಣವೇ? ಹೇಗಿರುತ್ತದೆ ಈ ಡಿಸಾರ್ಡರ್ ಲಕ್ಷಣ?

ಒಸಿಡಿ ಅಥವಾ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಪ್ರೇಮ ಸಂಬಂಧಗಳನ್ನು ಅಥವಾ ವೈವಾಹಿಕ ಜೀವನವನ್ನು ಸಹ ಹಾಳುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇದನ್ನು ರಿಲೇಶನ್‌ಶಿಪ್ ಒಸಿಡಿ ಎಂದು ಕರೆಯಲಾಗುತ್ತದೆ. ಇ ದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು, ಸಂಬಂಧಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾದರೆ ಏನಿದು ರಿಲೇಷನ್‌ಶಿಪ್ ಒಸಿಡಿ, ಈ ರೀತಿ ಸಮಸ್ಯೆಯನ್ನು ನಿಯಂತ್ರಿಸಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಂಬಂಧದಲ್ಲಿ ಅತಿಯಾಗಿ ಅನುಮಾನಿಸುವುದು ರಿಲೇಷನ್‌ಶಿಪ್ ಒಸಿಡಿಯ ಲಕ್ಷಣವೇ? ಹೇಗಿರುತ್ತದೆ ಈ ಡಿಸಾರ್ಡರ್ ಲಕ್ಷಣ?
Relationship OcdImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 13, 2026 | 8:59 PM

Share

ದಾಂಪತ್ಯ ಅಥವಾ ಪ್ರೀತಿಯಲ್ಲಿರುವವರಿಗೆ ಒಬ್ಬರ ಮೇಲೆ ಒಬ್ಬರಿಗೆ ಸಣ್ಣಪುಟ್ಟ ಅನುಮಾನಗಳು ಬರುವುದು ಸಾಮಾನ್ಯ. ಆದರೆ ಅದೇ ಅನುಮಾನ ದಿನೇದಿನೇ ಹೆಚ್ಚಾಗಿ, ಮನಸ್ಸಿನಲ್ಲಿ ನಿರಂತರ ಆತಂಕ ಹಾಗೂ ಗೊಂದಲ ಉಂಟುಮಾಡಿದರೆ ಅದನ್ನು ‘ರಿಲೇಷನ್‌ಶಿಪ್ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್’ (Relationship OCD ಅಥವಾ ROCD) ಎಂದು ಕರೆಯಲಾಗುತ್ತದೆ. ಇದು ಮಾನಸಿಕ ಆರೋಗ್ಯಕ್ಕೆ (Mental Health) ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು, ಸಂಬಂಧಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾದರೆ ಏನಿದು ರಿಲೇಷನ್‌ಶಿಪ್ ಒಸಿಡಿ, ಈ ರೀತಿ ಸಮಸ್ಯೆಯನ್ನು ನಿಯಂತ್ರಿಸಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಿಲೇಷನ್‌ಶಿಪ್ ಒಸಿಡಿ ಎಂದರೇನು?

ಸಾಮಾನ್ಯವಾಗಿ ರಿಲೇಷನ್‌ಶಿಪ್ ಒಸಿಡಿ ಇರುವ ವ್ಯಕ್ತಿಗೆ ತನ್ನ ಸಂಗಾತಿಯ ಬಗ್ಗೆ ನಿರಂತರ ಅನುಮಾನಗಳು ಕಾಡುತ್ತವೆ. “ನನ್ನ ಸಂಗಾತಿ ನನಗೆ ಸರಿಯಾದ ವ್ಯಕ್ತಿಯೇ?”, “ಅವರು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾರೆಯೇ?”, “ಅವರು ನನಗೆ ಮೋಸ ಮಾಡುತ್ತಿದ್ದಾರೆಯೇ?” ಎಂಬ ಪ್ರಶ್ನೆಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿರುತ್ತವೆ. ಈ ರೀತಿಯ ಆಲೋಚನೆಗಳು ವ್ಯಕ್ತಿಯ ಮಾನಸಿಕ ಶಾಂತಿಯನ್ನು ಹಾಳು ಮಾಡಬಹುದು ಇದನ್ನೇ ರಿಲೇಷನ್‌ಶಿಪ್ ಒಸಿಡಿ ಎಂದು ಕರೆಯಲಾಗುತ್ತದೆ.

ರಿಲೇಷನ್‌ಶಿಪ್ ಒಸಿಡಿಯ ಲಕ್ಷಣಗಳು ಹೇಗಿರುತ್ತದೆ?

  • ಸಂಗಾತಿಯ ಫೋನ್ ಅಥವಾ ವೈಯಕ್ತಿಕ ವಿಚಾರಗಳನ್ನು ಪದೇ ಪದೇ ಪರಿಶೀಲಿಸುವುದು
  • ಸಂಗಾತಿಯ ಸಣ್ಣ ತಪ್ಪುಗಳೇ ದೊಡ್ಡದಾಗಿ ಕಾಣುವುದು
  • ಸಂಬಂಧದಲ್ಲಿ ಪರಿಪೂರ್ಣತೆ ಹುಡುಕುವುದು
  • ಸಂಗಾತಿಯಿಂದ ನಿರಂತರ ಭರವಸೆಯನ್ನು ಆಶಿಸುವುದು
  • ಇತರರ ಸಂಬಂಧಗಳೊಂದಿಗೆ ತಮ್ಮ ಸಂಬಂಧವನ್ನು ಹೋಲಿಕೆ ಮಾಡುವುದು
  • “ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾರೆಯೇ?” ಎಂಬ ಅನುಮಾನದಲ್ಲಿ ಬದುಕುವುದು ಈ ರೀತಿಯ ವರ್ತನೆಗಳು ಸಂಬಂಧದಲ್ಲಿ ಒತ್ತಡ ಮತ್ತು ಅಂತರ ಹೆಚ್ಚಿಸಬಹುದು.

ಯಾವಾಗ ಅನುಮಾನ ನಿಜವಾಗಿರಬಹುದು?

ಕೆಲವೊಮ್ಮೆ ಸಂಗಾತಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ಅನುಮಾನಗಳು ಸಹಜವಾಗಿರಬಹುದು. ಉದಾಹರಣೆಗೆ, ಸಂಗಾತಿ ಹೆಚ್ಚು ರಹಸ್ಯವಾಗಿ ಮಾತನಾಡಲು ಆರಂಭಿಸಿದರೆ, ಮಾತುಕತೆ ಕಡಿಮೆ ಮಾಡಿದರೆ ಅಥವಾ ವರ್ತನೆ ಬದಲಾಗಿದೆಯೆಂದು ಕಂಡುಬಂದರೆ ಸಂಬಂಧದಲ್ಲಿ ಸಮಸ್ಯೆ ಇರಬಹುದೆಂಬ ಸೂಚನೆಯಾಗಿರಬಹುದು.

ರಿಲೇಷನ್‌ಶಿಪ್ ಒಸಿಡಿಯನ್ನು ಹೇಗೆ ನಿಯಂತ್ರಿಸಬಹುದು?

ತಮ್ಮ ಭಾವನೆಗಳನ್ನು ಮನಸ್ಸಿನೊಳಗೆ ಇಟ್ಟುಕೊಳ್ಳುವುದಕ್ಕಿಂತ ಸಂಗಾತಿಯೊಂದಿಗೆ ನೇರವಾಗಿ ಮಾತನಾಡುವುದು ಮುಖ್ಯ. ಅನುಮಾನಗಳು ಹೆಚ್ಚಾದರೆ ವಿಶ್ವಾಸಾರ್ಹ ವ್ಯಕ್ತಿ ಅಥವಾ ಮನೋವೈದ್ಯರ ಸಲಹೆ ಪಡೆಯಬಹುದು. ಧ್ಯಾನ, ಯೋಗ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವ ಚಟುವಟಿಕೆಗಳು ಸಹ ಸಹಾಯಕರಾಗುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us